ವಿಲಿಯಂ , ಎಸ್ ನೊಲೆಸ್ (1917--) ೨೦೦೧
ಅಸಂಸಂ-ರಸಾಯನಶಾಸ್ತ್ರ- ಜೀವರಸಾಯನಗಳ ವಿಶ್ಲೇಷಣೆಗೆ ಅಸಮಾಂಗೀಯ ಜಲಜನಕೀಕರಣದ (Unsymmetrical Hydrogenation) ತಂತ್ರವನ್ನು ಪರಿಚಯಿಸಿದಾತ.
ಅಸಂಸಂಗಳ ಮೆಸಾಚುಸೆಟ್ಸ್ ಪ್ರಾಂತ್ಯದ ಟಾನ್‍ಟನ್‍ನಲ್ಲಿ 1 ಜೂನ್ 1917ರಂದು ನೊಲೆಸ್ ಜನಿಸಿದನು. ಈತನ ಕುಟುಂಬದಲ್ಲಿ ವ್ಯಾಪಾರ ಪ್ರಾಶಸ್ತ್ಯ ಹೊಂದಿ ಶಿಕ್ಷಣಕ್ಕೆ ಅಂತಹ ಆದ್ಯತೆಯಿರಲಿಲ್ಲ. ಆದರೆ ನೊಲೆಸ್‍ನ ತಾಯಿ ಮಗ ದೊಡ್ಡ ವೈದ್ಯನಾಗಬೇಕೆಂದು ಆಶಿಸಿದ್ದಳು. ಪದವಿಪೂರ್ವ ಶಿಕ್ಷಣ ಮುಗಿಸಿದ ನಂತರ ಇಂಜಿನ್ ರಹಿತವಾದ ನೌಕೆಯಲ್ಲಿ ನಾರ್ವೆಗೆ ಯಾನ ಸಜ್ಜುಗೊಂಡಿದ್ದಿತು. ನೊಲೆಸ್ ಈ ಯಾನದಲ್ಲಿ ಭಾಗಿಯಾಗಿದ್ದನು. ಈ ನೌಕೆ ಬಾಲ್ವಿಕ್ ಸಮುದ್ರ ಹಾದು ಸ್ಟಾಕ್‍ಹೋಂ ತಲುಪಿದ್ದಿತು. 1939ರಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿದ ನೊಲೆಸ್ ಕೆಲಕಾಲ ಕೊಲಂಬಿಯಾದಲ್ಲಿ ಕೆಲಸ ಮಾಡಿದನು. 1942ರಲ್ಲಿ ಓಹಿಯೋ ರಾಜ್ಯದ ಡೇಟನ್‍ನ ಥಾಮಸ್ ಅಂಡ್ ಹಾಕ್‍ವಾಲ್ಟ್ ಸಂಸ್ಥೆ ಸೇರಿದನು. 1944ರಲ್ಲಿ ಯುದ್ದದ ಸಮಯದಲ್ಲಿ ಸೈನಿಕ ಉಡುಗೆಗಳನ್ನು ಚಿಗಟ ದೂರವಿರುವಂತೆ ಮಾಡುವ ರಾಸಾಯನಿಕಗಳ ಸಂಶೋಧನೆಯಲ್ಲಿದ್ದನು. ಈ ವೇಳೆಗೆ ಕಾರ್ಟಿಸೋನ್‍ನ್ನು ಪ್ರತ್ಯೇಕಿಸಲಾಗಿದ್ದಿತು. ಮೊನ್ಸಾಂಟೋ ಕಂಪನಿ ಇದನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಿ, ಚೈಕಿತ್ಸಕವಾಗಿ ಬಳಸುವ ಯೋಜನೆ ಹಮ್ಮಿಕೊಂಡಿತು. ಈ ಯೋಜನೆಯಲ್ಲಿ ನೊಲೆಸ್ ಭಾಗಿಯಾದನು. ಇಲ್ಲಿರುವಾಗ ಅಸಮಾಂಗೀಯ ಜಲಜನಕೀಕರಣದ ತಂತ್ರವನ್ನು ನೊಲೆಸ್ ರೂಪಿಸಿದನು. ಇದು ಜೀವರಸಾಯನಗಳ ವಿಶ್ಲೇಷಣೆಗೆ , ರಾಚನಿಕ ಸ್ವರೂಪ ನಿರ್ಧಾರಕ್ಕೆ ಅಪಾರ ನೆರವಿತ್ತಿತು. ಈ ಸಾಧನೆಗಾಗಿ ನೊಲೆಸ್ 2001ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/25/2019