অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸದಸ್ಯತ್ವದ ಅವಧಿ,ಸಮಿತಿಯ ಸಭೆ

ಸದಸ್ಯತ್ವದ ಅವಧಿ,ಸಮಿತಿಯ ಸಭೆ

ಗ್ರಾಮ ಸಭೆಯಿಂದ ಆಯ್ಕೆಯಾದ 15 ಸದಸ್ಯರ ಪೈಕಿ 1/3 ಭಾಗ ಲಾಟರಿ ಎತ್ತುವುದರ ಮೂಲಕ ಮೊದಲನೇ ವರ್ಷದ ಅಂತ್ಯದಲ್ಲಿ ನಿವೃತ್ತರಾಗತಕ್ಕದ್ದು. ಅವರ ಸ್ಥಾನಕ್ಕೆ ಗ್ರಾಮ ಸಭೆಯಿಂದ 5 ಜನ ಹೊಸ ಸದಸ್ಯರ ಆಯ್ಕೆಯಾಗತಕ್ಕದ್ದು. ಹೀಗೆಯೇ 2 ಮತ್ತು 3ನೇ ವರ್ಷಾಂತ್ಯಕ್ಕೆ ಉಳಿದ 5+5 ಸದಸ್ಯರು ಲಾಟರಿ ಮೂಲಕ ನಿರ್ಣಯಿಸಿ ನಿವೃತ್ತರಾಗತಕ್ಕದ್ದು. ಮತ್ತವರ ಸ್ಥಾನಕ್ಕೆ ಹೊಸ ಸದಸ್ಯರ ಆಯ್ಕೆ  ಗ್ರಾಮ ಸಭೆ ಮುಖಾಂತರ ಆಯ್ಕೆಯಾಗತಕ್ಕದ್ದು. ಯಾವ ಮೀಸಲಾತಿ ಸದಸ್ಯರು ನಿವೃತ್ತರಾಗಿರುತ್ತಾರೋ ಅದೇ ಮೀಸಲಾತಿ ಸದಸ್ಯರು ಗ್ರಾಮ ಸಭೆಯಿಂದ ಆಯ್ಕೆಯಾಗತಕ್ಕದ್ದು. ನಿವೃತ್ತರಾದವರನ್ನು ಮರು ಆಯ್ಕೆ ಮಾಡುವ ವಿವೇಚನೆ ಗ್ರಾಮ ಸಭೆಗಿರುತ್ತದೆ. ಆದರೆ ಗ್ರಾಮದಲ್ಲಿರುವ ಉಳಿದ ಎಲ್ಲಾ ಅರ್ಹವ್ಯಕ್ತಿಗಳಿಗೂ ಸಮಿತಿಯಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸುವ ಉದ್ದೇವನ್ನು ಗ್ರಾಮ ಸಭೆಯು ಗಮನದಲ್ಲಿಡಬೇಕು. ಪ್ರತಿ ವರ್ಷ 1/3 ಭಾಗದ ಸದಸ್ಯರ ನಿವೃತ್ತಿ ಮತ್ತು ಆಯ್ಕೆ ಪುನರಾವರ್ತನೆಯಾಗತಕ್ಕದು. ನಿವೃತ್ತಿಯಾದ ಸದಸ್ಯರು ಮೇಲ್ಮಟ್ಟದ ಸಮಿತಿಗಳಿಗೆ ಪ್ರಾತಿನಿಧಿತ್ವದ ನೇಮಕಾತಿಯಾಗಿದ್ದರೆ ಆ ಸ್ಥಾನಕ್ಕೆ ಹೊಸದಾಗಿ ಆಯ್ಕೆಯಾದ ಸದಸ್ಯರು ಬದಲಿ ನೇಮವಾಗತಕ್ಕದ್ದು. ಪ್ರತಿ ವರ್ಷ ಸದಸ್ಯರ ನಿವೃತ್ತಿ ಮತ್ತು ಆಯ್ಕೆ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ  ಕಾರ್ಯದರ್ಶಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಜಂಟಿಯಾಗಿ ಮಾಡತಕ್ಕದ್ದು.

ಸಮಿತಿಯ ಸಭೆ:

 

ಪ್ರತಿ ತಿಂಗಳಿಗೊಮ್ಮೆ ಕಡ್ಡಾಯವಾಗಿ ಮೊದಲನೆ ಸೋಮವಾರದಂದು  ಅಪರಾಹ್ನ ಸಮಿತಿಯು ಗ್ರಾಮ ಪಂಚಾಯಿತಿ ಕಟ್ಟಡ/ ಉಪಕೇಂದ್ರ/ ಅಂಗನವಾಡಿ ಕೇಂದ್ರ/ ಶಾಲಾಕೊಠಡಿ/ ಸಮುದಾಯ ಭವನ ಇವುಗಳಲ್ಲಿ ಅನುಕೂಲವಿರುವ ಯಾವುದಾದರೂ ಒಂದು ಸ್ಥಳದಲ್ಲಿ ನಿಯಮಿತವಾಗಿ ಸಭೆಸೇರಬೇಕು. ತುರ್ತು ಸಂದರ್ಭದಲ್ಲಿ ವಿಶೇಷ ಸಭೆ ಕರೆಯಬಹುದಾಗಿರುತ್ತದೆ.

