ಜನನಿ ಸುರಕ್ಷಾ ಯೋಜನೆಯ ಉದ್ದೇಶ ಮತ್ತು ಪಡೆಯಲು ಇರುವ ಅರ್ಹತೆಗಳೇನು?
ಉತ್ತರ : ಈ ಯೋಜನೆಯನ್ನು ಬಡತನ ರೇಖೆಗಿಂತ ಕೆಳಗಿನ ಆದಾಯವಿರುವ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳ ತಾಯಿ ಮತ್ತು ಮಕ್ಕಳ ಮರಣವನ್ನು ತಗ್ಗಿಸಲು ಹಮ್ಮಿಕೊಳ್ಳಲಾಗಿದೆ.
ಯೋಜನೆಯ ಫಲಾನುಭವಿಗಳಿಗೆ ಇರಬೇಕಾದ ಅರ್ಹತೆ:
ರಾಷ್ಟ್ರೀಯ ಮಾತೃತ್ವ ಹಿತದೃಷ್ಠಿಯ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಹಾಗೂ ನಗರ ಪ್ರದೇಶಗಳ ಫಲಾನುಭವಿಗಳಿಗೆ ಈ ಕೆಳಗಿನಂತೆ ನಗದು ಸಹಾಯವನ್ನು ನೀಡಲಾಗುವುದು.
ಗ್ರಾಮೀಣ ಪ್ರದೇಶಗಳ ಫಲಾನುಭವಿಗಳಿಗೆ
ರೂ.
ನಗರ ಪ್ರದೇಶಗಳ
ಫಲಾನುಭವಿಗಳಿಗೆ
ರೂ.
ಮನೆಯಲ್ಲೇ ನಡೆಯುವ ಮೊದಲ ಎರಡು ಹೆರಿಗೆಗಳಿಗೆ (ಪ್ರತಿ ಹೆರಿಗೆಗೆ)
-ಸಜೀವ ಜನನ ಆಗಿರಬೇಕು.
500/-
500/-
ಆರೋಗ್ಯ ಸಂಸ್ಥೆಯಲ್ಲಿ ನಡೆಯುವ ಮೊದಲ ಎರಡು ಹೆರಿಗೆಗಳಿಗೆ (ಪ್ರತಿ ಹೆರಿಗೆಗೆ)
-ಸಜೀವ ಜನನ ಆಗಿರಬೇಕು.
700/-
600/-
ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಆದಲ್ಲಿ (ಪ್ರತಿ ಪ್ರಕರಣಕ್ಕೆ)
1500/-
1500/-
ಈ ಸೌಲಭ್ಯ ಪಡೆಯಲು ಗರ್ಭಿಣಿಯರು ಆರೋಗ್ಯ ಕಾರ್ಯಕರ್ತೆಯರಲ್ಲಿ ನೋಂದಾಯಿಸಿಕೊಳ್ಳಬೇಕು. ಕಡೇ ಪಕ್ಷ ಮೂರು ಬಾರಿ ಪರೀಕ್ಷೆ ಮಾಡಿಸಿಕೊಂಡಿರಬೇಕು. ಹೆರಿಗೆಗೆ ಮೊದಲ ಎರಡು ಬಾರಿ ಧನುರ್ವಾಯು ಲಸಿಕೆ ಮತ್ತು ಕಬ್ಬಿಣಾಂಶ ಮಾತ್ರೆಗಳನ್ನು ಪಡೆದುಕೊಂಡಿರಬೇಕು.
ಮೂಲ : ಕುಟುಂಬ ವಾರ್ತೆ
ಕೊನೆಯ ಮಾರ್ಪಾಟು : 1/28/2020
ಜನನಿ -ಶಿಶು ಸುರಕ್ಷಾ ಕಾರ್ಯಕ್ರಮ ಕುರಿತಾದ ಮಾಹಿತಿ ಇಲ್ಲಿ ...