ಬ್ಯಾರಿ, ಷಾಪ್ರ್ಲೆ ಕೆ (1941--) -೨೦೦೧
ಅಸಂಸಂ-ರಸಾಯನಶಾಸ್ತ್ರ-ರಾಸಾಯನಿಕ ಕ್ರಿಯೆಗಳಲ್ಲಿ ಅಸಮಾಂಗೀಯ ಉತ್ಕರ್ಷಣಾ ತಂತ್ರ ಪರಿಚಯಿಸಿದಾತ.
ಷಾಪ್ರ್ಲೆ 28 ಏಪ್ರಿಲ್ 1941ರಂದು ಪೆನ್‍ಸಿಲ್ವೇನಿಯಾದ ಫಿûಲೆಡೆಲ್ಫಿಯಾದಲ್ಲಿ ಜನಿಸಿದನು. ಷಾಪ್ರ್ಲೆ 1968ರಲ್ಲಿ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಜೀವ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. 1970ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆ¥sóï ಟೆಕ್ನಾಲಜಿ ಸೇರಿದನು. 1990ರಲ್ಲಿ ಕ್ಯಾಲಿಫೊರ್ನಿಯಾದ ಲಾ ಜೊಲ್ಲದಲ್ಲಿರುವ ಸ್ಕ್ರಿಪ್ಸ್ ರಿಸರ್ಚ ಇನ್ಸ್ಟಿಟ್ಯೂಟ್ ಸೇರಿದನು. ಹಲವಾರು ಜೈವಿಕ ಅಣುಗಳು ಪರಸ್ಪರ ಅಧ್ಯಾರೋಪಣಗೊಳಿಸಲಾಗದ (Non-Superimposable) ಕನ್ನಡಿ ಬಿಂಬಗಳಂತೆ ಎರಡು ಬಗೆಯ ರಾಚನಿಕ ಸ್ವರೂಪದಲ್ಲಿ ಅಸ್ತಿತ್ವದಲ್ಲಿವೆ. ಇಂತಹ ರಾಚನಿಕ ಸ್ವರೂಪಗಳನ್ನು ಎನ್ಯಾಂಟಿಯರ್ಸ್‍ಗಳೆನ್ನುತ್ತಾರೆ. ಇಂತಹ ಜೈವಿಕ ಅಣುಗಳಿಂದಾದ ಕಿಣ್ವಗಳು, ರಾಸಾಯನಿಕಗಳು ವರಣಾತ್ಮಕವಾಗಿದ್ದು (Selective) ನಿರ್ದಿಷ್ಟ ರಾಚನಿಕ ಸ್ವರೂಪದ ಅಣುಗಳೊಂದಿಗೆ ಮಾತ್ರ ರಾಸಾಯನಿಕ ಕ್ರಿಯೆಗೊಳಗಾಗುತ್ತವೆ. ರೋಗ ನಿವಾರಣೆಗಾಗಿ ಹ¯ವಾರು ಬಗೆಯ ಜೈವಿಕ ಔಷಧಿಗಳು ಎನ್ಯಾಂಟಿಮರ್ಸಗಳ ಮಿಶ್ರಣಗಳಾಗಿರುತ್ತವೆ. ರೋಗ ನಿವಾರಣೆಗೆ ಕೆಲ ಎನ್ಯಾಂಟಿಮರ್ಸ್ ನೆರವಾದರೆ, ಇವುಗಳೊಂದಿಗಿರುವ ಬೇರೆಯವು ದೇಹದ ಮೇಲೆ ಪಾಶ್ರ್ವ ಪರಿಣಾಮ ಬೀರುತ್ತವೆ. ಥ್ಯಾಲಿಡೋಮೈಡ್‍ನಂತಹ ಔಷಧಿಗಳಲ್ಲಿ ಪಾಶ್ರ್ವ ಪರಿಣಾಮ ಬಹು ಪ್ರಭಾವಶಾಲಿಯಾಗಿರುತ್ತದೆ. ರೋಗ ಸ್ಥಿತಿಯ ನಿವಾರಣೆಗಾಗಿ ಬೇಕಾದ ಬಗೆಯ ಎಲ್ಯಾಂಟೊಮರ್ ಮಾತ್ರ ರಾಸಾಯನಿಕ ಕ್ರಿಯೆಗೊಳಗಾಗಬೇಕು. ಷಾಪ್ರ್ಲೆಯ ಸಂಶೋಧನೆಗಳು ಇಂತಹ ನಿರ್ದಿಷ್ಟ ರಾಸಾಯನಿಕ ಕ್ರಿಯೆಗಳ ಪ್ರತಿಬಿಂಬರೂಪಿ ಉತ್ಕರ್ಷಣೆಯಲ್ಲಿ (Oxidation) ಕೇಂದ್ರೀಕೃತವಾಗಿವೆ. 1980ರಿಂದ ಷಾಪ್ರ್ಲೆ ನಡೆಸಿದ ಸಂಶೋಧನೆಗಳ ಫಲವಾಗಿ ಎಪೊಕ್ಸೈಡ್ ಸಂಯುಕ್ತಗಳನ್ನು ಪಡೆಯಲು ರೂಪಿಸಿದ ಅಸಮಾಂಗೀಯ ಉತ್ಕರ್ಷಣಾ (Assymetric Oxidation) ತಂತ್ರ ವ್ಯಾವಹಾರಿಕವಾಗಿ ಔಷಧಿ ತಯಾರಿಕೆಗೆ ನೆರವಾಯಿತು. ಈ ಸಾಧನೆಗಾಗಿ ಷಾಪ್ರ್ಲೆ 2001ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತವಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/7/2019