ಇಲ್ಲಿಯರೆಗೆ ನಾವು ಮಾನವ ಹಕ್ಕು ಮತ್ತು ಮೂಲಭೂತ ಹಕಕುಗಳನ್ನು ಚರ್ಚಿಸಿದೆವು. ಅಲ್ಲದೆ ಹಕ್ಕುಗಳಿಗೆ ಬೇಕಾದ ಮೂಲ ಮಾಹಿತಿಗಳನ್ನು ಸಹ ಚರ್ಚಿಸಿದೆವು. ಈಗ ನಾವು ಆರೋಗ್ಯ ಹಕ್ಕಿನ ಬಗ್ಗೆ ಚರ್ಚಿಸಬೇಕಾಗಿದೆ. ಆಶಾ ಸದಸ್ಯೆಯಾಗಿ ಈ ಹಕ್ಕಿನ ಅರಿವು ಅವಶ್ಯಕ ಇದರಿಂದ ಸಮುದಾಯದ ಸದಸ್ಯರಿಗೆ, ಅವರಿಗೆ ಬೇಕಾದ ಸವಲತ್ತುಗಳನ್ನು ತಿಳಿಸಲು ಮತ್ತು ಜಾಗೃತರಾಗಿರಲು ಸಹಾಯಕವಾಗುತ್ತದೆ. ನೀವು, ಆರೋಗ್ಯದ ಹಕ್ಕನ್ನು ಅರ್ಥಮಾಡಿಕೊಂಡರೆ, ನಿಮಗೆ, ಸಾರ್ವಜನಿಕ ಆರೋಗ್ಯ ಪದ್ಧತಿಯಿಂದ ನಿಮಗೆ ಬೇಕಾದ ಆರೋಗ್ಯ ಸೇವೆಯನ್ನು ಪಡೆಯಲು, ಸಿರಯಾದ ಕಾರ್ಯಾಚಟುವಟಿಕೆ ರೂಪಿಸಲು, ಸಹಾಯಕವಾಗುತ್ತದೆ.
ಮೊದಲಿಗೆ ಆರೋಗ್ಯ ಹಕ್ಕು ಎಂದರೇನು ? ತಿಳಿದುಕೊಳ್ಳೋಣ :
ಆರೋತ್ಯದ ಹಕ್ಕು ಎಂದರೆ
ಸಾರ್ವಜನಿಕ ಆರೋಗ್ಯ ಸೇವೆಯ ಸೌಲಭ್ಯ ಉಪಸ್ಥಿತಿಯಲ್ಲಿ ಇರಬೇಕು ಮತ್ತು ಅಲ್ಲಿ ಸಾಕಷ್ಟು ಔಷಧಿ ಹಗೂ ಉಪಕರಣಗಳು ಇರಬೇಕು. ಈ ಸೌಲಭ್ಯಗಳು ಕಾರ್ಯ ನಿರ್ವಹಿಸುವಂರಿರಬೇಕು ಮತ್ತು ಸರ್ವತೋಮುಖ ಹಾಗೂ ಲಿಂಗ ಸೂಕ್ಷ್ಮತೆ ಇರುವ ಆರೋಗ್ಯ ಕಾರ್ಯಕ್ರಮಗಳಾಗಿರಬೇಕು.
ಆರೋಗ್ಯ ಸೌಲಭ್ಯಗಳು ಮತ್ತು ಸಏವೆಗಳು ಯಾವ ಭೇದವೂ ಇಲ್ಲದೇ ಸರ್ವರಿಗೂ ಲಭಿಸುವಂತಿರಬೇಕು.
ಧರ್ಮ, ಜಾತಿ, ಆರ್ಥಿಕ, ಸ್ಥಿತಿ, ಲಿಂಗ ಇತರೆ ಆಧಾರಗಳ ಮೇಲೆ ಯಾರಿಗೂ ಚಿಕಿತ್ಸೆ ನೀಡಲು ನಿರಾಕರಿಸಬಾರದು.
