ರಾಬರ್ಟ್, ಎಚ್ ಗ್ರಬ್ಸ್ (1942--) ೨೦೦೫
ಅಸಂಸಂ-ರಸಾಯನಶಾಸ್ತ್ರ - ಒಲೆಫಿûನ್ ಮೆಟಾಥೀಸಿಸ್ ಹಾಗೂ ವಿಶಿಷ್ಟ ಬಹ್ವಂಗೀಕರಣದ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ನಡೆಸಿದಾತ.
ಗ್ರಬ್ಸ್ 27ಫೆಬ್ರವರಿ 1942ರಂದು ಕೆಂಟುಕಿ ಪ್ರಾಂತದ ಪೆÇಸವ್ಯಾಟ್ರಲ್ ಪಟ್ಟಣದಲ್ಲಿ ಜನಿಸಿದನು. ಬಾಲ್ಯವನ್ನು ಮಾರ್ಷೆಲ್ ಕೌಂಟಿಯಲ್ಲಿ ಕಳೆದ ಗ್ರಬ್ಸ್ , ಫ್ಲೊರಿಡಾ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಪದವಿ ಹಾಗೂ ಸ್ನಾತಕ ಪದವಿ ಗಳಿಸಿದನು. ಕೊಲಂಬಿಯಾ ವಿಶ್ವವಿದ್ಯಾಲಯದ ರೊನಾಲ್ಡ್ ಬ್ರೆಸ್ಲೋ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ 1968ರಲ್ಲಿ ಡಾಕ್ಟರೇಟ್ ಗಳಿಸಿದನು. ಮುಂದಿನ ದಿನಗಳಲ್ಲಿ ಕೆಲಕಾ¯ ಸ್ಟ್ಯಾನ್’ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಜೇಮ್ಸ್ ಕೋಲ್ಮನ್ ಸಾಂಗತ್ಯದಲ್ಲಿ ಪರಿಶ್ರಮಿಸಿದನು. ಮಿಷಿಗನ್ ವಿಶ್ವವಿದ್ಯಾಲಯ ಸೇರಿ ಬೊಧಕ ಸಿಬ್ಬಂದಿಯಾದನು. 1978 ರಲ್ಲಿ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿಯಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಇಲ್ಲಿ ತನ್ನ ವಿದ್ಯಾರ್ಥಿಗಳೊಂದಿಗೆ ಸ್ಥಿತ್ಯಂತರ ಲೋಹಗಳನ್ನು (Transition Metals) ಒಳಗೊಂಡಂತಹ ಹೊಸ ಬಗೆಯ ರಾಸಾಯನಿಕ ಸಂಶ್ಲೇಷಣೆಗಳನ್ನು ರೂಪಿಸಿದನು. ಇದರ ಫಲವಾಗಿ ಎಸ್ಟರ್‍ಗಳನ್ನು ವಿನೈಲ್ ಈಥರ್‍ಗಳಾಗಿ ಪರಿವರ್ತಿಸುವ ಸಾಮಾನ್ಯ ತಂತ್ರ ದಕ್ಕಿತು. ಇದಕ್ಕಾಗಿ ಗ್ರಬ್ಸ್ ಹಾಗೂ ಸಂಗಡಿಗರು ವಿಶಿಷ್ಟ ಕ್ರಿಯಾಪ್ರೇರಕಗಳನ್ನು (Catalysts) ಪರಿಚಯಿಸಿದರು. ಗ್ರಬ್ಸ್ ಒಲೆಫಿûನ್ ಮೆಟಾಥೀಸಿಸ್ ಕ್ರಿಯಾಚಕ್ರದಲ್ಲಿ ಆಸಕ್ತನಾಗಿ ಹೊಸ ಬಗೆಯ ಬಹೃಂಗೀಕರಣದ (Polymerisation) ಸಾಧ್ಯತೆಯನ್ನು ಅನಾವರಣಗೊಳಿಸಿದನು. ಇಂತಹ ಬಹ್ವಂಗಿಗಳು ಹೊಸ ಸಾಮಾಗ್ರಿಗಳಿಗೆ ಕಾರಣವಾಗಿ ವೈವಿಧ್ಯಮಯ ವೈಜ್ಞಾನಿಕ ಹಾಗೂ ವ್ಯಾಹಾರಿಕ ಕ್ಷೇತ್ರಗಳಲ್ಲಿ ಬಳಕೆಯಾಗತೊಡಗಿದವು. ದ್ಯುತಿ ಹೊಂದಾಣಿಕೆಯಾಗಬಲ್ಲ ಅಕ್ಷಿಪಟಲಾಂತರ್ಗತ ಮಸೂರಗಳು ಇದರಿಂದ ಬಳಕೆಗೆ ಬಂದವು. ಹೊಸ ಸಂಶೋಧನೆಗಳು ದೈನಂದಿನ ವ್ಯಾವಹಾರಿಕ ಬಳಕೆಗೆ ಬದಲು ಅಧಿಕ ಪ್ರಮಾಣದ ಬಂಡವಾಳ ಹೂಡಿಕೆ ಮತ್ತು ಬೃಹತ್ ಕಂಪನಿಗಳ ನೆರವು ಬೇಕು. ಈ ಕಂಪನಿಗಳು ಲಾಭ ನಷ್ಟ, ನಿರ್ವಹಣೆಗಳನ್ನು ಅಳೆದು ಸುರಿದು ತೂಗಿ ನೀಡಿದ ಮೇಲೆಯೆ ಉತ್ಪಾದನೆಗೆ ಪ್ರಾರಂಭಿಸುತ್ತವೆ. ಇದನ್ನು ತಪ್ಪಿಸಲು ಗ್ರಬ್ಸ್ ಸ್ನೇಹಿತವಾದ ಮೈಕ್ ಗಿಯಾರ್ಡೆಲ್ಲೋ ವ್ಮೆಟೀರಿಯಲ್ ಇನ್ಕ್ ಸಂಸ್ಥೆ ಸ್ಥಾಪಿಸಿದನು. ಗ್ರಬ್ಸ್ ಇದಕ್ಕೆ ನೆರವಾದನು. ಒಲೆಫಿûನ್ ಮೆಟಾಥೀಸಿಸ್ ಹಾಗೂ ವಿಶಿಷ್ಟ ಬಹ್ವಂಗೀಕರಣದ ಕ್ಷೇತ್ರದಲ್ಲಿನ ಗಮನಾರ್ಹ ಕೊಡುಗೆಗಳಾಗಿ ಗ್ರಬ್ಸ್ 2005ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 9/20/2019