‘
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಯಶಸ್ಸಿಗೆ ರೂಪಿಸಿದ ಕಾರ್ಯತಂತ್ರಗಳಾದ ಶಿಶು ಮರಣ ಮತ್ತು ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸುವಿಕೆ ಮತ್ತು ಆರೋಗ್ಯ ವರ್ಧಕ ಅಂಶಗಳ ಬಗ್ಗೆ ಸಮುದಾಯಕ್ಕೆ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಕೊಂಡಿಯಾಗಿ ಕಾರ್ಯನಿರ್ವಹಿಸಲು ಆರಂಭದ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
o ಆಶಾ ಸಮುದಾಯದ ನಡುವೆ ಕಾರ್ಯನಿರ್ವಹಿಸಲು ಇರುವ ಒಬ್ಬ ಆರೋಗ್ಯ ಕಾರ್ಯಕರ್ತೆ.
o ಪ್ರತಿ ಗ್ರಾಮದಲ್ಲಿ ಪ್ರತಿ ಸಾವಿರ ಜನರಿಗೆ ಒಬ್ಬ ಕಾರ್ಯಕರ್ತೆ (ಂSಊಂ) ಇರುತ್ತಾರೆ.
o ಕಾರ್ಯಕರ್ತೆಯರನ್ನು ಗ್ರಾಮಸಭೆಯಲ್ಲಿ ಆಯ್ಕೆಮಾಡಲಾಗುತ್ತದೆ
o ಗ್ರಾಮದಲ್ಲೇ ವಾಸವಾಗಿರುವ ಕನಿಷ್ಠ 8ನೇ ತರಗತಿವರೆಗೆ ಓದಿದ ಮಹಿಳೆಯರಲ್ಲಿ (ಮುದುವೆಯಾದ/ವಿಧವೆ/ವಿಚ್ಛೇದಿತ 25-45 ವರ್ಷದೊಳಗಿನ) ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ.
o ಗ್ರಾಮ ಪಂಚಾಯ್ತಿಗೆ ಜವಾಬ್ದಾರಳಾಗಿರುತ್ತಾಳೆ.
o ಆಶಾ ಕಾರ್ಯಕರ್ತೆಯು ಅಂಗನವಾಡಿ ಕೇಂದ್ರದ ಮೂಲಕ ಕಾರ್ಯನಿರ್ವಹಿಸುತ್ತಾಳೆ.
o ಆಶಾ ಕಾರ್ಯಕರ್ತೆಯು ಉತ್ತೇಜಕ ಭತ್ಯೆಗಳನ್ನು ಪಡೆಯುವ ಸ್ವಯಂ ಸೇವಕಿಯಾಗಿದ್ದು, ಅವಳ ಕೆಲಸದ ಆಧಾರದ ಮೇಲೆ ಉತ್ತೇಜಕ ಭತ್ಯೆಗಳನ್ನು ಪಡೆಯುತ್ತಾಳೆ. ಆದರೆ ಸಮುದಾಯಕ್ಕೆ ಅವಳ ಸೇವೆ ಉಚಿತವಾಗಿರುತ್ತದೆ.
o ಗರ್ಭಿಣಿಯರ, ಹೆರಿಗೆಯ ಅವಧಿಯಲ್ಲಿ, ನವಜಾತ ಶಿಶುವಿನ ಬಗ್ಗೆ, ಹಾಗೂ ಹೆರಿಗೆಯ ನಂತರ ತೆಗೆದುಕೊಳ್ಳಬೇಕಾದ ಜಾಗೃತಿಯ ಬಗ್ಗೆ ಹಾಗೂ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಆಶಾ ಕಾರ್ಯಕರ್ತೆಗೆ ತರಬೇತಿಗಳನ್ನು ನೀಡಲಾಗುತ್ತದೆ.
