ಸಮುದಾಯದ ಆರೋಗ್ಯದ ಹಕ್ಕನ್ನು ಚಲಾಯಿಸಲು ನೀವು ಇದರ ಮೇಲ್ವಿಚಾರಣೆಮಾಡಿ, ಕುಂದು ಕೊರತೆಗಳಣ್ನು ಗುರುತಿಸಿ, ಅವರ ಆರೋಗ್ಯ ಸೇವೆಯ ಬೇಕು ಬೇಡಗಳನ್ನು ಸೇವೆ ಕೊಡುವವರ ಮುಂದೆ ಇಡತಕ್ಕದ್ದು. ಹಾಗಾಗಿ ನೀವುಗಳು ಆರೋಗ್ಯದ ವ್ಯವಸ್ಥೆ, ರೂಪ, ಕಾರ್ಯಾಚರಣೆ ಮತ್ತು ಇರಬೇಕಾದ ಮಟ್ಟ, ಇವುಗಳನ್ನೆಲ್ಲಾ ಚನ್ನಾಗಿ ಅರಿತುಕೊಂಡಿರಬೇಕು. ಆರೋಗ್ಯ ಸೇವೆಯು ವಿವಿಧ ಹಂಗಳಲ್ಲಿ ವೈವಿಧ್ಯಮಯವಾಗಿರುತ್ತದೆ. ಈ ಹಂತಗಳು ಯಾವುವೆಂದರೆ ರಾಜ್ಯ, ಜಿಲ್ಲಾ, ಗ್ರಾಮಗಳ ಗುಂಪು. ಇದರ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ>
ಗ್ರಾಮದ ಹಂತ
ಗ್ರಾಮದ ಹಂತದಲ್ಲಿ ಆರೋಗ್ಯ ಸೇವೆಯು ಉಪಕೇಂದ್ರದಲ್ಲಿ ಲಭಿಸುತ್ತದೆ. ಅಲ್ಲಿ ಈ ಕೆಳಕಂಡ ಕಾರ್ಯಕ್ರಮದಡಿಯಲ್ಲಿ ಸೇವೆಗಳನ್ನು ಪಡೆಯಬಹುದು.
ಆಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ (ಆರ್.ಸಿ.ಹೆಚ್)
ಇದರ ಅಡಿಯಲ್ಲಿ ತಾಯಿಯ ಆರೋಗ್ಯ
ಗರ್ಭಿಣಿ ಸೇವೆ
ಹೆರಿಗೆ ಸೇವೆ
ಬಾಣಂತಿ ಸೇವೆ
ಅವಶ್ಯಕ ನವಜಾತ ಶಿಶುವಿನ ಸೇವೆ
ಜನನಿ ಸುರಕ್ಷಾ ಯೋಜನೆ
ಪೌಷ್ಠಿಕ ಆಹಾರ ಭೋದನೆ ಮತ್ತು ಮೇಲ್ದರ್ಜೆ ಆಸ್ಪತ್ರೆಗೆ ಕಳುಸುಸುವಿಕೆ
ಮಗುವಿನ ಆರೋಗ್ಯ :
ಲಸಿಕಾ ಕಾರ್ಯಕ್ರಮ
ಎ ಅನ್ನಾಂಗ ಕಾರ್ಯಕ್ರಮ (ತಾಯಿ ಮತ್ತು ಮತುವಿನ ಆರೋಗ್ಯ ಸೇವೆಯ ಪೂರ್ಣ ಮಾಹಿತಿಗೆ ಆಶಾ ಪುಸ್ತಕ (2) ನ್ನು ಓಎಇ)
ಕುಟುಂಬ ಕಲ್ಯಾಣ :
ಗರ್ಭನಿರೋಧಕಗಳ ಪ್ರೋತ್ಸಾಹ ಮತ್ತು ವಿತರಣೆ
ಬಂಕಿ ಅಳವಡಿಕೆ
ತಾತ್ಕಾಲಿಕ ವಿಧಾನಗಳನ್ನು ಅಳವಡಿಸಿಕೊಂಡವರ ಮರು ಭೇಟಿ
ಆಪ್ರ ಸಮಾಲೋಚನೆ
ಮೂಲ: ಆಶಾ ಕೈಪಿಡಿ
ಕೊನೆಯ ಮಾರ್ಪಾಟು : 7/6/2020