ತಾಯಿ 6 ತಿಂಗಳವರೆಗೆ ಎದೆಹಾಲನ್ನೇ ಕುಡಿಸಲು ಪ್ರೋತ್ಸಾಹಿಸಬೇಕು.
ಪೂರಕ ಆಹಾರದ ಬಗ್ಗೆ ಕುಟುಂಬಕ್ಕೆ ಶಿಕ್ಷಣ ಕೊಡಬೇಕು ಮತ್ತು ಪೂರಕ ಆಹಾರ ತಯಾರಿಸುವ ಬಗ್ಗೆ ಪ್ರಾತ್ಯಕ್ಷತೆ ಮಾಡಿ ತೋರಿಸಬೇಕು.
ಕೊನೆ ಪಕ್ಷ 3 ತಿಂಗಳಿಗೆ ಒಂದು ಬಾರಿ ತೂಕ ಮಾಡಲು ಅಂಗನವಾಡಿ ಕೇಂದ್ರಕ್ಕೆ ಮಗುವನ್ನು ಕರೆದುಕೊಂಸು ಹೋಗುವಂತೆ ತಾಯಿಗೆ ಸಲಹೆ ನೀಡಬೇಕು ಮತ್ತು ಪೌಷ್ಠಿಕಾಂಶದ ಕೊರತೆ ಇರುವ ಮಕ್ಕಳನ್ನು ಗುರುತಿಸಬೇಕು.
ತಾಯಿಗೆ ಹೆಣ್ಣು ಮಗುವಿನ ಪೌಷ್ಠಿಕಾಂಶದ ಬಗ್ಗೆ ತಿರಸ್ಕಾರ ಮಾಡಬಾರದು ಎಂದು ಸಲಹೆ ನೀಡಬೇಕು.
ಅಂಗನವಾಡಿ ಕೇಂದ್ರದಲ್ಲಿ ಪೂರಕ ಆಹಾರ ದೊರೆಯುವ ಸಂಬಂಧ ತಾಯಂದಿರಿಗೆ ಸಲಹೆ ಕೊಡಬೇಕು. ಅರ್ಹ ಎಲ್ಲಾ ಮಕ್ಕಳಿಗೆ ದೊರಕಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
ಪೋಷಣೆ ಕೊರತೆ ಇರುವ ಮಕ್ಕಳನ್ನು ಪೊಷಕಾಂಶ ಕೊರತೆ ರಹಿತ ಮಕ್ಕಳನ್ನಾಗಿ ಮಾಡಬೇಕು. ಕ್ರಮಬದ್ಧವಾಗಿ ಪೂರಕ ಆಹಾರ ದೊರೆಯುತ್ತಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ಈ ಮಕ್ಕಳಲ್ಲಿ ತೂಕ ಹೆಚ್ಚಾಗುತ್ತಿರುವುದನ್ನು ಪತ್ತೆ ಮಾಡಬೇಕು.
ಕಾಯಿಲೆ ಇದ್ದಾಗ ಆಹಾರ ಕೊಡುವುದು
ಶಿಶು ಮತ್ತು ಎಳೆಯ ಮಕ್ಕಳಲ್ಲಿ ಕಾಯಿಲೆ ಇದ್ದಾಗ ಆಂತಹ ಮಕ್ಕಳು ತೆಗೆದುಕೊಳ್ಳುವ ಆಹಾರ ಕಡಿಮೆಯಾಗುತ್ತದೆ. ಹಾಗಿದ್ದರೂ ಅಗತ್ಯ ಶಕ್ತಿ ಜಾಸ್ತಿ ಬೇಕಾಗುತ್ತದೆ. ಆದುದರಿಂದ ಕಾಯಿಲೆ ಮಗುವಿಗೆ ಹೇಗೆ ಮತ್ತು ಯಾವಾಗ ಆಹಾರ ಉಣಿಸಬೇಕು ಎಂದು ತಿಳಿದುಕೊಂಡಿರಬೇಕು.
ಶಿಶು ಮತ್ತು ಎಳೆಯ ಮಗುವಿಗೆ ಪೌಷ್ಠಿಕ ಆಹಾರ ಎದೆಹಾಲು ಮತ್ತು ಪೂರಕ ಆಹಾರ ಉಣಿಸುವುದು.
