ನಮ್ಮ ದೇಶದ ಎಲ್ಲ ನಾಗರೀಕರಿಗೂ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ಹಾಗೂ ಮಾತೃ ಮರಣ, ಶಿಶು ಮರಣ ದರವನ್ನು ತಗ್ಗಿಸುವ ಉದ್ದೇಶವನ್ನಿಟ್ಟುಕೊಂಡು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್.ಆರ್.ಎಚ್.ಎಂ.)ನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ ಈ ಗುರಿಯನ್ನು ಸಾಧಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಯಾವುದೇ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ ಅದರಲ್ಲಿ ಜನರ ಸಹಭಾಗಿತ್ವ ಇರಲೇಬೇಕು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯ ಅಡಿಯಲ್ಲಿ ಗ್ರಾಮಮಟ್ಟದಲ್ಲಿ ‘ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ’ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಗಳನ್ನು ರಚಿಸಲಾಗಿದೆ. ಈ ಸಮಿತಿಗಳ ಸದಸ್ಯರ ಸಾಮಥ್ರ್ಯ ಅಭಿವೃದ್ಧಿಗಾಗಿ ತರಬೇತಿಗಳನ್ನು ನೀಡಲಾಗುತ್ತಿದೆ. ಈ ತರಬೇತಿಗಳಿಗೆ ಸಹಾಯವಾಗುವಂತೆ ಕೈಪಿಡಿಗಳನ್ನು ರಚಿಸಲಾಗಿದೆ. ಜೊತೆಗೆ ತರಬೇತಿ ನೀಡುವುದರ ಜೊತೆಗೆ ಪರಿಣಿತ ಸಂಪನ್ಮೂಲ ವ್ಯಕ್ತಿಗಳು ನಂತರದ ಮಾಸಿಕ ಸಭೆಗಳಲ್ಲಿ ಭಾಗವಹಿಸಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳಿಗೆ ಅಗತ್ಯವಾದ ಮಾರ್ಗದರ್ಶನ ಮಾಡಲಿದ್ದಾರೆ.
ನಮ್ಮ ರಾಜ್ಯದಲ್ಲಿ ಸುಮಾರು 28,000 ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳಿವೆ. ಈ ಸಮಿತಿಗಳ ಪ್ರತಿಯೊಬ್ಬ ಸದಸ್ಯರಿಗೂ ವಿತರಿಸುವ ಉದ್ದೇಶದಿಂದ ಈ ಕಿರು ಪುಸ್ತಕವನ್ನು ರಚಿಸಲಾಗಿದೆ. ಈ ಪುಸ್ತಕದಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಗಳ ಹಾಗೂ ಆರೋಗ್ಯ ರಕ್ಷಾ ಸಮಿತಿಗಳ ರಚನೆ, ಸದಸ್ಯರ ಹಕ್ಕು ಹಾಗೂ ಕರ್ತವ್ಯಗಳ ವಿವರಗಳ ಜೊತೆಗೆ ಆರೋಗ್ಯ ಎಂದರೇನು? ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗೂ ಆರೋಗ್ಯ ಇಲಾಖೆಯ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡಲಾಗಿದೆ. ಈ ಪುಸ್ತಕದ ಮಾಹಿತಿಗಳನ್ನು ಅಧ್ಯಯನ ಮಾಡಿ ಸದುಪಯೋಗಪಡಿಸಿಕೊಂಡಲ್ಲಿ ಗ್ರಾಮ ಮಟ್ಟದ ಆರೋಗ್ಯ ಪರಿಸ್ಥಿತಿ ಖಂಡಿತಾ ಉತ್ತಮಗೊಳ್ಳಲಿದೆ.
ಈ ಕೈಪಿಡಿಯನ್ನು ರಚಿಸಲು ಭಾರತ ಜ್ಞಾನ ವಿಜ್ಞಾನ ಸಮಿತಿಯ ಡಾ|| ಪ್ರಕಾಶ್ ರಾವ್, ಕ.ಹಿ. ಗಿರೀಶ್ ಹಾಗೂ ಈ. ಬಸವರಾಜು ಹಾಗೂ ಇಲಾಖೆಯ ಉಪನಿರ್ದೇಶಕರಾದ ಡಾ|| ನಾರಾಯಣ್ ಇವರುಗಳು ಸಹಕರಿಸಿರುತ್ತಾರೆ. ಇವರೊಂದಿಗೆ ಇಲಾಖೆಯ ಇತರ ಅಧಿಕಾರಿಗಳೂ ಸಹ ನೆರವಾಗಿರುತ್ತಾರೆ. ಇವರೆಲ್ಲರಿಗೂ ನಮ್ಮ ಅಭಿನಂದನೆಗಳು.
ಈ ಪುಸ್ತಕ ರಾಜ್ಯದ ಮೂಲೆ ಮೂಲೆಗೂ ತಲುಪಿ ಜನರ ಜನಾರೋಗ್ಯ ಪರಿಸ್ಥಿತಿ ಉತ್ತಮಗೊಳ್ಳಲಿ ಎಂದು ಆಶಿಸುತ್ತೇವೆ.
ಇ.ವಿ.ರಮಣ ರೆಡ್ಡಿ, ಭಾ.ಆ.ಸೇ. ಡಿ.ಎನ್.ನಾಯಕ್, ಭಾ.ಆ.ಸೇ. ಎಸ್.ಸೆಲ್ವ ಕುಮಾರ್, ಭಾ.ಆ.ಸೇ.
ಕಾರ್ಯದರ್ಶಿ ಆಯುಕ್ತರು ಅಭಿಯಾನ ನಿರ್ದೇಶಕರು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ
ಕೊನೆಯ ಮಾರ್ಪಾಟು : 11/15/2019