ಗರ್ಭಿಣಿಗೆ ಹೆಚ್ಚು ಆಹಾರ, ವಿಶ್ರಾಂತಿ ದೊರೆಯುವಂತೆ ಮಾಡುವಲ್ಲಿ ಮತ್ತು ಗರ್ಭಾವಸ್ಥೆಯ ಅವಧಿಯಲ್ಲಿ ಶ್ರಮದ ಕೆಲಸ ಮಾಡದಿರಲು ಕುಟುಂಬ ಮತ್ತು ಸಮುದಾಯದ ಪಾತ್ರ ಬಹಳ ಮುಖ್ಯವಾಗಿರುತ್ತದೆ.
ಭ್ರೂಣ ಆರೋಗ್ಯಕರವಾಗಿ ಬೆಳೆಯುವುದಕ್ಕೆ ಮತ್ತು ಗರ್ಭಿಣಿಯ ವೈಯಕ್ತಿಕ ಆರೋಗ್ಯಕ್ಕೆ ಮತ್ತು ಹೆರಿಗೆ ನಂತರ ಪರಿಣಾಚಕಾರಿಯಾಗಿ ಎದೆಹಾಲು ನೀದುವುದಕ್ಕೆ ಗರ್ಭಿಣಿಗೆ ಹೆಚ್ಚುವರಿ ಆಹಾರದ ಅಗತ್ಯವಿರುತ್ತದೆ.
ಕಬ್ಬಿಣಾಂಶ, ಕ್ಯಾಲ್ಸಿಯಂ ಮತ್ತು ಪ್ರೋಟಿನ್ ಹೆಚ್ಚಾಗಿರುವ ಪೌಷ್ಠಿಕ ಆಹಾರ ಗರ್ಭಿಣಿಗೆ ಅಗತ್ಯವಿರುತ್ತದೆ. ಇದಕ್ಕೆ ಗರ್ಭಿಣಿ ಹಸಿರು ಎಲೆಯಂತಹ ತರಕಾರಿಗಳಾದ ಪಾಲಕ್, ರಾಜಗಿರಿ/ದಂಡು, ಸರಸನ್, ಬೇಳೆ, ಹಾಲು, ಬೆಲ್ಲ, ಮೊಟ್ಟೆ, ಮೀನು, ಮಾಂಸ ಇತ್ಯಾದಿಗಳನ್ನು ತಿನ್ನಬೇಕು. ಕೆಲ ಸಮಾಜದಲ್ಲಿ ಗರ್ಭಿಣಿಯರ ಆಹಾರಕ್ಕೆ ನಿಷೇಧ ಮತ್ತು ನಿರ್ಬಂಧವಿರುತ್ತದೆ. ಕೆಲವು ತರಕಾರಿಗಳು, ಹಣ್ಣುಗಳು ಹಾಲು, ತುಪ್ಪ ಮತ್ತು ಮಾಂಸ ತಿನ್ನಲು ನೀಡುವುದಿಲ್ಲ. ಇದಕ್ಕೆ ಕಾರಣ ಜನ ಈ ಆಹಾರಗಳು ಗರ್ಭಿಣಿ ಮತ್ತು ಮಗುವಿಗೆ ಹಾನಿಕರ ಎಂದು ನಂಬಿರುಬುದಾಗಿರುತ್ತದೆ.
ಗರ್ಭಿಣಿಯರು ಅಂಗನವಾಡಿ ಕೇಂದ್ರಗಳಿಂದ ಆಹಾರ ಪಡೆಯಲು ಸಹ ಆರ್ಹರಾಗಿರುತ್ತಾರೆ.
ಗರ್ಭಿಣಿ ಮಹಿಳೆ ಉಪವಾಸ ಮಾಡಬಾರದು. ಇದರಿಂದ ಅವಳ ಗರ್ಭಕೋಶದಲ್ಲಿ ಬೆಳೆಯುತ್ತಿರುವ ಮಗು ಮತ್ತು ತಾಯಿ ಅಗತ್ಯ ಆಹಾರದಿಂದ ವಂಚಿತರಾಗುತ್ತರೆ.
ಗರ್ಭಿಣಿಯರು ಹೆಚ್ಚು ದೈಹಿಕ ಶ್ರಮದ ಕೆಲಸಗಳನ್ನು ಮಾಡಬಾರದು. ಉದಾಹರಣೆಗೆ : ಕಟ್ಟಡ ನಿರ್ಮಾಣ ಕೆಲಸ, ಬರಗಾಲ ಪರಿಹಾರ ಕೆಲಸ ಇಟ್ಟಿಗೆಯ ಭಟ್ಟಿ ಕೆಲಸಗಳು ಇತ್ಯಾದಿ. ಕುಟುಂಬದ ಉಳಿದ ಸದಸ್ಯರು ಮತ್ತು ಸಮುದಾಯ ಗರ್ಭಿಣಿಯ ಕೆಲಸದ ಒತ್ತಡವನ್ನು ಕಡಿಚೆ ಮಾಡಲು ಸಹಾಯ ಮಾಡಬೇಕು.
ವಿಶೇಷವಾಗಿ ಗರ್ಭಿಣಿಯರು ಮತ್ತು ಹದಿಹರೆಯದ ಹುಡುಗಿಯರಿಗೆ ಉತ್ತಮ ಆರೈಕೆ ಇರುವುದಿಲ್ಲ. ಅವರು ಹೆರಿಗೆ ಸಮಯದಲ್ಲಿ ಕೆಲವು ಸಮಸ್ಯೆಗಳಿಂದ ನರಳುವ ಸಂಭವವಿರುತ್ತದೆ. ಅವರಿಗೆ ಹೆಚ್ಚುವರಿ ಆಹಾರ ಅಗತ್ಯವಿರುತ್ತದೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಸುರಕ್ಷಿತ ಹೆರಿಗೆ ಮಾಡಿಸಿಕೊಳ್ಳಲು ಸಹಾಯ ಬೇಕಾಗುತ್ತದೆ.
ಕೆಲವು ಸಮಯ ತುಂಬ ತೂಕವಿರುವ ಗರ್ಭಿಣಿಯರು ಹೆಚ್ಚು ಕೊಬ್ಬಿನಾಂಶವಿರುವ ಆಹಾರವನ್ನು ತಿನ್ನುವುದನ್ನು ತಡೆಯುವ ಅಗತ್ಯವಿರುತ್ತದೆ. (ಉದಾಹರಣೆಗೆ : ಎಣ್ಣೆ, ತುಪ್ಪ, ಸಕ್ಕರೆ, ಇತ್ಯಾದಿ). ಆದರೆ ತರಕಾರಿ, ಹಣ್ಣು, ಕಾಯಿ ಬೀಜಗಳಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ, ಜೀವಸತ್ವಗಳು ಮತ್ತು ಖನಿಜಗಳು ಹೆಚ್ಚಾಗಿರುವುದರಿಮದ ಇವುಗಳನ್ನು ಉಪಯೋಗಿಸುವುದನ್ನು ಮುಂದುವರಿಸಬೇಕು.
ಮೂಲ :ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 5/26/2020
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ...
ಆಮ್ನಿಯಾಟಿಕ್ ದ್ರವವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್...
ಆಶಾಳ ಕರ್ತವ್ಯ ಮತ್ತು ಜವಾಬ್ದಾರಿಗಳು
ಗರ್ಭವತಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಒಂದು ಸುಂದರ ಕನಸು...