ಎಲ್ಲಾ ಹೆಣ್ಣುಗಳು ಮೊಟ್ಟೆಯನ್ನು ಉತ್ಪತ್ತಿ ಮಾಡುತ್ತವೆ ಮತ್ತು ಎಲ್ಲಾ ಗಂಡುಗಳು ವೀರ್ಯಾಣುಗಳನ್ನು ಉತ್ಪತ್ತಿ ಮಾಡುತ್ತವೆ. ಅವುಗಳು ಮಹಿಳೆಯ ಗರ್ಭಾಶಯದೊಳಗೆ ಸಂಧಿಸುತ್ತವೆ ನಂತರ ಭ್ರೂಣ ಉತ್ಪತ್ತಿಯಾಗುತ್ತದೆ. ಈ ಭ್ರೂಣ ಮಗುವಾಗಿ ಬೆಳೆಯುತ್ತದೆ.
ಲಿಂಗ ವರ್ಣತಂತು (ಕ್ರೋಮೊಸೋಮ್) ದಿಂದ ಮಗುವಿನ ಲಿಂಗ ನಿರ್ಧಾರವಾಗುತ್ತದೆ. ಇವುಗಳ ಮೂಲಕ ಮಗು ತಂದೆ-ತಾಯಿಯ ಲಕ್ಷಣಗಳನ್ನು ಪಡೆದುಕೊಳ್ಳತ್ತದೆ. ಮಹಿಳೆಯ ಅಂಡಾಣುಲ್ಲಿ ಘಿ ವರ್ಣತಂತು ಮತ್ತು ಪುರುಞರ ವೀರ್ಯಾಣುವಿನಲ್ಲಿ ಘಿ ಅಥವಾ ಙ ವರ್ಣತಂತು ಇರುತ್ತದೆ. (ಇವುಗಳನ್ನು ಕ್ರಮವಾಗಿ ನಾವು ಹೆಣ್ಣು ವೀರ್ಯಾಣು ಅಥವಾ ಗಂಡು ವೀರ್ಯಾಣು ಎಂದು ಕರೆಯಬಹುದು) ಗರ್ಭಧಾರಣೆಯ ಸಮಯದಲ್ಲಿ ಹೆಣ್ಣಿನ ಮೊಟ್ಟೆಯಲ್ಲಿರುವ ವರ್ಣತಂತು ಹೆಣ್ಣು ವೀರ್ಯಾಣು ಸಂಪರ್ಕಿಸಿದಾಗ ಹೆಣ್ಣು ಮಗುವಾಗುತ್ತದೆ. ಮತ್ತು ಗಂಡು ವೀರ್ಯಾಣುವನ್ನು ಸಂಪರ್ಕಿಸಿದಾಗ ಗಂಡು ಮಗುವಾಗುತ್ತದೆ. ಹೆಣ್ಣು ಮತು ಅಥವಾ ಗಂಡು ಮಗು ಹುಟ್ಟುವುದಕ್ಕೆ ಹೆಂಗಸಾಗಲಿ ಅಥವಾ ಗಂಡಸಾಗಲಿ ಜವಾಬ್ದಾರರಲ್ಲ. ಇದು ಮಹಿಳೆಯರ ದೇಹದಲ್ಲಿ ಆಕಸ್ಮಿಕವಾಗಿ ಉಂಟಾಗುತ್ತದೆ. ಇದು ಹೆಣ್ಣು ವೀರ್ಯಾಣು ಅಥವಾ ಗಂಡು ವೀರ್ಯಾಣು ಮೊಟ್ಟೆಯನ್ನು ಸಂಪರ್ಕಿಸುವುದರ ಮೇಲಸ ಅವಲಂಬಿಸಿರುತ್ತದೆ. ಆದುದರಿಂದ ಮಹಿಳೆ ಗಂಡು ಮಗುವಿಬೆ ಜನ್ಮ ನೀಡಲಿಲ್ಲ ಎಂದು ನಿಂದಿಸುವುದು ತಪ್ಪು. ಸಾಮಾನ್ಯವಾಗಿ ಜನರು ಹೀಗೆ ತಿಳಿದುರುತ್ತಾರೆ ಆದರೆ ಇದು ತಪ್ಪು.
ಮೂಲ :ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 7/6/2020
ಇದೊಂದು ಪ್ರಸವದ ನಂತರದ ಅವಧಿಗೆ ಬಳಸುವ ವೈದ್ಯಕೀಯ ಶಬ್ದವಾಗಿ...