ಪ್ರವಾಹ ಬಂದಿದ್ದಾಗ ನೀರನ್ನು ಕ್ಲೋರಿನೇಷನ್ ಮಾಡುವಂತೆ ಕುಟುಂಬಗಳಿಗೆ ಸಲಹೆ ನೀಡಬೇಕು.
ಅಪಾಯದ ಚಿಹ್ನೆಗಳು ಇದ್ದಾಗ ಮೇಲಿನ ಆಸ್ಪತ್ರೆಗೆ ಕಳುಹಿಸಿಕೊಡಬೇಕು.
ಮಗುವನ್ನು ಎಫ್.ಆರ್.ಯು.ಗೆ ತಕ್ಷಣವೇ ಕರೆದುಕೊಂಡು ಹೋಗುವಂತೆ ಕುಟುಂಬಕ್ಕೆ ಸಲಹೆ ನೀಡಬೇಕು.
ಕೆಳಗಿನ ಅಪಾಯದ ಲಕ್ಷಣಗಳು ಇದ್ದರೆ
ಮಗು ಚಟುವಟಿಕೆಯಿಂದ ಇಲ್ಲದಿದ್ದರೆ
ಕುಡಿಯುವುದಕ್ಕೆ ಅಥವಾ ಎದೆ ಹಾಲು ಕುಡಿಯಲು ಸಾಧ್ಯವಾಗದಿದ್ದರೆ.
ಮಲ ವಿಸರ್ಜನೆಯಲ್ಲಿ ರಕ್ತ ಕಾಣುತ್ತಿದ್ದರೆ.
8 ಗಂಟೆ ಮೂತ್ರ ವಿಸರ್ಜನೆ ಮಾಡದಿದ್ದರೆ.
ಎಫ್.ಆರ್.ಯು. ಇರುವ ಸ್ಥಳವನ್ನು ನೀವು ತಿಳಿದುಕೊಳ್ಳಬೇಕು. ಇದರಿಂದ ನೀವು ಸಲಹೆ ನೀಡಬಹುದು. ತಾಯಿ/ಕುಟುಂಬ ಮಕ್ಕಳೊಂದಿಗೆ ಎಫ್.ಆರ್.ಯು.ಗೆ ಹೋಗುವಾಗ ನೀವು ಬೆಂಗಾವಲಾಗಿ ಹೋಗಬಹುದು.
ಮೂಲ :ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 8/24/2019