ಆಶಾ ಆರೋಗ್ಯದ ಬಗ್ಗೆ ತಿಳಿವಳಿಕೆಯನ್ನು ಮೂಡಿಸಲು ಜವಾಬ್ದಾರಳಾಗಿರುತ್ತಾಳೆ.
o ಪೌಷ್ಠಿಕಾಂಶ, ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಸಮುದಾಯಕ್ಕೆ ತಿಳಿವಳಿಕೆ ನೀಡುವುದು.
o ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಆರೋಗ್ಯ ಸೇವೆಗಳ ಬಗ್ಗೆ ಸಮುದಾಯಕ್ಕೆ ಮಾಹಿತಿ ನೀಡಿ, ಅವರನ್ನು ಸಂಘಟಿಸಿ ಕೇಂದ್ರದಲ್ಲಿ ಲಭ್ಯವಿರುವ ಆರೋಗ್ಯ ಸೇವೆಗಳನ್ನು ಪಡೆಯಲು ಸಹಾಯ ಮಾಡುವುದು.
o ಗರ್ಭಿಣಿ ಹೆಂಗಸರ ಹೆಸರನ್ನು ನೊಂದಾಯಿಸುವುದು ಮತ್ತು ಬಡ ಮಹಿಳೆಯರಿಗೆ ಬಿಪಿಎಲ್ ಕಾರ್ಡ್ ಪಡೆಯಲು ಸಹಾಯಮಾಡುವುದು.
o ಹೆರಿಗೆಯ ತಯಾರಿ, ಸುರಕ್ಷಿತ ಹೆರಿಗೆ, ಎದೆ ಹಾಲು ಕುಡಿಸುವುದು, ಗರ್ಭ ನಿರೋಧಕಗಳ ಬಳಕೆ, ಖಖಿI/SಖಿI ಮತ್ತು ಶಿಶುಪಾಲನೆಯ ಬಗ್ಗೆ ಮಹಿಳೆಯರ ಜೊತೆ ಸಮಾಲೋಚಿಸುವುದು.
o ಗರ್ಭಿಣಿಯರನ್ನು ಮತ್ತು ಆರೋಗ್ಯ ಸೇವೆಯ ಅಗತ್ಯವಿರುವ ಮಕ್ಕಳನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆ ದಾಖಲಿಸುವ/ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡುವುದು.
o ಸಾರ್ವತ್ರಿಕ ಲಸಿಕೆಗೆ ಪ್ರೋತ್ಸಾಹಿಸುವುದು.
o ಚಿಕ್ಕಪುಟ್ಟ ಖಾಯಿಲೆಗಳಿಗೆ ಪ್ರಾಥಮಿಕ ಔಷಧಿಯನ್ನು ನೀಡುವುದು.
o ಸಾಮಾನ್ಯ ಖಾಯಿಲೆಗಳಿಗೆ ಬೇಕಾದ ಸಾಮಾನ್ಯ ಂಙUSಊ ಮತ್ತು ಆಲೋಪತಿ ಔಷಧಿಗಳನ್ನು ಒಳಗೊಂಡ ಔಷಧಿಯ ಕಿಟ್‍ನ್ನು ಹೊಂದಿರಬೇಕು.
o ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಿಸುವುದು.
o ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ಮುಖಂಡತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆ, ಂಓಒ ಮತ್ತು ಸ್ವಸಹಾಯ ಗುಂಪುಗಳ ಮುಖಾಂತರ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಯೋಜನೆ ತಯಾರಿಸಿ ಕಾರ್ಯರೂಪಕ್ಕೆ ತರಲು ಸಹಾಯ ಮಾಡುವುದು.
o ಅಂಗನವಾಡಿ ಕಾರ್ಯಕರ್ತೆ ಮತ್ತು ಆರೋಗ್ಯ ಕೇಂದ್ರ ಗಳ ಜೊತೆ ತಿಂಗಳಿಗೆ ಅಥವಾ ಎರಡು ಬಾರಿ ‘ಆರೋಗ್ಯ ದಿನ’ ವನ್ನು ಆಚರಿಸುವುದು.
o ಅಂಗನವಾಡಿ ಕಾರ್ಯಕರ್ತೆಯರು ವಿತರಿಸುವ ಅಗತ್ಯ ಸೇವೆಗಳಾದ , ಗರ್ಭನಿರೋಧಕಗಳು, ಇತ್ಯಾದಿ ಗಳಿಗೆ ಆಶಾ ಕೈಜೋಡಿಸಬೇಕು.
ಕೊನೆಯ ಮಾರ್ಪಾಟು : 4/26/2020