ವೈವೆಸ್, ಷಾವಿನ್ (1930--) ೨೦೦೫
ಬೆಲ್ಜಿಯಂ-ರಸಾಯನಶಾಸ್ತ್ರ-ಪೆಟ್ರೊಲ್ ಇಂಧನಗಳ ಉತ್ತಮಿಕೆಯ ತಂತ್ರ ರೂಪಿಸಿದಾತ.
ವೈವೆಸ್, ಬೆಲ್ಜಿಯಂ ಹಾಗೂ ಫ್ರಾನ್ಸ್’ನ್ನುs ಪ್ರತ್ಯೇಕಿಸುವ ಲೈಸ್ ನದಿಯ ಗಡಿ ಪಟ್ಟಣದಲ್ಲಿ 10 ಅಕ್ಟೋಬರ್ 1930ರಂದು ಜನಿಸಿದನು. ಈತನ ಪೂರ್ವಿಕರು ಫ್ರೆಂಚ್ ಮೂಲದವರಾಗಿದ್ದು ಸಣ್ಣ ಕೃಷಿ ಹಿಡುವಳಿದಾರರಾಗಿದ್ದರು. ಈತನ ತಂದೆ ವೈದ್ಯುತ್ ಇಂಜಿನಿಯರಾಗಿದ್ದು ಎರಡೂ ಜಾಗತಿಕ ಯುದ್ದಗಳಲ್ಲಿ ಭಾಗವಹಿಸಿದ್ದನು. ಕೆಲಕಾಲ ಯುದ್ದ ಸೆರೆಯಾಳಾಗಿ ಕಾರಾಗೃಹದಲ್ಲಿದ್ದನು. ವೈವೆಸ್ ಎಂದಿಗೂ ಪ್ರತಿಭಾವಂತ ವಿದ್ಯಾರ್ಥಿಯೆನಿಸಿರಲಿಲ್ಲ. ಈತ ಸನ್ನಿವೇಶಗಳಿಗೆ ತಕ್ಕಂತೆ ವರ್ತಿಸಿ ರಸಾಯನಶಾಸ್ತ್ರವನ್ನು ಅಧ್ಯಯನ ಮಾಡಿದನು. ಒಮ್ಮೆ ಒಂದು ಕೆಲಸವನ್ನು ಒಪ್ಪಿದ ಮೇಲೆ ಅದನ್ನು ಏಕಾಗ್ರ ನಿಷ್ಟೆಯಿಂದ ಮಾಡಬೇಕೆನ್ನುವುದು ವೈವೆಸ್ ನಿಲುವು. ಪದವಿ ಗಳಿಸಿದ ನಂತರ ಕಾರ್ಖಾನೆಯೊಂದಕ್ಕೆ ಸೇರಿದ ವೈವೆಸ್ ಅಲ್ಪ ಕಾಲದಲ್ಲೇ ಅದರ ಏಕತಾನತೆಯಿಂದ ಬೇಸತ್ತು ರಾಜಿನಾಮೆ ನೀಡಿದನು. ಈ ಹಿಂದೆ ಮಾಡಿದ್ದನ್ನೇ ಅನುಸರಿಸು ಏಕೆಂದರೆ ಅದು ಈಗಾಗಲೇ ನಡೆಯುತ್ತಿದೆ ಎಂಬ ಕೆಲಸದ ಧೋರಣೆಯನ್ನು ವೈವೆಸ್ ತೀವ್ರವಾಗಿ ವಿರೋಧಿಸುತ್ತಿದ್ದನು. ಯಾವುದೇ ಹೊಸದರ ಉಗಮವೆಂದರೆ ಈ ಹಿಂದೆ ಸಮರ್ಪಕವೆಂದು ಒಪ್ಪಿದುದನ್ನು ಸರಿಯಾದ ಸಂದರ್ಭದಲ್ಲಿ ತೊರೆದು ಸ್ವಂತ ಮಾರ್ಗದಲ್ಲಿ ಸಾಗುವುದೇ ನಿಜವಾದ ಜ್ಞಾನವೆಂಬುದು ವೈವೆಸ್ ನಿಲುವು. 1960ರಲಿ ವೈವೆಸ್ ಫ್ರಾನ್ಸ್’ನ ಪೆಟ್ರೋಲ್ ಸಂಸ್ಥೆ ಸೇರಿದನು. ಯಾವುದೇ ತೈಲ ದಕ್ಷವೆನಿಸಬೇಕಾದರೆ (Efficient) ಅದರ ಆಕ್ಟೇನ್ ಸಂಖ್ಯೆ ಅಧಿಕವಿರಬೇಕು. ಇಂತಹ ವೃದ್ಧಿ ತರುವ ರಾಸಾಯನಿಕಗಳನ್ನು ಪೆಟ್ರೋಲ್‍ನೊಂದಿಗೆ ಬೆರೆಸಿದಾಗ ಇಂಧನದ ಕಾರ್ಯಕ್ಷಮತೆಯಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ. ಪ್ರೊಪೆಲಿನ್‍ನ್ನು ಐಸೋ ಹೆಕ್ಸಿನ್‍ಗಳಾಗಿಸಿ ಇಂಧನ ಸಂಕಲಕ (Additive) ಪಡೆಯುವ ವಿಧಾನ ಹಾಗೂ ತಂತ್ರ ರೂಪಿಸಲು ವೈವೆಸ್ ಯತ್ನಿಸಿ ಯಶಸ್ಸನ್ನು ಕಂಡನು. ಐಸೋಕ್ಟೇನ್ಸ್‍ನ್ ಪಾಲಿ ಇಥಿಲಿನ್ ತಯಾರಿಕೆಯ ಆರಂಭಿಕ ಕಚ್ಛಾ ಸಾಮಗ್ರಿಯಾಗಿ ಪರಿಚರಿಸಿದ ಮೊದಲಿಗ ವೈವೆಸ್. ಇದಕ್ಕಾಗಿ ವೈವೆಸ್ ಸಾವಯವ ಲೌಹಿಕ ರಸಾಯನಶಾಸ್ತ್ರದಲ್ಲಿ ಪರಿಶ್ರಮಿಸಿದನು. ವೈವೆಸ್‍ನ ಈ ಪರಿಶ್ರಮ ಸಂಪೂರ್ಣ ಫಲಪ್ರದ ತಂತ್ರಜ್ಞಾನದ ಉಗಮಕ್ಕೆ ಕಾರಣವಾಯಿತು. ಇದಕ್ಕಾಗಿ ವೈವೆಸ್ 2005ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಡಾಕ್ಟರೇಟ್ ಗಳಿಸದೆ, ಅನ್ವಯಿಕ, ಕೈಗಾರಿಕಾ ವಲಯದಲ್ಲಿದ್ದು ನೊಬೆಲ್ ಪ್ರಶಸ್ತಿಯಂತಹ ಶೈಕ್ಷಣಿಕ ಪರಿಶ್ರಮ ಬೇಡುವ ಪುರಸ್ಕಾರ ಹೊಂದಿರುವುದು ವೈವೆಸ್ ಹೆಗ್ಗಳಿಕೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/27/2019