 

ಸಾಮಾನ್ಯ ಸಭೆಯ ಬಗ್ಗೆ 3 ಪೂರ್ಣ ದಿವಸಗಳ ಮುಂಚೆ ಕಾರ್ಯಸೂಚಿಯೊಡನೆ ನೋಟೀಸನ್ನು ಸಮಿತಿಯ ಕಾರ್ಯದರ್ಶಿ ನೀಡತಕ್ಕದ್ದು. ವಿಶೇಷ ಸಭೆಯನ್ನು ನೋಟೀಸ್ ನೀಡಿ 24 ಗಂಟೆಯೊಳಗಾಗಿ ಕರೆಯಬಹುದಾಗಿರುತ್ತದೆ.

 

ಸಭೆ ನಡೆಸಲು ಸದಸ್ಯರ ಕೋರಂ ಒಟ್ಟು ಸದಸ್ಯರ ಸಂಖ್ಯೆ 1/3ರಷ್ಟು ಆಗಿರತಕ್ಕದ್ದು. ಹಾಗೂ ಭಾಗವಹಿಸಿದ ಸದಸ್ಯರಲ್ಲಿ ಕನಿಷ್ಠ ಪಕ್ಷ 1/3ರಷ್ಟು ಮಹಿಳಾ ಸದಸ್ಯರು ಹಾಜರಿರತಕ್ಕದ್ದು.

 

ಸಭೆ ಪ್ರಾರಂಭಿಸಲಿ ಕೋರಂ ಇರದಿದ್ದರೆ ಸಭೆಯ ಅಧ್ಯಕ್ಷರು 30 ನಿಮಿಷಗಳವರೆಗೆ ಕಾಯತಕ್ಕದು. ನಂತರದಲ್ಲೂ ಕೋರಂ ಇಲ್ಲದಿದ್ದರೆ ಸಭೆಯನ್ನು  ಆ ತಿಂಗಳಲ್ಲೇ ಮುಂದಿನ ಅನುಕೂಲಕರ ದಿನಾಂಕಕ್ಕೆ ಮುಂದೂಡಿ ಹೊಸ ನೋಟೀಸ್ ನೀಡತಕ್ಕದ್ದು.

 

ಸಭೆಯ ದಿನದಂದು ಯಾವುದೇ ಕಾರಣಕ್ಕೆ ಅಧ್ಯಕ್ಷರು ಗೈರುಹಾಜರಾಗಿದ್ದರೆ, ಕೋರಂ ಇದ್ದರೆ ಸಭೆಯಲ್ಲಿರುವ  ಸರ್ವಸಮ್ಮತವಾದ ಸದಸ್ಯರಲ್ಲೊಬ್ಬರು ಅಧ್ಯಕ್ಷತೆ ವಹಿಸಿ ಸಭೆ ನಡೆಸಬಹುದಾಗಿರುತ್ತದೆ.

 

ಸಭೆಯ ನಡವಳಿಕೆ  ಮತ್ತು ನಿರ್ಣಯಗಳನ್ನು ಅಧಿಕೃತ ಪುಸ್ತಕದಲ್ಲಿ ದಾಖಲಿಸಿ ಸದಸ್ಯರ ಸಹಿ ಪಡೆದು ಪ್ರತಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಗೆ ಸಲ್ಲಿಸುವ ಹಾಗೂ ದಾಖಲೆಗಳನ್ನು ಸುಸ್ಥಿತಿಯಲ್ಲಿಡುವ ಜವಾಬ್ದಾರಿ ಕಾರ್ಯದಶೀಯದ್ದಾಗಿರುತ್ತದೆ.

 

ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ಬ್ಯಾಂಕ್ ಖಾತೆಯು ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಯ ಜಂಟಿ ಖಾತೆಯಲ್ಲಿ ಇರಬೇಕು.

 

ಪ್ರತಿ 3 ತಿಂಗಳಿಗೊಮ್ಮೆ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ/ ಗ್ರಾಮ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಯು ಗ್ರಾಮ ಪಂಚಾಯಿತಿಯ ಸೌಕರ್ಯ ಸ್ಥಾಯಿ ಸಮಿತಿಗೆ ಹಣಕಾಸಿನ ಹಾಗೂ ಕಾರ್ಯಕ್ರಮದ ವರದಿ ಸಲ್ಲಿಸಬೇಕು.

 

. ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ/ ಗ್ರಾಮ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಯು ಗ್ರಾಮ ಪಂಚಾಯ್ತಿಯ ಗ್ರಾಮ ಸಭೆಗೆ ಉತ್ತರದಾಯಿಯಾಗಿರಬೇಕು.

 

ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ 1993 ಪ್ರಕರÀಣ61-ಎ ಪ್ರಕಾರ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ/ ಗ್ರಾಮ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಯು, ಗ್ರಾಮ ಪಂಚಾಯತಿ “ಸೌಕರ್ಯ ಸಮಿತಿ”ಯ “ಉಪಸಮಿತಿ” ಸ್ಥಾನಮಾನ ಹೊಂದಿರುತ್ತದೆ.

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate