ರಿಚರ್ಡ್ , ಆರ್ ಷ್ರಾಕ್ (1945--) ೨೦೦೫
ಅಸಂಸಂ-ರಸಾಯನಶಾಸ್ತ್ರ- ಒಲೆಫಿûನ್ ಮೆಟಾಥಿಸಿಸ್ ಕ್ರಿಯೆಯ ಸಂಪೂರ್ಣ ವಿವರ ನೀಡಿದಾತ.
ಷ್ರಾಕ್ ಇಂಡಿಯಾನ ರಾಜ್ಯದ ಬರ್ನ್‍ನಲ್ಲಿ 4 ಜನವರಿ 1945ರಂದು ಜನಿಸಿದನು. ಕ್ಯಾಲಿ¥sóÉÇೀರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಷ್ರಾಗ್,1976ರಲ್ಲಿಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದಿಂದ 1967ರಲ್ಲಿ ರಸಾಯನಶಾಸ್ತ್ರದ ಪದವಿ ಪಡೆದನು. 1971ರಲ್ಲಿ ಹಾರ್ವರ್ಡ್ ವಿಶ್ವ ವಿದ್ಯಾಲಯದಿಂದ ಜೆ.ಎ ಓಸ್ಬೊರ್ನ್ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದನು. ನಂತರ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಜಾಕ್ ಲೆವಿಸ್ ಸಾಂಗತ್ಯದಲ್ಲಿ ಸಂಶೋಧನೆಗಳನ್ನು ಮುಂದುವರೆಸಿದನು. 1972ರಲ್ಲಿ ಇ.ಐ. ಡುಪಾಂಟ್ ಡೆ ನೆವತಾರ್ಸ್ ಹಾಗೂ ಕಂಪನಿ ಸೇರಿ ಜಾರ್ಜ್ ಪಾರ್ಷಲ್ ತಂಡದ ಪ್ರಯೋಗಾಲಯದಲ್ಲಿ ನಿಯೋಜಿತನಾದನು. 1975ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದ ಷ್ರಾಕ್ 1980ರಲ್ಲಿ ಇಲ್ಲಿ ಪೂರ್ಣಾವಧಿ ಪ್ರಾಧ್ಯಾಪಕನಾದನು. ಷ್ರಾಕ್ ಒಲೆಫಿಸ್ ಮ್ಯಾಥಸಿಸ್ ಹೆಸರಿನ ವಿಶಿಷ್ಟ ಸಾವಯವ ಸಂಶ್ಲೇಷಣಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾನೆ. ಒಲೆಫಿûನ್ಸ್ ಮೆಟಾಥೀಸಿಸ್, ರಾಸಾಯನಿಕ ಕ್ರಿಯೆಗಳಲ್ಲಿ ಟ್ಯಾಂಟಲಮ್ ಆಲ್ಕಿಲಿಡೆನೆಸ್‍ಗಳ ಸಂಶ್ಲೇಷಣೆ ಬಹು ಮುಖ್ಯ ಸ್ಥಿತಿ. ಒಲೆಫಿûನ್ ವ್ಮೆಟಾಥಿಸಿಸ್‍ನ ಸಂಪೂರ್ಣ ರಾಸಾಯನಿಕ ಚಕ್ರದಲ್ಲಿ ಆಲ್ಕಲಿಡೈನೆಸ್‍ಗಳು ಕ್ರಿಯಾಪ್ರೇರಕ ಸಂಥಿಸ್ಥ ಸ್ಥಿತಿಯಲ್ಲಿರುತ್ತವೆ (Catalytic Critical State). ಷ್ರಾಕ್ ಸಂಶೋಧನೆಗಳಿಂದ ಒಲೆಫಿûನ್ ಮೆಟಾಥೀಸಿಸ್ ಕ್ರಿಯೆಯಲ್ಲಿ ಮೆಟಲೋಸೈಕ್ಲೋಬ್ಯುಟೇನ್ ಬಹು ಪ್ರಮುಖವಾದ ಮಧ್ಯವರ್ತಿಯೆಂದು ಖಚಿತವಾಯಿತು. ಷ್ರಾಕ್‍ನಿಂದ ಒಲೆಫಿûನ್ ಮೆಟಾಥೀಸಿಸ್ ಕ್ರಿಯೆಗೆ ಬೇಕಾಗುವ ಕ್ರಿಯಾಪ್ರೇರಕಗಳು (Catalyst) ಲಭ್ಯವಾದವು. ಒಲೆಫಿûನ್ ಮೆಟಾಥಿಸಿಸ್ ಕ್ರಿಯೆಯ ಸಂಪೂರ್ಣ ಅರಿವಿನಿಂದ ಜೀವಿಗಳಲ್ಲಿನ ಸಾರಜನಕಾಧಾರಿತ ಕಿಣ್ವಗಳ ಸ್ವರೂಪ ಸುಸ್ಪಷ್ಟಗೊಂಡಿತು. ಈ ಸಾಧನೆಗಾಗಿ ಷ್ರಾಕ್ 2005ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಸುಂದರವಾದ ಮರದ ಪೆಟ್ಟಿಗೆಗಳನ್ನು ತಯಾರಿಸುವುದರಲ್ಲಿ ನಿಪುಣವಾಗಿರುವ ಷ್ರಾಕ್‍ಗೆ ಅದು ಅತ್ಯಂತ ನೆಚ್ಚಿನ ಹವ್ಯಾಸವೂ ಆಗಿದೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/24/2019