ನಾಗರಿಕ ಆರೋಗ್ಯ ಸನ್ನದು ಎಂದರೇನು? ಅದರಲ್ಲಿ ಏನಿರುತ್ತದೆ?
ನಾಗರಿಕ ಆರೋಗ್ಯ ಸನ್ನದ್ದು ಎಂದರೆ ಸರ್ಕಾರವು ಗ್ರಾಮದ ಜನರಿಗೆ ನೀಡುವ ಭರವಸೆ ಅಥವಾ ಪ್ರಮಾಣ ವಚನ. ಇದನ್ನು ಯೋಜನಾ ವಿಭಾಗ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ, ಬೆಂಗಳೂರು ಇವರಿಂದ ತಯಾರಿಸಲ್ಪಟ್ಟಿದೆ. 2002ರಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಯ ಡಿ.ಎಚ್.ಓ ಗಳಿಗೆ ಕಳುಹಿಸಲಾಗಿದ್ದು, ಎಲ್ಲಾ ಕೇಂದ್ರಗಳಲ್ಲಿ ಈ ನಾಗರಿಕ ಸನ್ನದನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ರದರ್ಶಿಸಬೇಕೆಂದು ಆರೋಗ್ಯ ಇಲಾಖೆಯು ಆದೇಶಿಸಿದೆ.
ಹೇಳಿಕೆ
1. ಶುಚಿತ್ವ ಮತ್ತು ಆಸಪತ್ರೆ ಪರಿಸರದಲ್ಲಿ ಒಳ್ಳೆಯ ಆರೋಗ್ಯ ಸೇವೆ
2. ಆಸ್ಪತ್ರೆಯು ಒಂದು ಕೈಲಾಸವಿದ್ದಂತೆ, ಇದನ್ನು ಸ್ವಚ್ಛವಾಗಿಡಿ.
ನಾಗರಿಕ ನಮ್ಮ ಪ್ರಮಾಣಗಳು
1. ನಾವು ಆರೋಗ್ಯಕರ ಮತ್ತು ಸ್ವಚ್ಚ ವಾತಾವರಣವನ್ನು ಒದಗಿಸುತ್ತೇವೆ
2. ಮಹಿಳೆಯರು, ಮಕ್ಕಳು ಮತ್ತು ವಯಸ್ಸಾದ ನಾಗರಿಕರಿಗೆ ಮೊದಲ ಆದ್ಯತೆಯನ್ನು ನೀಡುತ್ತೇವೆ.
3. ವೈದ್ಯರ ಸಲಹೆಯ ಮೇರೆಗೆ ಔಷಧಿಗಳನ್ನು ಉಚಿತವಾಗಿ ಕೊಡುತ್ತೇವೆ ಮತ್ತು ಔಷಧಿಗಳು ನಮ್ಮಲ್ಲಿ ಲಭ್ಯವಿರುತ್ತದೆ.
4. ತುರ್ತುಪರಿಸ್ಥಿಅತಿಯ ಸಂದರ್ಭದಲ್ಲಿ ದಿನದ ಪೂರ್ತಿ ಸಮಯವನ್ನು ಆರೋಗ್ಯ ಸೇವೆಗೆ ಕೊಡಲಾಗುವುದು
5. ನಾವು ನಮ್ಮ ಆರೋಗ್ಯ ಸೇವೆಯಲ್ಲು ಯಾವುದೇ ರೀತಿಯ ಭೇದ- ಭಾವ ಮಾಡುವುದಿಲ್ಲ
6. ನಾಗರಿಕ ಮಾಹಿತಿಗಾಗಿ ನಾವು ತೆಗೆದುಕೂಳ್ಳುವ ಶುಲ್ಕಗಳ ವಿವರಗಳನ್ನು ಸೂಚನಾ ¥sóÀಲಕದಲ್ಲಿ ಬರೆಯಲಾಗುವುದು.
7. ಸೂಚನಾ ¥sóÀಲಕದಲ್ಲಿ ತೋರಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ತೆಗೆದುಕೊಳ್ಳುವುದಿಲ್ಲ
8. ನಿಮ್ಮಿಂದ ತೆಗೆದುಕೊಂಡ ಹಣಕ್ಕೆ ನಾವು ರಸೀದಿ ಕೊಡುತ್ತೇವೆ.
9. ನಾವು ರೋಗಿಯ ಅಭ್ಯುದಯಕ್ಕಾಗಿ ದುಡಿಯುತ್ತೇವೆ.
10. ಎಲ್ಲಾ ರೋಗಿಗಳನ್ನು ಕರುಣೆಯಿಂದ ನೋಡಿಕೊಳ್ಳುತ್ತೇವೆ.
11. ಆಸ್ಪತ್ರೆಯಲ್ಲಿ ದೊರೆಯುವ ಎಲ್ಲಾ ಉಚಿತ ಸೇವೆಗಳ ವಿವರಗಳನ್ನು ಸೂಚನಾ ¥sóÀಲಕದಲ್ಲಿ ಹಾಕಲಾಗುವುದು
12. ಕೆಲವು ನಿರ್ಧಿಷ್ಟ ದಿನಗಳನ್ನು ಲಸಿಕೆಗಾಗಿ, ಹೆರಿಗೆ ಪೂರ್ವ ಸೇವೆಗಾಗಿ ಮೀಸಲ್ಪಟ್ಟಿರುತ್ತೇವೆ ಮತ್ತು ಬೇರೆ ಕಾರ್ಯಕ್ರಮಗಳಿಗೂ ಹೀಗೆ ದಿನಗಳನ್ನು ಮೀಸಲ್ಪಟ್ಟಿರುತ್ತೇವೆ.
13. ದೂರು ಪೆಟ್ಟಿಗೆಯನ್ನು ನಮ್ಮ ಅಧಿಕಾರಿಗಳು ಪ್ರತಿ ಸೋಮವಾರದಂದು ತೆರೆದು ದೂರುಗಳ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ
14. ದೂರು ದಾಖಲಾತಿ ಪುಸ್ತಕವನ್ನು ಇಡಲಾಗಿದ್ದು ಪ್ರತಿಯೊಂದು ದೂರನ್ನೂ ದಾಖಲಿಸಲಾಗುತ್ತದೆ ಹಾಗೂ ಕ್ರಮ ತೆಗೆದುಕೊಳ್ಳಲಾಗುತ್ತದೆ ಮತ್ತು ನಾಗರಿಕರು ಇದನ್ನು ಪರಿಶೀಲಿಸಬಹುದು.
15. ತುರ್ತು ದೂರುಗಳನ್ನು ಎಲ್ಲಾ ದಿನಗಳಲ್ಲಿಯೂ ಆಡಳಿತಾಧಿಕಾರಿಗಳಿಗೆ ಸಲ್ಲಿಸಬಹುದು. ನಿಮಗೆ ನ್ಯಾಯಸಿಗಲಿಲ್ಲವಾದಲ್ಲಿ ನೀವು ಮೇಲ್ಪಟ್ಟ ಅಧಿಕಾರಿಗಳಿಗೆ ದೂರುಸಲ್ಲಿಸಬಹುದು. ಹಿರಿಯ ಅಧಿಕಾರಿ, ಡಿ.ಎಚ್.ಓ ಅಥವಾ ಜಿಲ್ಲಾ ಚಿಕಿತ್ಸಾಕಾಧಿಕಾರಿ ಅವರ ದೂರವಾಣಿ ಸಂಖ್ಯೆಗಳು.
ಕೊನೆಯ ಮಾರ್ಪಾಟು : 7/1/2020