ಶಕ್ತಿ –ಸುರಭಿಯು ಅಡುಗೆಮನೆಯ ತ್ಯಾಜ್ಯವನ್ನು ಆಧರಿಸಿದ ಜೈವಿಕ ಅನಿಲ ಸ್ಥಾವರ. ಇದು ಸಾಂಪ್ರದಾಯಿಕ ಜೈವಿಕ ಅನಿಲ ಸ್ಥಾವರದ ನಿಯಮದ ಆಧಾರದ ಮೇಲೆಯೇ ಕೆಲಸಮಾಡುತ್ತದೆ. ಆದರೆ ನಗರ ಜೀವನದ ಅಗತ್ಯಗಳಿಗೆ ಅನುಗುಣವಾಗಿ ಅದರಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಸ್ಥಾವರವು ತ್ಯಾಜ್ಯ ಉಣಿಸುವ ನಳಿಕೆ, ಪಾಚಕ(ಡೈಜೆಸ್ಟರ್), ಅನಿಲ ಸಂಗ್ರಾಹಕ, ನೀರಿನ ಮೇಲ್ಗವಚ (ಜಾಕೆಟ್), ಅನಿಲ ಸಾಗಾಣಿಕಾ ವ್ಯವಸ್ಥೆ, ಹಾಗೂ ಹೊರ ಸಾಗಿಸುವ ನಳಿಕೆಯನ್ನು ಹೊಂದಿರುತ್ತದೆ. ಇದನ್ನು ತಮಿಳು ನಾಡಿನ, ಕನ್ಯಾಕುಮಾರಿ ವಿವೇಕಾನಂದ ಕೇಂದ್ರದ ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಕೇಂದ್ರವು ವೃದ್ಧಿಪಡಿಸಿದೆ.
ಈ ಶಕ್ತಿ –ಸುರಭಿ ಜೈವಿಕ ಅನಿಅಲ ಸ್ಥಾವರವು ಸಾಂಪ್ರದಾಯಿಕ ಅನಿಲ ಸ್ಥಾವರದಿಂದ ಹೇಗೆ ವಿಭಿನ್ನವಾಗಿ ಕೆಲಸಮಾಡುತ್ತದೆ?
ಸಾಂಪ್ರದಾಯಿಕ ಜೈವಿಕ ಅನಿಲ ಸ್ಥಾವರಗಳಿಗೆ ಜಾನುವಾರುಗಳ ತೊಪ್ಪೆ/ ಸೆಗಣಿಯೇ ಮೂಲವಸ್ತು. ಪ್ರತಿ ದಿನವೂ ಸೆಗಣಿಯನ್ನು ಬಗ್ಗಡದ ರೀತಿಯಲ್ಲಿ ಮಿಶ್ರಮಾಡಿ ಅನಿಲ ತೊಟ್ಟಿಗೆ ಸುರಿಯಬೇಕಾಗುತ್ತದೆ. ಆದರೆ ಶಕ್ತಿ- ಸುರಭಿಗೆ ಪ್ರಥಮ ಹಂತದಲ್ಲಿ ಮಾತ್ರ ಸೆಗಣಿ ಅಗತ್ಯ. ಕ್ರಮೇಣ, ಅಗತ್ಯ ಪ್ರಮಾಣದಲ್ಲಿ ಅನಿಲ ಉತ್ಪಾದನೆ ಮಾಡಲು ಕೇವಲ ಅಡುಗೆ ಮನೆಯ ತ್ಯಾಜ್ಯ, ಬಳಸಿ ಉಳಿದ ಆಹಾರ ಸಾಮಗ್ರಿ(ಸಸ್ಯಾಹಾರವಾಗಿರಲಿ ಯಾ ಮಾಂಸಾಹಾರವಾಗಿರಲಿ), ತರಕಾರಿ ತ್ಯಾಜ್ಯ, ಹಿಟ್ಟಿನ ಗಿರಣಿಯ ತ್ಯಾಜ್ಯಗಳು, ಖಾದ್ಯವಲ್ಲದ ಎಣ್ಣೆ ಬೀಜಗಳ ಉಳಿಕೆ (ಜತ್ರೋಪ, ಬೇವು, ಇತ್ಯಾದಿ), ಇವುಗಳು ಸಾಕು. ಈ ಸ್ಥಾವರವು 500 ಲೀಟರ್ ನಿಂದ 1,500 ಲೀಟರ್ ಸಾಮರ್ಥ್ಯದಲ್ಲಿ ಎರಡು ಆಕರ್ಷಕ ಬಣ್ಣ ಗಳಲ್ಲಿ ಲಭ್ಯವಿದೆ.
