ನೀವು ರಾಷ್ಟ್ರೀಯ ಲಸಿಕಾ ವೇಳೆಗಳನ್ನು ಚೆನ್ನಾಗಿ ತಿಳಿದುಕೊಂಡಿರಬೇಕು.
ನಿಮ್ಮ ಗ್ರಾಮದಲ್ಲಿ ಒಂದು ವರ್ಷದೊಳಗಿನ ಮಕ್ಕಳ ಸಂಖ್ಯೆಯನ್ನು ತಿಳಿದುಕೊಂಡಿರಬೇಕು.
ಅಂಗನವಾಡಿಯಲ್ಲಿ ಲಸಿಕಾ ಶಿಬಿರಕ್ಕೆ ಸಿದ್ಧತೆ ಮಾಡುವುದಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ನೆರವಾಗಬೇಕು.
ತಾಯಿ ಮಗುವಿನ ಜೊತೆ ಬಂದಾಗ ಪ್ರತಿ ಸಾರಿಯೂ ಲಸಿಕಾ ಕಾರ್ಡನ್ನು ತೆಗೆದುಕೊಂಡು ಬರಲು ಸಲಹೆ ನೀಡಬಹುದು.
ರಕ್ಷಣಾ ಚಿಕಿತ್ಸೆಯಲ್ಲಿ ಆಟೋ ಡಿಸೇಬಲ್ ಸಿರಂಜಿನ ಉಪಯೋಗದ ಬಗ್ಗೆ ತಾಯಂದಿರಿಗೆ ತಿಳಿಸಬೇಕು. ಸೂಜಿಯನ್ನು ಸಿರಂಜಿಎ ಸ್ಥಿರವಾಗಿ ಅಳವಡಿಸಿ ಪ್ಯಾಕ್ ಮಾಡುವುದಕ್ಕೆ ಮೊದಲೇ ಸಂಸ್ಕರಿಸಿರುವ ಸಿರಂಜಗಳು ದೊರೆಯುತ್ತವೆ. ಇದು ರೋಗಗಳನ್ನು ತಡೆಗಟ್ಟಲು ಸಹಾಯಕವಾಗುತ್ತವೆ.
ತಾಯಿ ಮಗುವಿಗೆ ಲಸಿಕೆಕೊಡಿಸುವಾಗ ಮಗುವನ್ನು ಸರಿಯಾದ ಸ್ಥಾನದಲ್ಲಿ ಹಿಡಿದುಕೊಂಡಿರುವುದಕ್ಕೆ ನೀವು ಸಹಾಯ ಮಾಡಬೇಕು.
ಸಣ್ಣಪುಟ್ಟ ರೋಗಗಳ ಬಗ್ಗೆ ತಿಳುವಳಿಕೆ ನೀಡಬೇಕು. ಉದಾಹರಣೆಗೆ ಜ್ವರ, ಕೆಮ್ಮು, ಶೀತ ಇತ್ಯಾದಿಗಳು ಲಸಿಕೆ ನೀಡದೇ ಇರಲು ಕರಣಗಳಲ್ಲಿ.
ತಾಯಿಗೆ ಲಸಿಕಾ ಚಿಕಿತ್ಸೆಯ ನಂತರ ಬರುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿಸಬೇಕು.
ಸ್ವಲ್ಪ ಪ್ರಮಾಣದ ಜ್ವರ
ರಕ್ಷಣ ಚಿಕಿತ್ಸೆಯಾದ ನಂತರ ಸ್ವಲ್ಪ ಗಂದೆಳು ಕಾಣಿಸಬಹುದು.
ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ನೋವು, ಊತ ಮತ್ತು ಬಾವು.
1/4ನೇ ಭಾಗ ಪ್ಯಾರಾಸೆಟಮಾಲ್ ಮಾತ್ರೆಯನ್ನು ಮಗುವಿಗೆ ನೀಡುವುದರಿಂದ ಈ ಅಡ್ಡ ಪರಿಣಾಮಗಳು ನಿವಾರಣೆಯಾಗುತ್ತದೆ.
ರಕ್ಷಣಾ ಚಿಕಿತ್ಸೆಯ ನಂತರ ಕೆಳಕಂಡ ಲಕ್ಷಣಗಳಿದ್ದೆ ಎಫ್.ಆರ್.ಯು./ಪ್ರಾ.ಆ.ಕೇಂದ್ರಕ್ಕೆ ಕಳುಹಿಸಬೇಕು.
ಮಗು 3 ಗಂಟೆಗೂ ಹೆಚ್ಚು ಅವಧಿ ಅಳುತ್ತಿದ್ದರೆ.
ಅತಿ ಹೆಚ್ಚು ಜ್ವರವಿದ್ದರೆ
ಮಗು ಪ್ರಜ್ಞೆ ತಪ್ಪಿದರೆ ಅಥವಾ ತೂಕಡಿಸುತ್ತಿದ್ದರೆ
ಎಲ್ಲಾ ಮಕ್ಕಳು ಲಸಿಕಾ ಚಿಕಿತ್ಸೆ ಪಡೆದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಕೈಬಿಟ್ಟಿರುವ ಮಕ್ಕಳನ್ನು ಅದರಲ್ಲು ವಿಶೇಷವಾಗಿ ಅನಾಥ ಮತ್ತು ವಲಸೆಗಾರ ಮಕ್ಕಳಿಗೆ ರಕ್ಷಣಾ ಚಿಕಿತ್ಸೆ ನೀಡುವುದಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಾಯ ಮಾಡಬೇಕು.
ಲಸಿಕಾ ಕಾರ್ಯಕ್ರಮದಡಿ ಪ್ರೋತ್ಸಾಹ ಧನ ಯಾರು ಮತ್ತು ಯಾವಾಗ ನೀಡುತ್ತಾರೆ ಎಂಬ ಬಗ್ಗೆ ತಿಳಿದುಕೊಳ್ಳಬೇಕು.
ಮೂಲ :ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 3/22/2019