অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅತಿಸಾರಭೇದಿ

ಅತಿಸಾರಭೇದಿ

ನೀರು ನೀರಾಗಿ ಮಲವಿಸರ್ಜನೆಯಾದರೆ ಅದನ್ನು ಅತಿಸಾರಭೇದಿ ಎಂದು ಕರೆಯಲಾಗುತ್ತದೆ. ಒಂದು ದಿನದಲ್ಲಿ ನೀರು ನೀರಾಗಿ 3 ಬಾರಿ ಮಲವಿಸರ್ಜನೆಯಾಗುತ್ತದೆ. ಒಂದೇ ಬಾರಿಗೆ ಹೆಚ್ಚು ನೀರುಳ್ಳ ಮಲವಿಸರ್ಜನೆಯಾದರೆ ಅದನ್ನು ಸಹ ಅತಿಸಾರಭೇದಿ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ 3 ರೀತಿಯ ಅತಿಸಾರ ಭೇದಿಗಳು ಇರುತ್ತವೆ.

ತೀವ್ರ ನೀರಾದ ಭೇದಿ ನೀರು ನೀರಾಗಿ ಮಲವಿಸರ್ಜನೆ ಪ್ರಾರಂಭವಾಗುತ್ತದೆ ಮತ್ತು ಇದು ಅನೇಕ ದಿನಗಳು ಮುಂದುವರಿಯುತ್ತದೆ. ಆದರೆ 14 ದಿನಗಳ ಮೇಲೆ ಆಗಬಾರದು. ಅವುಗಳಲ್ಲಿ ಬಹಳಷ್ಟು ಸ್ವಯಂ ನಿಯಂತ್ರವಾಗುತ್ತವೆ ಮತ್ತು 3 ರಿಂದ 7 ದಿನಗಳವರೆತೆ ಮುಂದುವರಿಯುತ್ತವೆ.

ಡಿಸೆಂಟ್ರಿ ನೀರಾದ ಭೇದಿ ಜೊತೆಗೆ ರಕ್ತ ಕಾಣಿಸಿದರೆ

ಪ್ರಾರಂಭದಲ್ಲಿ ತೀವ್ರವಾಗಿ ಭೇದಿಯಾಗುತ್ತದೆ. ಆದರೆ ಸಾಮಾನ್ಯವಾಗಿ ಬಹಳ ಕಾಲ. ಉದಾಹರಣೆಗೆ : 14 ದಿನಗಳ ನಂತರವು.

5 ವರ್ಷದೊಳಗಿನ ಮಕ್ಕಳ ಕಾಯಿಲೆಗಳಿಗೆ ಹಾಗೂ ಸಾವಿಗೆ ಅತಿಸಾರಭೇದಿ ಬಹು ಪ್ರಮುಖವಾದ ಕಾರಣವಾಗುತ್ತದೆ. ಅತಿಸಾರಭೇದಿ ರೋಗದಿಮದ ಸಂಭವಿಸುವ ಸಾವುಗಳಲ್ಲಿ ಹೆಚ್ಚು ಸಾವುಗಳು ನಿರ್ಜಲೀಕರಣದಿಂದಾಗಿರುತ್ತವೆ (ನೀರು ಮತ್ತು ಖನಿಜಗಳ ನಷ್ಟದಿಂದ)

ಮಗುವಿಗೆ ಅತಿಸಾರಭೇದಿ ಇದ್ದರೆ 4 ಚಿನ್ನದ ನಿಯಮಗಳನ್ನು ಪಾಲಿಸಿ.

ಮಗುವಿಗೆ ಹಾಲು ಉಣಿಸುತ್ತಿದ್ದರೆ, ಪದೇ ಪದೇ ಎದೆಹಾಲು ಕುಡಿಸುವುದನ್ನು ಮುಂದುವರಿಸಿ.

ಮತು ಆಹಾರ ತಿನ್ನುವುದನ್ನು ಪ್ರಾರಂಭಿಸಿದ್ದರೆ, ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಿಸುವುದನ್ನು ಮುಂದುವರೆಸಿ.

  1. ಹಾಲು ಉಣಿಸುವುದನ್ನು ಮುಂದುವರಿಸಬೇಕು.
  2. ಹೆಚ್ಚುವರಿ ದ್ರವಗಳನ್ನು ಕೊಡಿಸಬೇಕು.
  3. ಓ.ಆರ್.ಎಸ್. ಕೊಡಬೇಕು.
  4. ಅಪಾಯದ ಲಕ್ಷಣಗಳು ಇದ್ದರೆ ಮೇಲಿನ ಆಸ್ಪತ್ರೆಗೆ ಕಳುಹಿಸಬೇಕು

ಮಗು ಗುಣಮುಖವಾದ ಮೇಲೆ ಮತ್ತು ಸಾಮಾನ್ಯ ಹಸಿವು ಮತ್ತಿ ಬಂದ ಮೆಲೆ ಕಳೆದು ಹೋಗಿರುವ ತೂಕವನ್ನು ಪಡೆದುಕೊಳ್ಳಲು ಸಾಮಾನ್ಯಕ್ಕಿಂತ ಹೆಚ್ದಚು ಆಹಾರವನ್ನು ಕೊಡಬೇಕು.

ಹೆಚ್ಚುವರಿ ದ್ರವಗಳನ್ನು ಕೊಡಬೇಕು.

