ಕ್ರಮ ಸಂಖ್ಯೆ |
|
|
1 |
ಮಗುವಿಗೆ ಒಂದು ಮೀಟರ್ ದೂರ ಚಾಚಿದ ಕೈಯ ಬೆರಳುಗಳನ್ನು ಎಣಿಸಲು ಕಷ್ಟವಾಗುತ್ತಿದೆಯೇ? |
ಹೌದು / ಇಲ್ಲ |
2 |
ಬೆಳಕಿನ ಮೂಲದ ಕಡೆಗೆ ಮಗುವು ತನ್ನ ತಲೆಯನ್ನು ತಿರುಗಿಸುತ್ತಿದೆಯೇ? |
ಹೌದು / ಇಲ್ಲ |
3 |
ಮಗುವು ತನ್ನ ಕಣ್ಣುಗಳನ್ನು ಆಗಾಗ ತಿಕ್ಕುತ್ತಿದೆಯೇ? |
ಹೌದು / ಇಲ್ಲ |
4 |
ಮಗುವು ಓದುವಾಗ ಪುಸ್ತಕವನ್ನು ತನ್ನ ಕಣ್ಣುಗಳಿಗೆ ಅತಿ ಹತ್ತಿರವಾಗಿ / ದೂರವಾಗಿ ಹಿಡಿಯುತ್ತಿದೆಯೇ? |
ಹೌದು / ಇಲ್ಲ |
5 |
ಮಗುವು ಕಪ್ಪು ಹಲಗೆಯ ಮೇಲೆ ಬರೆದದ್ದನ್ನು ಬರೆದುಕೊಳ್ಳುವಾಗ ಪದೇ ಪದೇ ಇತರೆ ಮಕ್ಕಳನ್ನು ಕೇಳುತ್ತಿದೆಯೇ? |
ಹೌದು / ಇಲ್ಲ |
6 |
ಮಗುವು ತನ್ನ ಪಕ್ಕದಲ್ಲಿರುವ ವಸ್ತುಗಳನ್ನು ಮಾಲುಗಣ್ಣಿನಿಂದ ನೋಡುತ್ತಿದೆಯೇ? |
ಹೌದು / ಇಲ್ಲ |
7 |
ಮೊದಲ ಸಾಲಿನಲ್ಲೇ ಕುಳಿತಿದ್ದರೂ ಕಪ್ಪು ಹಲಗೆಯ ಮೇಲೆ ಬರೆದದ್ದನ್ನು ಮಗುವು ಓದಲು ಕಷ್ಟ ಪಡುತ್ತಿದೆಯೇ? |
ಹೌದು / ಇಲ್ಲ |
8 |
ಬಣ್ಣಗಳನ್ನು ಗುರುತಿಸುವಲ್ಲಿ / ಹೋಲಿಸುವಲ್ಲಿ ಮಗುವು ವಿಫಲವಾಗುತ್ತಿದೆಯೇ? |
ಹೌದು / ಇಲ್ಲ |
9 |
ಮಗುವಿನ ಕಣ್ಣಿನ ಆಕೃತಿಯಲ್ಲಿ ಅಸಹಜತೆಯೇನಾದರೂ ಇದೆಯೇ (ಉಬ್ಬಿದ ಕಣ್ಣು / ದೊಡ್ಡಕಣ್ಣು / ತೀರಾ ಚಿಕ್ಕ ಕಣ್ಣು)? |
ಹೌದು / ಇಲ್ಲ |
10 |
ಮಗುವಿನ ಕಣ್ಣಲ್ಲಿ ಆಗಾಗ ನೀರರೂರುತ್ತಿದೆಯೇ? |
ಹೌದು / ಇಲ್ಲ |
11 |
ಚಲಿಸುತ್ತಿರುವ ವಸ್ತುಗಳನ್ನು ಗಮನಿಸುವಲ್ಲಿ ಮಗುವಿಗೆ ಕಷ್ಟವಾಗುತ್ತಿದೆಯೇ? |
ಹೌದು / ಇಲ್ಲ |
12 |
ವಾತಾವರಣದಲ್ಲಿನ ಬೆಳಕಿನ ಪ್ರಮಾಣದ ಬದಲಾವಣೆಯಿಂದ ಮಗುವು ಗೊಂದಲಕ್ಕೆ ಈಡಾಗುತ್ತದೆಯೇ? |
ಹೌದು / ಇಲ್ಲ |
13 |
ಮಗುವು ಸದಾ ಕಣ್ಣು ಪಿಳುಕಿಸುತ್ತಿದೆಯೇ? |
ಹೌದು / ಇಲ್ಲ |
14 |
ಮಗುವು ೪-೫ ಮೀಟರ್ ದೂರದಲ್ಲಿನ ವಸ್ತುಗಳು / ಜನರನ್ನು ಗುರುತಿಸಲು ಕಷ್ಟ ಪಡುತ್ತಿದೆಯೇ? |
ಹೌದು / ಇಲ್ಲ |
ಗಮನಿಕೆ: ಮೇಲಿನ ಪ್ರಶ್ನೆಗಳಲ್ಲಿ ೪-೫ ಉತ್ತರಗಳು ಹೌದು ಎಂದಾದರೆ , ಮಗುವನ್ನು ತಜ್ಞವೈದ್ಯರ ಬಳಿಗೆ ಕರೆದೊಯ್ದು ಕೂಲಂಕುಷ ಚಿಕಿತ್ಸೆಗೆ ಒಳಪಡಿಸಬೇಕು.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 1/28/2020