ಮಗುವಿಗೆ ಸರಿಯಾದ ಅಂತರದಲ್ಲಿ, ಸರಿಯಾದ ಪ್ರಮಾಣದಲ್ಲಿ (ವರಸೆ) ಸರಿಯಾದ ವಯಸ್ಸಿನಲ್ಲಿ ಲಸಿಕೆಗಳನ್ನು ಕೊಡಬೇಕು. ಈ ರೋಗಗಳ ವಿರುದ್ಧ ಉತ್ತಮವಾಗಿ ರಕ್ಷಣೆ ಒದಗಿಸಲು ಎಲ್ಲಾ ಲಸಿಕೆಗಳನ್ನು ಪೂರ್ಣವಾಗಿ ಕೊಟ್ಟಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ನಮಗೆ ಲಸಿಕೆಗಳನ್ನು ಎಷ್ಟು ವರಸೆ ಮತ್ತು ಯಾವಾಗ ಕೊಡಿಸಬೇಕೆಂದು ತಿಳಿಸುವ ಪಟ್ಟಿಗೆ 'ಲಸಿಕಾವೇಳಾಪಟ್ಟಿ' ಎಂದು ಕರೆಯಲಾಗುತ್ತದೆ.
ಆಶಾ ಆಗಿ ಗ್ರಾಮದಲ್ಲಿರುವ, ಹಾಗೂ ಪಕ್ಕದ ಪ್ರದೇಶದಲ್ಲಿರುವ ಎಲ್ಲಾ ಮಕ್ಕಳಿಗೆ ಒಂದು ವರ್ಷ ತುಂಬುವುದರೊಳಗೆ ಪೂರ್ಣವಾಗಿ ರಕ್ಷಣಾ ಚಿಕಿತ್ಸೆಯಗಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು.
ಮಗುವಿಗೆ ಸಕಾಲದಲ್ಲಿ ಸರಿಯಾದ ಲಸಿಕೆ ನೀಡದಿದ್ದರೆ ಗೊತ್ತಾದ ತಕ್ಷಣ ಲಸಿಕೆ ನೀಡಲು ಪ್ರಾರಂಭಿಸಬೇಕು. ಮೊದಲನೇ ವರ್ಷ ತುಂಬುವುದರೊಳಗೆ ಪೂರ್ಣ ರಕ್ಷಣಾ ಚಿಕಿತ್ಸೆ ನೀಡಿ ಮುಗಿಸಬೇಕು.
ಮೂಲ :ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 4/24/2020