ಇದನ್ನು ಸುಲಭವಾಗಿ ಸಂಸ್ಥಾಪಿಸಬಹುದು ಅಥವಾ ಬೇರೆಡೆಗೆ ಸಾಗಿಸಬಹುದು; (ಸ್ವತಂತ್ರವಾಗಿದ್ದರೆ) ಮನೆಯ ಹಿಂಭಾಗದಲ್ಲೇ ಇರಿಸಬಹುದು, ಅಥವಾ ಛಾವಣಿಯ ಮೇಲೆ ಇಲ್ಲವೇ ನೆರಳು ಬೀಳುವ ಸಮತಲ ಪ್ರದೇಶದಲ್ಲಿ ಇರಿಸಬಹದು.
ಆಹಾರ್ಯ ಸಾಮಗ್ರಿಗಳ ಅಗತ್ಯವಿರುತ್ತದೆ
ಘನ ಮೀಟರ್ ಸ್ಥಾವರಕ್ಕೆ , 0.43 ಕಿ.ಗ್ರಾಂ. ಅಡುಗೆ ಅನಿಲ ಕ್ಕೆ ಸಮನಾದ 5 ಕಿ.ಗ್ರಾಂ. ತ್ಯಾಜ್ಯ ಅವಶ್ಯವಾಗಿ ಬೇಕು. 100 ಘನ ಮೀಟರ್ ಸ್ಥಾವರವು ಒಂದು ಮನೆಗೆ ಅಗತ್ಯವಿರುವ, 20-ಘಂಟೆಯ ವಿದ್ಯುತ್ ಬಳಕೆಗೆ ಬೇಕಾಗುವ, 5 ಕಿ .ವ್ಯಾ. ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಅಂದಾಜು ಮಾಡಲಾಗಿದೆ. ಈ ಪ್ರಕ್ರಿಯೆಯು ಸ್ವಚ್ಛ ಹಾಗೂ ವಾಸನಾ ಮುಕ್ತವಾಗಿದೆ. ಈ ಸ್ಥಾವರವು ಜಾಗತಿಕ ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವ ಹಾಗೂ ಹಸಿರು ಮನೆ ಪರಿಣಾಮವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಸ್ಥಾವರದಿಂದ ಹೊರಹೊಮ್ಮುವ ಬಗ್ಗಡವು ಕೃಷಿಗೆ ಅತ್ಯಂತ ಉಪಯುಕ್ತವಾದ ಸಾವಯವ ಗೊಬ್ಬರವಾಗಿ ಕೆಲಸಮಾಡುತ್ತದೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ವಿವೇಕಾನಂದ ಕೇಂದ್ರ- ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಯೋಜನೆ, ವಿ.ಕೆ. ನಾರ್ಡೆಪ್ ವಿವೇಕಾನಂದಪುರಂ, ಕನ್ಯಾಕುಮಾರಿ-629 702 ,ತಮಿಳು ನಾಡು, ಮಿಂಚಂಚೆ. vknardep@gmail.com ದೂರವಾಣಿ: 04652 246296 ಮತ್ತು 04652 -247126.ಆಕರ : ಹಿಂದೂ
ಕೊನೆಯ ಮಾರ್ಪಾಟು : 12/31/2019
ಪ್ರೋಟೀನ್ಸ್ ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿವೆ. ಅಮೈನೋ ಆಮ್...
ಬಯೋ ಗ್ಯಾಸ್ ಘಟಕದ ಅನುಕೂಲಗಳು ಬಗ್ಗೆಗಿನ ಮಾಹಿತಿ ಇಲ್ಲಿ ಲಭ...
ಪರ್ಯಾಯ ಇಂಧನ ಮೂಲಗಳು ಕುರಿತು ಇಲ್ಲಿ ತಿಳಿಸಲಾಗಿದೆ.