ಈಗಾಗಲೇ ಪುಸ್ತಕ-1ರಲ್ಲಿ ತಾಯಂದಿರು ಆರೋಗ್ಯ, ಪೌಷ್ಠಿಕತೆ, ಕುಡಿಯುವ ನೀರು ಮತ್ತು ನೈರ್ಮಲ್ಯದ ಸೇವೆಗಳನ್ನು ಪಡೆದುಕೊಳ್ಳಲು ಮತ್ತು ಪರಿಣಾಮಕಾರಿಯಾಗಿ ಬಳಸಿಕಳ್ಳುವಚಿತೆ ಮಾಡಲು ನೀವು ಮಾಡಬೇಕಾದ ಕಾರ್ಯಗಳ ಬಗ್ಗೆ ಓದಿದ್ದೀರು. ಗರ್ಭಿಣಿ ನೋಂದಣಿ, ಜನನಿ ಸುರಕ್ಷಾ ಯೋಜನೆ, ತಾಯಿ ಎದೆಹಾಲು ಉಣಿಸುವ, ಶಿಶುವಿನ ಪೌಷ್ಠಕತೆ, ರಕ್ಷಣಾ ಚಿಕಿತ್ಸೆ ಮತ್ತು ಅತಿಭೇದಿ ಬಗ್ಗೆ ನೀವು ವಿವರವಾಗಿ ಓದಿದ್ದೀರಿ. ಈ ಪುಸ್ತಕದಲ್ಲಿ ಋತುಸ್ರಾವ ಮತ್ತು ಫಲವತ್ತತೆ, ಗರ್ಭಾವಸ್ಥೆಯ ಅವಧಿಯಲ್ಲಿ ಗರ್ಭಿಣಿ ಮಹಿಳೆಯ ಆರೈಕೆ, ಹೆರಿಗೆ ಸಮಯದಲ್ಲಿ ಮತ್ತು ಹೆರಿಗೆ ನಂತರದ ಅವಧಿಯಲ್ಲಿ ನೀಡಬೇಕಾದ ಆರೈಕೆ ಬಗ್ಗೆ ಕಲಿಯುತ್ತೀರಿ. ಒಂದು ವೇಳೆ ಕುಟುಂಬ ಮಹಿಳೆಗೆ ಗರ್ಭಾವಸ್ಥೆಯನ್ನು ಮುಂದುವರಿಸಲು ಇಚ್ಛೆ ಇಲ್ಲದಿದ್ದರೆ ಎಂ.ಟಿ.ಪಿ. ಕಾಯ್ದೆಯಡಿ ಬೇಗನೆ ಸೇವೆ ಪಡೆದುಕೊಳ್ಳಲು ಮತ್ತು ಸುರಕ್ಷಿತ ಗರ್ಭಪಾತ ಮಾಡಿಸಿಕೊಳ್ಳುವಲ್ಲಿ ನೀವು ಸಹಾಚಿiÀು ಮಾಡಬೇಕು. ಗರ್ಭಧಾರಣೆ ಮುಂದುವರಿಸಲು ಇಚ್ಛೆ ಇಲ್ಲದ ಮಹಿಳೆಯು ಸುರಕ್ಷಿತ ಗರ್ಭಪಾತ ಸೇವೆಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬ ಬಗ್ಗೆ ಈ ಪುಸ್ತಕದಲ್ಲಿ ನೀವು ಕಲಿಯುತ್ತೀರಿ. ನೀವು ನವಜಾತ ಶಿಶುವಿನ ಆರೈಕೆ, ಶಿಶು ಮತ್ತು ಎಳೆಯ ಮಕ್ಕಳ ಪೌಷ್ಠಿಕತೆ, ಅತಿ ಭೇದಿ ಬಗ್ಗೆ ಮತ್ತು ಶಿಶು ಮತ್ತು ಮಕ್ಕಳಲ್ಲಿ ಜ್ವರ, ತೀವ್ರ ಶ್ವಾಸಕೋಶದ ಸೋಂಕು ಮತ್ತು ಅತಿ ಭೇದಿ ಇದ್ದಾಗ ನೀಡಬೇಕಾದ ಆರೈಕೆ ಮತ್ತು ಸಲಹೆ ಬಗ್ಗೆ ವಿವರವಾಗಿ ಈ ಪುಸ್ತಕದಲ್ಲಿ ಕಲಿಯುತ್ತೀರಿ.
ಬೇಡವಾದ ಗರ್ಭಧಾರಣೆ ತಡೆಗಟ್ಟುವ ವಿಧಾನಗಳು, ಸಚಿತಾನೋತ್ಪತ್ತಿ ಮಾರ್ಗದ ಸೋಂಕಿನ ಆರೈಕೆ, ಹೆಚ್.ಐ.ವಿ./ಏಡ್ಸ್ ತಡೆಗಟ್ಟುವ ವಿಧಾನಗಳ ಬಗ್ಗೆ ಮತ್ತು ಮಲ್ಭೆರಿಯ ಅಥವ ಇತರೆ ಆರೋಗ್ಯ ಸಮಸ್ಯಗಳು ಮತ್ತು ಸಣ್ಣಪುಟ್ಟ ರೋಗಗಳಿಗೆ ನೀಡಬೇಕಾದ ಆರೈಕೆಗಳ ಬತ್ತೆ ಮತ್ತು ಸಣ್ಣ ಪುಟ್ಟ ರೋಗಗಳಿಗೆ ನೀಡಬೇಕಾದ ಆರೈಕೆಗಳ ಬಗ್ಗೆ ಮತ್ತು ಸಣ್ಣಪುಟ್ಟ ರೋಗಗಳಿಗೆ ಚಿಕಿತ್ಸೆ ಬಗ್ಗೆ ಪುಸ್ತಕ 3 ಮತ್ತು 4ರಲ್ಲಿ ನೀವು ಕಲಿಯುತ್ತೀರಿ.
ಮೂಲ :ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 4/21/2020
ಹೆಂಗಸರು ಅವರ ದೇಹ ಹೇಕೆ ಕಾರ್ಯ ನಿರ್ವಹಿಸುತ್ತದೆ. ಅದರಲ್ಲೂ...
ಗರ್ಭಾಶಯದ ಒಳಪಸೆಯನ್ನು ರಕ್ತಸ್ರಾವದ ಜತೆ ಹೊರಹಾಕುವುದೆ ಮುಟ...