ಪವನ’ ಎಂದರೆ ಗಾಳಿ ಎಂದರ್ಥ. ಮುಕ್ತಾ ಎಂದರೆ ಬಿಡುಗಡೆ ಹೊಂದುವುದು. ಹೀಗಾಗಿ ಪವನಮುಕ್ತಾಸನವೆಂಬ ಹೆಸರು ಈ ಆಸನಕ್ಕೆ ಅನ್ವರ್ಥವಾಗಿದೆ.
ಮಾಡುವ ಕ್ರಮ :
ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ಅಂಗಾತನಾಗಿ ನೇರವಾಗಿ ಮಲಗಬೇಕು. ಅನಂತರ ಯಾವುದಾದರೂ ಒಂದು ಕಾಲನ್ನು ಉದಾಹರಣೆಗೆ, ಬಲಗಾಲನ್ನು ನೆಲದಿಂದ ಮೇಲಕ್ಕೆ ಎತ್ತಿ ನಿಧಾನವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಾ ಮಂಡಿಯ ಬಳಿ ಬಗ್ಗಿಸಿ, ಚಿತ್ರದಲ್ಲಿ ತೋರಿಸುವಂತೆ ಎದೆಯ ಮೇಲೆ ಇಡಬೇಕು. ಹಾಗೆಯೇ ತಲೆಯನ್ನೂ ಮುಂದಕ್ಕೆ ಬಗ್ಗಿಸಿ, ಉಸಿರನ್ನು ಹೊರಕ್ಕೆ ಬಿಡುತ್ತಾ ಬಲಗಾಲಿನ ಮಂಡಿ ಮತ್ತು ಮೂಗು ಪರಸ್ಪರ ತಗಲಿಸಲು ಪ್ರಯತ್ನಿಸಬೇಕು. ಆದರೆ ಈ ಸ್ಥಿತಿಯಲ್ಲಿ ಎದೆ ಸಂಪೂರ್ಣವಾಗಿ ನೆಲದ ಮೇಲೆ ಇರುವಂತೆ ಗಮನ ವಹಿಸಬೇಕು. ಒಮ್ಮೆ ಬಲಗಾಲಿನಿಂದ ಮಾಡಿದ ತರುವಾಯ ಎಡಗಾಲಿನಿಂದಲೂ ಇದೇ ರೀತಿ ಮೇಲೆ ಹೇಳಿದಂತೆ ಮಾಡಬೇಕು. ಈ ರೀತಿ ಸುಮಾರು ಐದಾರು ಬಾರಿ ಎರಡೂ ಕಾಲಿನಿಂದ ಮತ್ತು ಸುಮಾರು 5 ನಿಮಿಷಗಳ ಕಾಲ ಈ ಆಸನವನ್ನು ನಿಧಾನವಾಗಿ ಮಾಡಬೇಕು.
ಲಾಭಗಳು: ಹೊಟ್ಟೆ ಜಾಸ್ತಿ ಮುಂದಕ್ಕೆ ಬಂದವರು ಈ ಆಸನ ಹೆಚ್ಚು ಅಭ್ಯಾಸ ಮಾಡಿದಲ್ಲಿ, ಹೊಟ್ಟೆಯ ಬೊಜ್ಜು ಕರಗಿ ತೆಳ್ಳಗಾಗುವುದು. ಅಲ್ಲದೆ ಹೊಟ್ಟೆಗೆ ಸಂಬಂಧಿಸಿದ ಅನೇಕ ವಿಕಾರಗಳೂ ನಾಶವಾಗುವವು. ಹಸಿವು ಹೆಚ್ಚಾಹುವುದು. ಮಲಬದ್ಧತೆಯೂ ಸಾಕಷ್ಟು ನಿವಾರಣೆಯಾಗುವುದು.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 10/16/2019