ಓ.ಆರ್.ಎಸ್. ದ್ರಾವಣ ಕೊಡಲು ತಾಯಿಗೆ ತಿಳಿಸಬೇಕು. ವಿಶೇಷವಾಗಿ ಮುಂಗಾರು ಮಳೆಗಾಲದಲ್ಲಿ ಮತ್ತು ಅತಿಸಾರಭೇದಿ ಕಾಣಿಸಿಕೊಂಡ ಅವಧಿಯಲ್ಲಿ. ನೀವು ದಾಸ್ತಾನುಗಾರರಾಗಿರುವುದರಿಂದ ಸಾಕಷ್ಟು ಓ.ಆರ್.ಎಸ್. ಪ್ಯಾಕೇಟುಗಳನ್ನು ದಾಸ್ತಾನು ಮಾಡಿಕೊಂಡಿರಬೇಕು.

ಓ.ಆರ್.ಎಸ್. ತಯಾರಿಸುವ ಬಗ್ಗೆ ತಾಯಿಗೆ ಮಾರ್ಗದರ್ಶನ ನೀಡಬೇಕು. ನಿಮ್ಮ ಕೈಯನ್ನು ಸೋಪು ಮತ್ತು ನೀರಿನಿಂದ ಚೆನ್ನಾಗಿ ತೊಳೆದ ಮೇಲೆ ಶುಚಿಯಾದ ಪಾತ್ರೆಯಲ್ಲಿ ಒಂದು ಲೀಟರ್ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಪ್ಯಾಕೆಟ್ ಓ.ಆರ್.ಎಸ್.ನ್ನು ಹಾಕಿ ಮತ್ತು ಇದನ್ನು ಚೆನ್ನಾಗಿ ಕಲಕಿ. ಅದರಿಮದ ಪುಡಿ ಚೆನ್ನಾಗಿ ನೀರಿನಲ್ಲಿ ಸೇರುತ್ತದೆ. ತಟ್ಟೆಯನ್ನು ಮುಚ್ಚಿ ಈ ಕೆಳಗಿನ ಟೇಬಲ್‍ನಂತೆ ಶಿಶುವಿಗೆ ಪ್ರತಿ 2 ನಿಮಿಷಕ್ಕೆ ಒಂದು ಚಮಚದಷ್ಟು ತಯಾರಿಸಿದ ಓ.ಆರ್.ಎಸ್.ನ್ನು ಕುಡಿಸಬೇಕು.

ತಾಯಿಗೆ ಮನೆಯಲ್ಲಿ ದೊರೆಯುವ ದ್ರವಗಳು ಕೊಡಲು ಸಲಹೆ ನೀಡಿ (ಉದಾಹರಣೆಗೆ : ಶುದ್ಧ ನೀರು, ಲಸ್ಸಿ, ಸಿಹಿಗಂಜಿ)

2 ತಿಂಗಳವರೆಗೆ  2 ತಿಂಗಳಿಂದ 2 ವರ್ಷದವರೆಗೆ     2 ವರ್ಷಗಳ ನಂತರ

5 ಚಮಚ       1/4 - 1/2 ಕಪ್ 1/2 - 1 ಕಪ್

ಮಗು ಬೇಕೆಂದರೆ ಹೆಚ್ಚು ಕೊಡಬೇಕು.

ಈ ಕೆಳಕಂಡ ಕ್ರಮಗಳಿಂದ ಅತಿಸಾರಭೇದಿಯನ್ನು ತಡೆಗಟ್ಟಬಹುದು.

  • ಮೊದಲನೇ 6 ತಿಂಗಳ ತನಕ ತಾಯಿ ಎದೆ ಹಾಲನ್ನೇ ಕುಡಿಸಬೇಕು.
  • ಮಗುವಿಗೆ ಆಹಾರ ತಿನ್ನಿಸುವುದಕ್ಕೆ ಮುನ್ನ ಮತ್ತು ಆಹಾರ ತಯಾರಿಸುವ ಮುನ್ನ ಚೆನ್ನಾಗಿ ಕೈಗಳನ್ನು ತೊಳೆಯಬೇಕು.
  • ಆಹಾರ ತಯಾರಿಸಲು ಬಳಸುವ ಪಾತ್ರೆಗಳನ್ನು ಚೆನ್ನಾಗಿ ಸ್ವಚ್ಛ ಮಾಡಿರಬೇಕು ಮತ್ತು ಮಗುವಿಗೆ ಆಹಾರ ತಿನ್ನಿಸಲು ಉಪಯೋಗಿಸುವ ಪಾತ್ರೆಗಳನ್ನು ಸ್ವಚ್ಛವಾಗಿಡಬೇಕು.
  • ಆಹಾರವನ್ನು ಮುಚ್ದಚಿಡಬೇಕು.
  • ಕುಡಿಯುವ ನೀರನ್ನು ಮುಚ್ಚಿಡಬೇಕು.

ಆಹಾರ ತಯಾರಿಸಿದ ಒಂದು ಗಂಟೆಯೊಳಗೆ ಸೇವಿಸಬೇಕು.

ಮನೆ ಮತ್ತು ಅಕ್ಕಪಕ್ಕದ ಪ್ರದೇಶವನ್ನು ಶುಚಿಯಾಗಿಡಬೇಕು. ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು ಅದರಿಂದ ನೊಣಗಳು ಉತ್ಪತ್ತಿಯಾಗುವುದಿಲ್ಲ.

ಮನೆಯಲ್ಲಿಯೇ ಶೌಚಾಲಯ ನಿರ್ಮಿಸುವಂತೆ ಕುಟುಂಬದವರೆಗೆ ಸಲಹೆ ಮಾಡಬೇಕು.

ಮೂಲ :ಆಶಾ ಕಲಿಕೆ ಕೈಪಿಡಿ

ಕೊನೆಯ ಮಾರ್ಪಾಟು : 7/22/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate