ರೊಡೆರಿಕ್, ಮೆಕ್‍ಕಿನೆನ್ (1956--) ೨೦೦೩
ಅಸಂಸಂ-ರಸಾಯನಶಾಸ್ತ್ರ- ಪ್ರೋಟಿನ್‍ಗಳು ದ್ರವ ಸಾಗಿಸುವ ಕಾಲುವೆಗಳಚಿತೆ ವರ್ತಿಸುವುವೆಂದು ತೋರಿಸಿದಾತ.
ರೊಡೆರಿಕ್ 19ಫೆಬ್ರವರಿ 1956 ರಂದು ಜನಿಸಿದನು. ಈತನ ತಂದೆ ಅಂಚೆ ಇಲಾಖೆಯಲ್ಲಿ ಕಾರ್ಮಿಕನಾಗಿದ್ದನು. ಸದಾ ಕುತೂಹಲಿಯಾಗಿದ್ದ ರೊಡೆರಿಕ್ ಬಾಲ್ಯದಲ್ಲಿ ಏಕೆ ? ಏನು ? ಹೇಗೆ?ಎಂಬ ಪ್ರಶ್ನೆಗಳಿಂದ ಸದಾ ಸಿದ್ದನಾಗಿರುತ್ತಿದ್ದನು. ನಾನಾ ಬಗೆಯ ಕಲ್ಲು ಕೀಟ, ಪತಂಗ, ಹಾವು, ಆಮೆಗಳ ಸಂಗ್ರಹ ರೊಡೆರಿಕ್‍ನ ಬಾಲ್ಯದ ಪ್ರಮುಖ ಹವ್ಯಾಸವಾಗಿದ್ದಿತು. ಬೋಸ್ಟನ್‍ನ ಮೆಸಾಚುಸೆಟ್ಸ್‍ನ ವಿಶ್ವವಿದ್ಯಾಲಯದಲ್ಲಿ ಜೀವ ರಸಾಯನಶಾಸ್ತ್ರದ ಅಧ್ಯಯನವನ್ನು ರೊಡೆರಿಕ್ ಆರಿಸಿಕೊಂಡನು. ಆದರೆ ಇದೇ ಮಾರ್ಗದಲ್ಲಿ ಮುಂದುವರೆಯದೆ ವೈದ್ಯಕೀಯ ವ್ಯಾಸಂಗಕ್ಕೆಟಫ್ಟ್ಸ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಸೇರಿದನು. ವೈದ್ಯಕೀಯದಲ್ಲಿ ವಿಶ್ಲೇಷಣೆಗಿಂತಲೂ ಜ್ಞಾಪಕಕ್ಕೆ ಹೆಚ್ಚಿನ ಪ್ರಾಶಸ್ತ್ಯವಿರುವುದು ರೊಡೆರಿಕ್‍ನಲ್ಲಿ ನಿರಾಶೆ ತಂದಿತು. ತಾನು ವೈದ್ಯಕೀಯಕ್ಕೆ ಸೇರಿ ತಪ್ಪು ಮಾಡಿರುವೆನೇನೋ ಎಂಬ ಸಂದೇಹವೂ ತಲೆದೋರಿತು. ಇದನ್ನು ಮರೆಯಲು ಗಣಿತದ ಅಭ್ಯಾಸವನ್ನು ಸಹ ಮುಂದುವರಿಸಿದನು. ಪದವಿ ಮುಗಿಸಿದ ನಂತರ ಹಾರ್ವರ್ಡ್‍ನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ರೊಡೆರಿಕ್ ಅಲ್ಪ ಕಾಲದಲ್ಲೇ ಕ್ಷ-ಕಿರಣ ಸ್ಪಟಿಕಶಾಸ್ತ್ರದಲ್ಲಿ (X-Ray Crystallography) ಪರಿಣಿತಿ ಗಳಿಸಿ ಪೆÇರೆ ಪ್ರೊಟೀನ್ ಜೀವ ರಸಾಯನ ಶಾಸ್ತ್ರದಲ್ಲಿ ತಲ್ಲೀನನಾದನು. ಟಾರ್‍ಸ್ಟೆನ್ ವೀಸೆಲ್‍ನ ಸಲಹೆಯ ಮೇರೆಗೆ ರೊಡೆರಿಕ್ ರಾಕ್ ಫೆಲರ್ ವಿಶ್ವವಿದ್ಯಾಲಯಕ್ಕೆ ಸೇರಿದನು. ಇಲ್ಲಿ ಪೆÇ್ರೀಟೀನ್‍ಗಳು ದ್ರವ ಸಾಗಿಸುವ ಕಾಲುವೆಗಳಂತೆ ವರ್ತಿಸುವ ಅಮೂಲಾಗ್ರ ಚಿತ್ರಣ ರೊಡೆರಿಕ್ ತಂಡದಿಂದ ಅನಾವರಣಗೊಂಡಿತು. ಈ ಸಾಧನೆಯನ್ನು ಗುರುತಿಸಿ 2003ರಲ್ಲಿ ನೊಬೆಲ್ ಪ್ರಶಸ್ತಿ ಪ್ರದಾನಿಸಲಾಯಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/24/2019