অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆರೋಗ್ಯ ರಕ್ಷಾ ಸಮಿತಿ

.  ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯು, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಯೋಜನಾ ಮತ್ತು ಮಾನಿಟರಿಂಗ್ ಸಮಿತಿಯ ಉಪ ಸಮಿತಿಯಾಗಿ ಇನ್ನು ಮುಂದೆ ಕೆಲಸ ನಿರ್ವಹಿಸತಕ್ಕದ್ದು.

ರಚನೆ:

ಪ್ರಾಥಮಿಕ ಆರೋಗ್ಯ ಕೇಂದ್ರದ “ಆರೋಗ್ಯ ರಕ್ಷಾ ಸಮಿತಿ” ಮುಂದೆ ನಮೂದಿಸಿರುವ ಸದಸ್ಯರುಗಳನ್ನು ಹೊಂದಿರುವಂತೆ ಪುನರ್ರಚಿಸತಕ್ಕದ್ದು.

 

1.            ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ಥಾನದ ಗ್ರಾಮ ಪಂಚಾಯಿತಿ ಅಧ್ಯಕ್ಷರು- ಆಧ್ಯಕ್ಷರು

2.            ಸ್ಥಳೀಯ ಗ್ರಾಮ ಆರೋಗ್ಯ ಯೋಜನಾ ಮತ್ತು ಮಾನಿಟರಿಂಗ್ ಸಮಿತಿಯಿಂದ ಆಯ್ದ ಪರಿಶಿಷ್ಟ ಜಾತಿ/ ಪಂಗಡದ ಮಹಿಳಾ ಸದಸ್ಯೆ- ಸದಸ್ಯರು

3.            ಪಕ್ಕದ ಇನ್ನೊಂದು ಗ್ರಾಮ ಆರೋಗ್ಯ ಯೋಜನಾ ಮತ್ತು ಮಾನಿಟರಿಂಗ್ ಸಮಿತಿಯಿಂದ ಆಯ್ದ ಹಿಂದುಳಿದ / ಅಲ್ಪಸಂಖ್ಯಾತ  ಮಹಿಳಾ ಸದಸ್ಯೆ- ಸದಸ್ಯರು

4.            ಸ್ಥಳೀಯ ಗ್ರಾಮದ ಅಥವಾ ಪ್ರಾ.ಆ.ಕೇಂದ್ರದ ವ್ಯಾಪ್ತಿಯಲ್ಲಿರುವ ಇತರೇ ಗ್ರಾಮದ ಮತ್ತು ಯಾವುದೇ ಆರೋಗ್ಯ ಯೋಜನಾ ಮತ್ತು ಮಾನಿಟರಿಂಗ್ ಸಮಿತಿಯಲ್ಲಿ ಸದಸ್ಯರಲ್ಲದ, ಆದರೆ ತಾಯಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರುವ ಪ್ರಗತಿಪರ  ದೃಷ್ಟಿಕೋನವಿರುವ ಪುರುಷ ಅಥವಾ ಮಹಿಳೆ ಸದಸ್ಯರು

5.            ಸ್ಥಳೀಯ ಎನ್.ಜಿ.ಒ. ಮಹಿಳಾ ಪ್ರತಿನಿಧಿ ಸದಸ್ಯರು

6.            ಅಂಗನವಾಡಿ ಮೇಲ್ವಿಚಾರಕಿ ಸದಸ್ಯರು

7.            ಪ್ರಾಥಮಿಕ ಆರೋಗ್ಯ ಕೇಂದ್ರ ಇರುವ ಗ್ರಾಮದ, ಪ್ರಾಥಮಿಕ/ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು-ಸದಸ್ಯರು

8.            ಪ್ರಾಥಮಿಕ ಆರೋಗ್ಯ ಕೇಂದ್ರದ, ಕೇಂದ್ರ ಸ್ಥಾನದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಸದಸ್ಯರು

9.            ಪ್ರಾಥಮಿಕ ಆರೋಗ್ಯ ಕೇಂದ್ರದ, ಆಡಳಿತ ವೈದ್ಯಾಧಿಕಾರಿ- ಸದಸ್ಯ ಕಾರ್ಯದರ್ಶಿ

 

ಆರೋಗ್ಯ ರಕ್ಷಾ ಸಮಿತಿಯ ಆಡಳಿತ ಜವಾಬ್ದಾರಿಗಳು:

ನಾಗರಿಕ ಆರೋಗ್ಯ ಹಕ್ಕುಗಳ ಸನ್ನದನ್ನು ಸಿದ್ದಪಡಿಸಿ ಆರೋಗ್ಯ ಕೇಂದ್ರದಲ್ಲಿ ಫಲಕದ ಮೂಲಕ ಪ್ರದರ್ಶಿಸಬೇಕು.

ಆರೋಗ್ಯ ಕೇಂದ್ರದ ಸರ್ವತೋಮುಖ ಅಭಿವೃದ್ಧಿಗೆ ವಾರ್ಷಿಕ ನೀಲ ನಕ್ಷೆಯನ್ನು ಸಿದ್ದಪಡಿಸಬೇಕು.

