ಬೇಕಾಗುವ ಸಾಮಾಗ್ರಿಗಳು: 4 ಲೋಟ ಗಟ್ಟಿ ಮೊಸರು, 10 ತುಂಡು ಮಾಡಿದ ಏಡಿ, 15 ಮೆಣಸಿನಕಾಯಿ, ಒಂದು ಚಮಚ ಜೀರಿಗೆ, 3 ಚಮಚ ವಿನಿಗರ್, 2 ಚಮಚ ಮೆಣಸು, ಒಂದು ಬಟ್ಟಲು ತೆಂಗಿನ ತುರಿ, ರುಚಿಗೆ ಉಪ್ಪು
ಮಾಡುವ ವಿಧಾನ: ಏಡಿ ತುಂಡುಗಳನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ ತೆಗೆದಿಡಿ. ಹಸಿಮೆಣಸಿನಕಾಯಿ, ಜೀರಿಗೆ, ಮೆಣಸು, ತೆಂಗಿನ ತುರಿ, ಉಪ್ಪನ್ನು ವಿನಿಗರ್ನಲ್ಲಿ ನುಣ್ಣಗೆ ರುಬ್ಬಿ. ಇದನ್ನು ಬೇಯಿಸಿದ ಏಡಿಗೆ ಬೆರೆಸಿ ಕೆದಕಿ ಒಂದು ಗಂಟೆ ಕಾಲ ಮುಚ್ಚಿಡಿ. ನಂತರ ಅದನ್ನು ಸಣ್ಣ ಉರಿಯಲ್ಲಿ ಬೇಯಿಸಿ ಗಟ್ಟಿ ಮೊಸರಿಗೆ ಹಾಕಿ ಕೆದಕಿಡಿ.
ಮೂಲ: ಎನ್.ಡಿ.ಸವಿತಾ
ಕೊನೆಯ ಮಾರ್ಪಾಟು : 1/28/2020