ಸಾರ್ವನಿಕ ಆರೋಗ್ಯ ಸೌಲಭ್ಯ ಸಿಗುವ ಸ್ಥಳಗಳು ಹತ್ತಿರದಲ್ಲಿದ್ದು, ಸುಲಭವಾಗಿ ಮತ್ತು ಶೀಘ್ರವಾಗಿ ತಲುಪುವ ಸ್ಥಳದಲ್ಲಿರಬೇಕು.
ಆರೋಗ್ಯ ಸೇವೆಗಳು ಹೆಚ್ಚು ಜನರಿಗೆ ಎಟಕುವಂತಿರಬೇಕು.
ಈ ಸೌಲಭ್ಯ ಉಚಿತವಾಗಿ ಸಿಗುವಂತಿರಬೇಕು.
ಸಿರುವ ಸೌಲಭ್ಯಗಳ ಮಾಹಿತಿ ಸಮುದಾಯದ ಜನಗಳಿಗೆ ಯಾವ ಜಾತಿ, ಆರ್ಥಿಕ ಸ್ಥಿತಿ, ಧರ್ಮ, ಲಿಂಗ ಭೇದವಿಲ್ಲದೆ ತಿಳಿಯುವಂತಿರಬೇಕು. ಸಾರ್ವನಿಕ ಆರೋಗ್ಯ ಪದ್ಧತಿಯ ಅಡಿಯಲ್ಲಿ ತಮ್ಮ ಅರ್ಹತೆಯ ಬಗೆಗೂ ಅವರಿಗೆ ಅರಿವಿರಬೇಕು.
ಎಲ್ಲಾ ಆರೋಗ್ಯ ಸೇವೆಯು ಲಿಂಗ ಸೂಕ್ಷ್ಮತೆ ಉಳ್ಳದ್ದಾಗಿರಬೇಕು ಮತ್ತು ಪ್ರತಿಯೊಬ್ಬರ ಜೀವಿತ ಹಂತಗಳ ಅವಶ್ಯಕತೆಗಳನ್ನು ಪೂರೈಸುವಂತಿರಬೇಕು.
ಆರೋಗ್ಯ ಸೌಲಭ್ಯಗಳು ಮತ್ತು ಸೇವೆಗಳ ವೈಜ್ಷಾನಿಕವಾಗಿ ಮತ್ತು ವಐದ್ಯಕೀಯವಾಗಿ ಅನುರೂಪಬಾಗಿದ್ದು ಒಳ್ಲೆಯ ಗುಣಮಟ್ಟದ್ದಾತಿರಬೇಕು.
ನಿಮ್ಮ ಸಮುದಾಯ ಆರೋಗ್ಯ ಹಕ್ಕುಗಳ ರಕ್ಷಣೆ ಆಗುತ್ತಿದೆಯೇ ಎಂದು ತಿಳಿಯಲು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
ಸಾರ್ವಜನಿಕ ಆರೋಗ್ಯ ಪದ್ಧತಿಯ ಮೂಲಕ ನಿಮ್ಮ ಸಮುದಾಯದ ಸದಸ್ಯರಿಗೆಲ್ಲಾ ಆರೋಗ್ಯ ಸೇವೆಯು ಉಚಿತವಾಗಿ ಸಿತುತ್ತಿದೆಯೇ ?
ಉಚಿತ ಆರೋಗ್ಯ ಸೇವೆ ನೀಡಲು ನಿಮ್ಮ ಗ್ರಾಮಕ್ಕೆ ಎ.ಎನ್.ಎಂ.ಕ್ರಮವಾಗಿ ಭೇಟಿ ನೀಡುತ್ತಿದ್ದಾಳೆಯೇ ? ಅವಳು ಗ್ರಾಮದ ಎಲ್ಲಾ ಭಾಗಗಳಿಗೂ ಭೇಟಿ ನೀಡುತ್ತಿದ್ದಾಳೆಯೇ ?
