ರಯೋಜಿ , ನೊಯೊರ್ (1938--) ೨೦೦೧
ಜಪಾನ್-ವೈದ್ಯಕೀಯ-ಜೈವಿಕ ರಾಸಾಯನಿಕಗಳ ಉತ್ಪಾದನೆಗೆ ಸಾವಯವ ಲೌಹಿಕ ರಸಾಯನಶಾಸ್ತ್ರ (Organic Metallic Chemistry) ಅಭಿವೃದ್ಧಿಪಡಿಸಿದಾತ
ರಯೊಜಿ 3 ಸೆಪ್ಟೆಂಬರ್ 1938ರಂದು ಕೋಬೆ ನಗರದಲ್ಲಿ ಜನಿಸಿದನು. ರಯೊಜಿ ತಂದೆ ಖಾಸಗಿ ರಾಸಾಯನಿಕ ಕಂಪನಿಯೊಂದರಲ್ಲಿ ಸಂಶೋಧಕನಾಗಿದ್ದನು. ಈತ ಮನೆಗೆ ಹಲವಾರು ವೈಜ್ಞಾನಿಕ ನಿಯತಕಾಲಿಕ ಪತ್ರಿಕೆಗಳನ್ನು ತರಿಸುತ್ತಿದ್ದನು. ಆಗ ತಾನೆ ಹೊಸದಾಗಿ ಉಪಜ್ಞೆಗೊಂಡಿದ್ದ ನೈಲಾನ್ ಎಳೆಗಳ ಬಗೆಗೆ ಓದಿ ಪುಳಕಿತನಾಗಿದ್ದ ರಯೊಜಿ ರಸಾಯನಶಾಸ್ತ್ರವನ್ನು ವಿಸ್ಮಯ ಗೌರವ ಬೆರೆತ ದೃಷ್ಟಿಯಿಂದ ನೋಡುತ್ತಿದ್ದನು. ಹನ್ನೆರಡು ವರ್ಷದ ಬಾಲಕನಾಗಿದ್ದ ರಯೊಜಿಗೆ ತಾನು ಉತ್ತಮ ರಸಾಯನಶಾಸ್ತ್ರಜ್ಞನಾಗಿ ಜಪಾನ್‍ನ್ನು ಬಡತನದಿಂದ ಹೊರ ತರುವ ಕಾರ್ಯದಲ್ಲಿ ಅಳಿಲು ಸೇವೆ ಸಲ್ಲಿಸಬೇಕೆಂದು ಆಶಿಸಿದನು. 1957ರಲ್ಲಿ ಹದಿನೆಂಟನೇ ವಯಸ್ಸಿನಲ್ಲಿ ರಯೊಜಿ ಕ್ಯೋಟೋ ವಿಶ್ವವಿದ್ಯಾಲಯ ಸೇರಿದನು. ಇದೇ ವರ್ಷ ಸೋವಿಯೆತ್ ರಷ್ಯಾ ತನ್ನ ಮೊದಲ ಉಪಗ್ರಹ ಸ್ಪುತ್ನಿಕ್ ಹಾರಿಸಿತು. ಸೋವಿಯತ್‍ನ ಈ ಸಾಧನೆ ಹಾಗೂ ವಿಜ್ಞಾನದ ಸಾಮಥ್ರ್ಯಗಳನ್ನು ಜನ ಸಾಮಾನ್ಯರಂತೆ ಜಪಾನಿನ ವೈಜ್ಞಾನಿಕ ರಂಗವೇ ಬೆರಗಿನಿಂದ ನೋಡಿ ಆನಂದಿಸಿ ಮೆಚ್ಚಿತು. ಇದು ರಯೊಜಿಯ ಮೇಲೆ ಆಳ ಪ್ರಭಾವ ಬೀರಿತು. 1961ರಲ್ಲಿ ಪದವಿ ಹಾಗೂ 1963ರಲ್ಲಿ ಡಾಕ್ಟರ್ ಗಳಿಸಿದ ರಯೊಜಿ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ಹಿಟೊಸಿ ನೊಝೊಕಿಯ ಮಾರ್ಗದರ್ಶನದಲ್ಲಿ ಸಂಶೋಧನೆ ಪ್ರಾರಂಭಿಸಿದನು. ಈ ಸಂದರ್ಭದಲ್ಲಿ ಕ್ರಮಬದ್ದವಾದ ಸಾವಯವ ಲೌಹಿಕ ಸಂಯುಕ್ತಗಳ (Organic Metallic Compounds) ಪ್ರತಿಕ್ರಿಯೆಯಲ್ಲಿ ಅಸಮಾಂಗೀಯ (Unsymmetric) ನಡವಳಿಕೆಯನ್ನು ರಯೊಜಿ ಮೊದಲ ಬಾರಿಗೆ ಗುರುತಿಸಿದನು. ಇವುಗಳ ಅಧ್ಯಯನ ರಯೊಜಿಯ ಜೀವನದುದ್ದಕ್ಕೂ ಸಾಗಿತು. 