ಮಗು ಅಭಿವೃದ್ಧಿಯಾಗಲು ಮತ್ತು ಕ್ರಿಯಾಶೀಲವಾಗಿರಲು ಹಾಗೂ ಮಗು ರೋಗ ಒಳಗಾಗದೆ ಬೆಳೆಯಲು, ಯೌವ್ವನಾವಸ್ಥೆಗೆ ತಲುಪಲು ಪೌಷ್ಠಿಕಾಂಶ ಆಗತ್ಯವಿರುತ್ತದೆ. ಪೌಷ್ಠಿಕಾಂಶಗಳಾದ ಕಾರ್ಬೊಹೈಡ್ರೆಟ್ಸ್, ಕೊಬ್ಬು, ಪ್ರೋಟೀನ್ ಹೆಚ್ಚು ಪ್ರಮಾಣದಲ್ಲಿ ಅಗತ್ಯವಿರುತ್ತದೆ. (ಮ್ಯಾಕ್ರೋ ಪೌಷ್ಠಿಕಾಂಶಗಳು) ಕೆಲವು ಪೌಷ್ಠಿಕಾಂಶಗಳಾದ ಜೀವಸತ್ವಗಳು, ಕಬ್ಬಿಣಾಂಶ, ಕ್ಯಾಲ್ಸಿಯಂ, ಐಯೋಡಿನ್ ಮುಂತಾದವುಗಳು ಕನಿಷ್ಠ ಪ್ರಮಾಣದಲ್ಲಿ ಬೇಕಾಗುತ್ತವೆ (ಮೈಕ್ರೋ ಪೌಷ್ಠಿಕಾಂಶಗಳು). ಮಗು ಸರಿಯಾಗಿ ಬೆಳವಣಿಗೆಯಾಗದಿದ್ದರೆ ಅದರ ಅರ್ಥ ಅಪೌಷ್ಠಿಕ ಮಗು ಎನ್ನಲಾಗುತ್ತದೆ.
ಮಗು ಸರಿಯಾಗಿ ಬೆಳೆಯದಿದ್ದರೆ, ಇದರ ಅರ್ಥ ಮಗುವಿಗೆ ಪೌಷ್ಠಿಕಾಂಶದ ಕೊರತೆ ಇದೆ ಎಂದು ತಿಳಿದುಕೊಳ್ಳಬೇಕು.
ಮಗುವಿನ ಪೌಷ್ಠಿಕ ಆಹಾರವನ್ನು ವಯಸ್ಸಿಗೆ ಅನುಸಾರವಾಗಿ ಈ ಕೆಳಗಿನಂತೆ ವಿಭಜಿಸಲಾಗಿದೆ.
0-6 ತಿಂಗಳುಗಳಲ್ಲಿ ಎಎ ಹಾಲನ್ನೇ ಉಣಿಸಬೇಕು.
ಶಿಶುವಿಗೆ 6 ತಿಂಗಳವರೆಗೆ ತಾಯಿ ಎದೆಹಾಲು ಮಾತ್ರ ಕುಡಿಸಬೇಕು. ಒಂದು ದಿನಕ್ಕೆ ಕನಿಷ್ಠ 8 ಬಾರಿ ಕುಡಿಸಬೇಕು.
ಮಗುವು ಬೇಕೆಂದಾಗ ತಾಯಿ ಎದೆಹಾಲು ಕುಡಿಸುವುದಕ್ಕೆ ಪ್ರೋತ್ಸಾಹಿಸಬೇಕು.
ಬಾಟಲಿನಲ್ಲಿ ಕುಡಿಸುವುದನ್ನು ಪ್ರೋತ್ಸಾಹಿಸಬಾರದು. ಮತ್ತು ಆತಂಕಕಾರಿ ತಾಯಂದರಿರಲ್ಲಿ ಪುನರ್ ನಂಬಿಕೆ ಹುಟ್ಟಿಸಬೇಕು.
ಶಿಶುವಿಗೆ ತಾಯಿ ಎದೆಹಾಲು ಅತ್ಯುತ್ತಮ ಆಹಾರ. ಏಕೆಂದರೆ ಇದರಲ್ಲಿ ಎಲ್ಲಾ ಪೌಷ್ಠಿಕಾಂಶಗಳು ಇರುತ್ತವೆ.
ಎದೆಹಾಳು ಕುಡಿಯುವ ಶಿಶುವಿಗೆ ಪೌಷ್ಠಿಕಾಂಶಚ ಕೊರತೆ ಬರುವುದು ಕಡಿಮೆ.
ತಾಯಿ ಹಾಲು ಸ್ವಚ್ಛವಾಗಿರುವುದರಿಂದ ಮತ್ತು ಸೂಕ್ಷ್ಮಾಣುರಹಿತವಾಗಿರುವುದರಿಂದ ಸೋಂಕುಗಳನ್ನು ತಡೆಗಟ್ಟುತ್ತದೆ.
ಕೊಲಾಸ್ಟ್ರಂ (ಗಿಣ್ಣು ಹಾಲು) ಶಿಶುವಿಗೆ ಮೊದಲ ರಕ್ಷಣಾ ಚಿಕಿತ್ಸೆಯಂತೆ ಕಾರ್ಯ ನಿರ್ವಹಿಸುತ್ತದೆ.
ಎದೆಹಾಲು ಕುಡಿಯುವುದರಿಮದ ಮಿದುಳಿನ ಅಭಿವೃದ್ಧಿ ಹೆಚ್ಚಾಗುತ್ತದೆ.
ಎದೆಹಾಲು ಉಣಿಸುವುದರಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ಹೆಚ್ಚಾಗುತ್ತದೆ. ಇದು ಮಗುವಿನ ಉತ್ತಮ ಅಭಿವೃದ್ಧಿತೆ ಸಹಾಯವಾಗುತ್ತದೆ.