 

ಆರೋಗ್ಯ  ಕೇಂದ್ರದ  ಒಳ ಮತ್ತು ಹೊರ ಆವರಣವನ್ನು ಶುಚಿಯಾಗಿಡುವ ಎಲ್ಲಾ ಕೆಲಸಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು.

ಆರೋಗ್ಯ ಕೇಂದ್ರದ  ಸುತ್ತಲೂ ರಕ್ಷಣಾ ಗೋಡೆಯನ್ನು ನಿರ್ಮಿಸುವಲ್ಲಿ ಅಗತ್ಯ ಸಂಪನ್ಮೂಲ ಕ್ರೋಡೀಕರಿಸಿ ನಿರ್ಮಾಣ ಕಾರ್ಯ ಕೈಗೊಳ್ಳಬೇಕು.

ಆರೋಗ್ಯ ಕೇಂದ್ರದ ಆಸ್ತಿಯನ್ನು ಮತ್ತು ದಾಖಲೆಗಳನ್ನು ಸಂರಕ್ಷಿಸಲು ಕಾರ್ಯ ಸನ್ನದ್ಧರಾಗಬೇಕು.

ಆರೋಗ್ಯ ಕೇಂದ್ರದ ಆವರಣದಲ್ಲಿ ಸಾಮಾಜಿಕವಾಗಿ ಅರಣ್ಯ ಕಾರ್ಯಕ್ರಮದಡಿಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು. ಇದಕ್ಕಾಗಿ ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳ ಸಹಾಯವನ್ನು ಪಡೆಯಬೇಕು.

ಆರೋಗ್ಯ ಕೇಂದ್ರಕ್ಕೆ ಆಗಮಿಸುವ ರೋಗಿಗಳು ಮತ್ತವರ ಸಂಬಂಧಿಕರಿಗೆ  ಅತ್ಯಾವಶ್ಯಕವಾದ, ಕುಡಿಯುವ ನೀರು, ಶೌಚಾಲಯ, ಮತ್ತು ಕುಳಿತು ವಿಶ್ರಮಿಸಿಕೊಳ್ಳಲು ಅಗತ್ಯ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಮಾಡಬೇಕು.

.ಆರೋಗ್ಯ ಕೇಂದ್ರವನ್ನು ಸುಸ್ಥಿತಿಯಲ್ಲಿಡಲು ಅಗತ್ಯ ದುರಸ್ತಿ ಕೆಲಸಗಳನ್ನು ಸ್ಥಳೀಯ ಇಂಜಿನಿಯರ್‍ರವರ ತಾಂತ್ರಿಕ  ಸಲಹೆ ಪಡೆದು, ಕೈಗೊಳ್ಳಬೇಕು.

. ಆರೋಗ್ಯ ಕೇಂದ್ರದ ಸುಧಾರಣೆ ಮತ್ತು ಮೂಲಭೂತ ಸೌಕರ್ಯಗಳ ನಿರ್ವಹಣೆಗಾಗಿ ಯೋಜನೆ ಮತ್ತು ಕೆಲಸಕ್ಕಾಗಿ ವಾರ್ಷಿಕ ನಿರ್ವಹಣಾ ವೆಚ್ಚ ಮತ್ತು ಮುಕ್ತನಿಧಿಯನ್ನು ಕ್ರಮವರಿತು ಬಳಸಬೇಕು.

ಖರ್ಚು ಮಾಡಲಾದ ಹಣಕ್ಕೆ ಸರಿಯಾದ ರಸೀದಿ ಮತ್ತು ಬಿಲ್‍ಗಳನ್ನು ಪಡೆದು ಕಾಲಕಾಲಕ್ಕೆ ಖರ್ಚಿನ ತಖ್ತೆಯನ್ನು ತಾಲ್ಲೂಕು ಮತ್ತು ಜಿಲ್ಲಾ ಆರೋಗ್ಯ ಸಂಘಕ್ಕೆ ಸಲ್ಲಿಸಬೇಕು.

ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಮತ್ತು ಸೌಲಭ್ಯ ಸುಧಾರಣೆಗೆ, ಕೇಂದ್ರದ ಎಲ್ಲಾ ಸಿಬ್ಬಂದಿಯರು ಉತ್ತಮವಾಗಿ ಕೆಲಸ ನಿರ್ವಹಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಪ್ರತೀ ತಿಂಗಳೂ ಆರೋಗ್ಯ ಕೇಂದ್ರದಲ್ಲಿ ಕ್ಯಾಟರಾಕ್ಟ್ ತಪಾಸನಾ ಶಿಬಿರವನ್ನು ಏರ್ಪಡಿಸಬೇಕು. ಇದಕ್ಕಾಗಿ ನುರಿತ ತಜ್ಞರನ್ನು ಹತ್ತಿರದ ತಾಲ್ಲೂಕು ಆಸ್ಪತ್ರೆ ಅಥವಾ ಖಾಸಗೀ ಚಿಕಿತ್ಸಾಲಯಗಳಿಂದ ಬರಮಾಡಿಕೊಳ್ಳುವುದು.