ಆರೋಗ್ಯ ಸೌಲಭ್ಯ ಸಿಗುವ ಸ್ಥಳವು ನಿಮಗೆ ಅನುಕೂಲವಾಗಿದೆಯೇ ?
ನಿಮ್ಮ ಗರಾಮದ ಹೆಚ್ಚಿನ ಜನಗಳಿಗೆ ಆರೋಗ್ಯ ಸೇವೆಯು ಆರ್ಥಿಕವಾಗಿ ಎಟಕುವಂತಿದೆಯೇ?
ನಿಮ್ಮ ಸಮುದಾಯದ ಸದಸ್ಯರಿಗೆ ಎಲ್ಲಾ ಆರೋಗ್ಯ ಸೇವೆಗಳ ಅರಿವು ಇದೆಯೇ ಮತ್ತು ಸಾರ್ವಜನಿಕ ಆರೋಗ್ಯ ಪದ್ಧತಿ ಅಡಿಯಲ್ಲಿ ಪಡೆಯುವ ಅವರ ಹಕ್ಕುಗಳ ಬಗ್ಗೆ ಗೊತ್ತಿದೆಯೆ ?
ನಿಮ್ಮ ಸಮುದಾಯದವರಿಗೆ ಜನನಿ ಸುರಕ್ಷಾ ಯೋಜನೆ, ಬಾಣಂತಿ ಸೇವಾ ಕಾರ್ಯಕ್ರಮಗಳು ಅಥವಾ ಸರ್ಕಾರ ಕೈಗೊಂಡಿರುವ ಇತರೆ ಆರೋಗ್ಯ ಯೋಜನೆಗಳ ಅರಿವು ಇದೆಯೇ ?
ಮೇಲಿನ ಪ್ರಶ್ನೆಗಳಿಗೆ 'ಇಲ್ಲಾ' ಎಂದಾದರೆ ನಿಮ್ಮ ಸಮುದಾಯದಲ್ಲಿ, ಆರೋಗ್ಯ ಹಕ್ಕಿನ ರಕ್ಷಣೆಯಾಗುತ್ತಿಲ್ಲ ಎಂದು ಅರ್ಥ. ಸಮುದಾಯ ಆರೋಗ್ಯ ವ್ಯವಸ್ಥಯ ಅಡಿಯಲ್ಲಿ ಆರೋಗ್ಯ ಸೇವೆಗೆ ಹಣ ಪಾವತಿಸಬೇಕಾಗಿ ಬಂದರೆ, ನಿಮ್ಮ ಸಮುದಾಯ ಸದಸ್ಯರ ಆರೋಗ್ಯದ ಹಕ್ಕು ರಕ್ಷಣೆಯಾಗುತ್ತಿಲ್ಲ. ಆಶಾ ಸದಸ್ಯಯಾಗಿ ಈ ಮೇಲಿನ ಪ್ರಶ್ವೆಗಳಿಗೆ ಉತ್ತರ ಗೊತ್ತಿಲ್ಲದಿದ್ದರೆ ನೀವು ಸಮುದಾಯದ ಜೊತೆಗೆ ಈ ವಿಷಯಗಳನ್ನು ಚರ್ಚಿಸಿ ವಿಷಯವನ್ನು ಸಂಗ್ರಹಿಸತಕ್ಕದ್ದು. ಆರೋಗ್ಯ ಸೌಲಭ್ಯ ಮತ್ತು ಸಮುದಾಯದ ಮಧ್ಯೆ ನೀವು ಒಂದು ಮುಖ್ಯವಾದ ಕೊಂಡಿ.
ಮೂಲ: ಆಶಾ ಕೈಪಿಡಿ
ಕೊನೆಯ ಮಾರ್ಪಾಟು : 1/28/2020