1967ರ ನಂತರ ನಗೊಯಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನ ಆಹ್ವಾನ ಬಂದಾಗ ರಯೊಜಿಗೆ 29ರ ಪ್ರಾಯ. ಇಲ್ಲಿ ರಯೊಜಿ ಸಾವಯವ ಲೌಹಿಕ ಸಂಯುಕ್ತಗಳ ಸಂಶೋಧನೆಗೆ ಕಟಿಬದ್ದವಾದ ಯುವ ವಿಜ್ಞಾನಿಗಳ ತಂಡವನ್ನು ಕಟ್ಟತೊಡಗಿದನು. 1969ರಲ್ಲಿ ಅಸಂಸಂದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಇ.ಜೆ.ಕೊರಿ ಮಾರ್ಗದರ್ಶನದಲ್ಲಿ ಸಂಶೋಧಿಸಲು ತೆರಳಿದನು. ಇಲ್ಲಿದ್ದ ಕೊನಾರ್ಡ್ ಬ್ಲಾಕ್‍ನ ಕೆಳಗೆ ಕೆ. ಬ್ಯಾರಿ ಷಾಪ್ಲೆ ಕೆಲಸ ಮಾಡುತ್ತಿದ್ದನು. ಈ ಇಬ್ಬರಲ್ಲೂ ಅತ್ಯುತ್ತಮ ಸ್ನೇಹ, ಸಹಕಾರಗಳ ಮೂಡಿದವು. 1970ರಲ್ಲಿ ಜಪಾನ್‍ಗೆ ಮರಳಿ ನಗೋಮಾ ವಿಶ್ವವಿದ್ಯಾಲಂiÀiದಲ್ಲಿ ಪ್ರಾಧ್ಯಾಪಕನಾದ ರಯೊಜಿ ಅಸಮಾಂಗೀಯ ಜಲಕರಣ (Hydrogenation) ಕುರಿತಾಗಿ ವ್ಯಾಪಕ ಸಂಶೋಧನೆ ನಡೆಸಿದನು. ಇದರ ಫಲಿತಾಂಶವಾಗಿ ಟರ್ಪಿನ್ , ವಿಟಮಿನ್, ಬೀಟಾ-ಅಲ್ಯಾಕ್ಟಂ ಪ್ರತಿ ಜೈವಿಕಗಳು, ಆಲ್ಫಾ, ಬೀಟಾ, ಅಮೈನೋ ಆಮ್ಲ, ಆಲ್ಕಲಾಯಿಡ್ಸ್, ಪ್ರೊಸ್ಟ್ಗ್ಲಾಂಡಿನ್ಸ್ ಹೋಲುವ ನೂರಾರು ಜೈವಿಕ ಸಾಮಾಗ್ರಿಗಳನ್ನು ಸಂಶ್ಲೇಷಿಸುವ ತಂತ್ರಗಳು ಅಭಿವೃದ್ಧಿಗೊಂಡವು. ರಯೊಜಿ ತಂಡದ ನೆರವಿನಿಂದ ಟಕಸಾಗೋ ಇಂಟರ್‍ನ್ಯಾಷನಲ್ ಕಂಪನಿ ಕಾರ್ಬಪೆನೆಮ್ ಹಾಗೂ ಲೆವೊಪೆÇ್ಲಕ್ಯಾಸಿನ್‍ನಂತಹ ಪ್ರತಿಬೈವಿಕಗಳನ್ನು ಭೂರಿ ಪ್ರಮಾಣದಲ್ಲಿ (Mass Production) ಉತ್ಪಾದಿಸತೊಡಗಿತು. ಸಾವಯವ ಲೌಹಿಕ ರಸಾಯನಶಾಸ್ತ್ರದಿಂದ ಔಷಧಿಗಳು ಲಭ್ಯವಾಗತೊಡಗಿ ಸಾಮಾಜಿಕ ಲಾಭಗಳು ದಕ್ಕತೊಡಗಿದವು. ಈ ರಾಸಾಯನಿಕಗಳ ಕ್ರಿಯೆ, ಜಲಕರಣ ತಂತ್ರಗಳನ್ನು ರೂಪಿಸಿದ್ದಕ್ಕಾಗಿ ರಯೊಜಿ 2001ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 11/14/2019