6-12 ತಿಂಗಳು ಪೂರಕ ಆಹಾರ ಉಣಿಸುವುದು.
ಮನೆಯಲ್ಲೆ ತಯಾರಿಸಿದ ಪೂರಕ ಆಹಾರವನ್ನು 6 ತಿಂಗಳ ನಂತರ ಕೊಡುವುದನ್ನು ಪ್ರಾರಂಭಿಸಬೇಕು. ದಿನಕ್ಕೆ 4-5 ಸಲ ನೀಡಬೇಕು.
ಮಗು ಬೇಕೆಂದಾಗಲೆಲ್ಲ ಎದೆಹಾಲು ಉಣಿಸುವುದನ್ನು ಮುಂದುವರಿಸಬೇಕು.
ಮಗುವಿಗೆ ಎದೆಹಾಲು ಉಣಿಸದಿದ್ದಲ್ಲಿ ಗ್ಲಾಸ್‍ನಲ್ಲಿ ಗಟ್ಟಿಹಾಲನ್ನು ಕುಡಿಸಬೇಕು. ಮತ್ತು ಪೂರಕ ಆಹಾರ ದಿನಕ್ಕೆ ತ ಬಾರಿ ಕೊಡಬೇಕು. ಪೂರಕ ಆಹಾರ ತಿನ್ನಿಸುವುದಕ್ಕೆ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.
ಆಹಾರವನ್ನು ಕಿವುಚಬೇಕು ಮತ್ತು ಹೊಸದಾಗಿ ತಯಾರಿಸಬೇಕು.
12 ತಿಂಗಳಿಂದ - 2 ವರ್ಷಗಳು
ಎರಡು ವರ್ಷಗಳವರೆಗೆ ಅಥವಾ ನಂತರವು ಎದೆಹಾಲು ಉಣಿಸುವುದನ್ನು ಮುಂದುವರಿಸಬೇಕು. ಮನೆಯಲ್ಲಿ ತಯಾರಿಸಿದ ಆಹಾರವನ್ನು 4-5 ಸಲ ನೀಡಬೇಕು.
ಎರಡು ವರ್ಷಗಳ ನಂತರ
ಮಗುವು ಕಡಿಚೆ ಪ್ರಮಾಣದಲ್ಲಿ ತಿನ್ನುವುದರಿಂದ ಇನ್ನುಮುಂದೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ದಿನಕ್ಕೆ 5-6 ಸಲ ತಿನ್ನಿಸಬೇಕು.
ಎಲ್ಲಾ ವಯಸ್ಸಿನಲ್ಲಿ ಮಗುವಿನ ಬೆಳವಣಿಗೆ ತಿಳಿದುಕೊಳ್ಳಲು ಪ್ರತಿ 3 ತಿಂಗಳಿಗೊಮ್ಮೆ ತೂಕ ಮಾಡಬೇಕು.
ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆ
ತೀವ್ರ ಪೌಷ್ಠಿಕಾಂಶದ ಕೊರತೆಯಿರುವ ಮಗು ವಿವಿಧ ಸೋಂಕು ರೋಗಗಳಿಂದ ಮರಣ ಹೊಂದುವ ಅಪಾಯವಿರುತ್ತದೆ.
ಎರಡು ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಪರೀಕ್ಷೆ ಮಾಡಬೇಕು ಮತ್ತು ಪೋಷಕರಿಗೆ ಸಲಹೆ ನೀಡಬೇಕು.
ದುರ್ಬಲವಾಗಿ ಕಾಣುವ ಮಗು ಅಥವಾ ವಯಸ್ಸಿಗೆ ಅನುಗುಣವಾಗಿ ಚಿಕ್ಕದಾಗಿ ಕಾಣುವ ಮಕ್ಕಳಿಗೆ ಅವರು ಪೌಷ್ಠಿಕಾಂಶವನ್ನು ಸುಧಾರಿಸಿಕೊಳ್ಳುವ ಬಗ್ಗೆ ಸಲಹೆ ನೀಡಬೇಕು.
ಮೂಲ:ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 5/9/2020
ಕಿಶೋರಿ ಶಕ್ತಿ ಯೋಜನೆಯು ಸಬಲಾ ಅನುಷ್ಠಾನಗೊಳ್ಳುತ್ತಿರುವ ಜಿ...
ಜನನಿ -ಶಿಶು ಸುರಕ್ಷಾ ಕಾರ್ಯಕ್ರಮ ಕುರಿತಾದ ಮಾಹಿತಿ ಇಲ್ಲಿ ...
ನವಜಾತ ಶಿಶುವೀನ ಆರೈಕೆ ಕುರಿತು ಇಲ್ಲಿ ವಿವರಿಸಿಲಾಗಿದೆ.
ಭಾರತೀಯ ಸಮಾಜದಲ್ಲಿ ಬಾಲ್ಯವಿವಾಹ ಪದ್ಧತಿಯು ಒಂದು ಸಾಮಾಜಿಕ ...