ಮುಕ್ತನಿಧಿ ಬಳಕೆ ಮಾರ್ಗದರ್ಶನದಂತೆ ನಿಗದಿಪಡಿಸದ ಉದ್ದೇಶಗಳಿಗಾಗಿ ಹಣ ಖರ್ಚು ಮಾಡದಂತೆ ಎಚ್ಚರವಹಿಸಬೇಕು.

ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯು ಇತರ ಸಂಸ್ಥೆಗಳಿಂದ, ಪಂಚಾಯತಿಯಿಂದ, ದಾನಿಗಳಿಂದ ನಗದು ಅಥವಾ ವಸ್ತುಗಳ ರೂಪದಲ್ಲಿ ವಂತಿಗೆ/ದೇಣಿಗೆಯನ್ನು ಸಂಗ್ರಹಿಸಬಹುದು ಮತ್ತು ಅವುಗಳನ್ನು ಸಾರ್ವಜನಿಕ ಆರೋಗ್ಯ ಸುಧಾರಣೆಗಾಗಿ ಬಳಸತಕ್ಕದ್ದು.

ಸಮಿತಿ ಸಭೆ: ಪ್ರತಿ ತಿಂಗಳು 4ನೇ ಶನಿವಾರದ ಅಪರಾಹ್ನ ಕಡ್ಡಾಯವಾಗಿ ಸಭೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಸಬೇಕು.

ಸಭೆಗಾಗಿ ಕಾರ್ಯಸೂಚಿಯನ್ನು  ಮುಂಚಿತವಾಗಿ ಸಿದ್ದಪಡಿಸಿ, ಎಲ್ಲಾ ಸದಸ್ಯರಿಗೂ ಕನಿಷ್ಟ3 ದಿವಸಗಳ ಮುಂಚಿತವಾಗಿ ಸಭಾ ತಿಳಿವಳಿಕೆ ಪತ್ರದೊಡನೆ ನೀಡಿ ಸ್ವೀಕೃತಿಯನ್ನು ಪಡೆದಿರಬೇಕು.

. ಆರೋಗ್ಯ ಕೇಂದ್ರದ ಸಮಸ್ಯೆ, ಅಭಿವೃದ್ಧಿ, ಸ್ಥಳೀಯ ಆರೋಗ್ಯ ಸಮಸ್ಯೆಗಳು, ತಾಯಿ ಮಕ್ಕಳ ಆರೋಗ್ಯದ ಎಲ್ಲಾ ಆಯಾಮಗಳು, ಸಿಬ್ಬಂದಿ ಸಮಸ್ಯೆ, ಸಾರ್ವಜನಿಕರಿಂದ ನಿರೀಕ್ಷಿಸಿರುವ ಸಹಕಾರ, ಇತರೆ ಇಲಾಖೆಗಳ ಸಹಯೋಗ, ಮುಕ್ತನಿಧಿ ಮತ್ತು ನಿರ್ವಹಣಾ ನಿಧಿ ಬಳಕೆ ಹಾಗೂ ಮುಕ್ತ ನಿಧಿ ಖರ್ಚಿನಿಂದ ಕೈಗೊಂಡ ಕೆಲಸಗಳ ಪ್ರಗತಿ ಮುಂತಾದ ಅನೇಕ ವಿಚಾರಗಳಲ್ಲಿ  ಪ್ರಸ್ತುತವಾಗಿರುವ  ಯಾವುದಾದರೂ ವಿಷಯಗಳ ಬಗ್ಗೆ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು.

ಸಭಾ ನಡಾವಳಿಯನ್ನು ದಾಖಲಿಸಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕೇಂದ್ರದ ಆರೋಗ್ಯ ಯೋಜನಾ ಮತ್ತು ಮಾನಿಟರಿಂಗ್ ಸಮಿತಿ, ತಾಲ್ಲೂಕು ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್ ಸಮಿತಿ, ಜಿಲ್ಲಾ ಆರೋಗ್ಯ ಯೋಜನೆ ಮತ್ತು ಮಾನಿಟರಿಂಗ್  ಸಮಿತಿ ಹಾಗೂ ಜಿಲ್ಲಾ ಆರೋಗ್ಯ ಸಂಘಕ್ಕೆ ವರದಿ ಮಾಡುವ ಜನಾಬ್ದಾರಿ ಕಾರ್ಯದರ್ಶಿಗಳದ್ದಾಗಿರುತ್ತದೆ.

. ಖರ್ಚು ವೆಚ್ಚ: ಸಭೆ ನಡೆಸಲು ಅವಶ್ಯವಿರುವ ಕನಿಷ್ಠ ಸಾರಿಗೆ  ಮತ್ತು ಸಾದಿಲ್ವಾರು ವೆಚ್ಚವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಕ್ತ ನಿಧಿಯಿಂದ ಭರಿಸತಕ್ಕದ್ದು ಮತ್ತು ಅಗತ್ಯ ದಾಖಲೆಗಳನ್ನು ಇಡತಕ್ಕದ್ದು.

ಕೊನೆಯ ಮಾರ್ಪಾಟು : 4/23/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate