ಪೀಟರ್, ಅಗ್ರೆ (1949--) ೨೦೦೩
ಅಸಂಸಂ-ರಸಾಯನಶಾಸ್ತ್ರ-ಕೋಶಪೆÇರೆಗಳಲ್ಲಿನ ಪ್ರೋಟಿನ್‍ಗಳ ಅಧ್ಯಯನದ ಮುಂದಾಳು.
1862ರಲ್ಲಿ ಅಬ್ರಹಂ ಲಿಂಕನ್ ಹೋಮ್‍ಸೈಡ್ ಮಸೂದೆಗೆ ಸಹಿ ಹಾಕುವ ಮೂಲಕ ಅಸಂಸಂದ ಪಶ್ಚಿಮ ಗಡಿಯಲ್ಲಿ ಜನಕ್ಕೆ ವ್ಯವಸಾಯಕ್ಕೆ ಭೂಮಿ ಹಂಚಿಕೆಯಾಗಿ, ಐದು ವರ್ಷಗಳ ನಂತರ ಅವರಿಗೆ ಮಾಲಿಕತ್ವ ಲಭ್ಯವಾಗುವ ಸದಾವಕಾಶ ದಕ್ಕಿತು. ಇದರಿಂದ ಆಕರ್ಷಿತರಾಗಿ ಹೊರದೇಶಗಳಿಂದ ಜನ ಬಂದು ಅಸಂಸಂಗಳಲ್ಲಿ ನೆಲೆಸತೊಡಗಿದರು. ಇಂತಹವರಲ್ಲಿ ನಾರ್ವೆ ಮೂಲದಿಂದ ಬಂದ ಪೀಟರ್ ತಾತನೂ ಸೇರಿದ್ದನು. ಪೀಟರ್ ತಂದೆ ಮಿನ್ನೆಸೊಟಾ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿ, ಎರಡನೇ ಜಾಗತಿಕ ಯುದ್ದದಲ್ಲಿ 3 ಎಂ ಕಂಪನಿ ಸೇರಿ ಸರ್ಕಾರದ ಪರವಾಗಿ ಪಾಲಿಮರ್ ಸಂಶೋಧನೆಯಲ್ಲಿ ಭಾಗಿಯಾಗಿದ್ದನು. 30 ಜನವರಿ 1949ರಂದು ಪೀಟರ್ ಜನನವಾಯಿತು. 1954ರಲ್ಲಿ ರಸಾಯನಶಾಸ್ತ್ರ ಹಾಗೂ1962ರಲ್ಲಿ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಪೌಲಿಂಗ್ ಲಿನಸ್ ಕಾರ್ಲ್ ಪೀಟರ್‍ನ ತಂದೆಯ ಸ್ನೇಹಿತನಾಗಿದ್ದನು. ಈತ ಹಲವಾರು ಪೀಟರ್ ಮನೆಯಲ್ಲಿದ್ದನು. ಇದು ಪೀಟರ್‍ನ ಮೇಲೆ ಅಗಾಧ ಪ್ರಭಾವ ಬೀರಿದ್ದಿತು. 1970ರಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಕಾಲೇಜು ಸೇರುವ ಮುನ್ನ ಪೀಟರ್ ಇಡೀ ಏಷ್ಯಾದ ಪರ್ಯಟನೆ ನಡೆಸಿದನು. ಇದರಲ್ಲಿ ಗಣನೀಯ ದೂರವನ್ನು ಬೈಕ್‍ನಲ್ಲಿ ಒಬ್ಬಂಟಿಯಾಗಿ ಕ್ರಮಿಸಿದ ಸಾಹಿಸಿ ಈತ. ಇದೇ ವರ್ಷ ಜಾನ್ ಹಾ¥sóïಕಿನ್ಸನಲ್ಲಿ ವೈದ್ಯಕೀಯ ವ್ಯಾಸಂಗ ಪ್ರಾರಂಭಿಸಿದನು. 1975ರ ವೇಳೆಗೆ ಡಾಕ್ಟರೇಟ್ ಗಳಿಸಿದ ಪೀಟರ್ ನಾರ್ತ್ ಕೆರೋಲಿನಾದ ವೆಲ್‍ಕಮ್ ಲ್ಯಾಬೋರೇಟರಿ ಸೇರಿ ಸಂಶೋಧನೆ ಪ್ರಾರಂಭಿಸಿದನು. ಇಲ್ಲಿ ಪೀಟರ್‍ನ ಸಹೋದ್ಯೋಗಿಯಾಗಿದ್ದ ವಾನ್ ಕೆಂಪು ರಕ್ತ ಕಣದ ಪೆÇರೆಗಳ ರಾಚನಿಕಪ್ರೋಟಿನ್‍ಗಳಾದ ಸೈಕ್ಟ್ರಿನ್‍ಗಳನ್ನು ಕುರಿತಾದ ಸಂಶೋಧನೆ ನಡೆಸಿದ್ದನು. ಈತನೊಂದಿಗಿದ್ದ ಕ್ಯಾಂಪ್‍ಬೆಲ್ ಮೆಕ್‍ಮಿಲನ್ ಅನುವಂಶಿಕವಾದ ಸ್ಪೆರೋಸೈಟೋಸಿಸ್ ಲಕ್ಷಣ ಹೊಂದಿದ ಇಬ್ಬರು ಸಹೋದರಿಯರನ್ನು ಗುರುತಿಸಿದ್ದನು. ರಕ್ತಕೋಶಗಳು ಭಾರಿ ನವಿರಾಗಿ, ನಮ್ಯವಾಗುವಂತಾಗುವ (Flexible) ಅನಾರೋಗ್ಯವೇ ಸ್ಪೆರೋಸೈಟಿಸ್. ಇದು ಉಂಟಾದಾಗ ರಕ್ತ ಕೋಶದ ಆಕಾರದಲ್ಲಿ ವಿಕೃತಿಗಳಾಗುತ್ತವೆ. ವಾನ್ ಹಾಗೂ ಪೀಟರ್ ಈ ಕೋಶಗಳನ್ನು ಸಮೂಲಾಗ್ರವಾಗಿ ಅಭ್ಯಸಿಸಿ, ಇವುಗಳಲ್ಲಿ ಸ್ಪೆಕ್ಟಿನ್ ಕೊರತೆ ಇರುವುದನ್ನು ಖಚಿತಗೊಳಿಸಿದರು. ಸ್ಪೆರೋಸ್ಪೈಟೋಸಿಸ್ ಅಲ್ಪ ರಕ್ತ ಹೀನತೆಗೂ ಕಾರಣವಾಗುವುದನ್ನು ಗುರುತಿಸಿದರು. ಇದರ ನಂತರ ಪೀಟರ್ ರಕ್ತದ ಜೀವಭೌತಿಕ ಸ್ವರೂಪ ಅರಿಯುವಲ್ಲಿ ತನ್ನ ಗಮನ ಹರಿಸಿದನು. ರಕ್ತದಲ್ಲಿರುವ ಅರ್‍ಎಚ್ ಅಂಶ ಹಾಗೂ ಅದರ ಪ್ರಾಮುಖ್ಯತೆ ಎಲ್ಲರಿಗೂ ತಿಳಿದಿತ್ತಾದರೂ, ಇದರ ಅಣ್ವಯಿಕ ಸ್ವರೂಪ ಅಜ್ಞಾತವಾಗಿಯೇ ಉಳಿದಿದ್ದಿತು. ಆರ್‍ಎಚ್ ಪ್ರತಿಜನಕದಲ್ಲಿರುವ(Antigen) ಪಾಲಿಪೆಪ್ಟೈಡ್‍ನ್ನು ಪ್ರತ್ಯೇಕಿಸುವ ಯೋಜನೆಯನ್ನು ಪೀಟರ್ ಹಮ್ಮಿಕೊಂಡನು. ಇದು ಮುಂದೆ ರಕ್ತಕೋಶಗಳ ಪದರದ ಪ್ರೋಟಿನ್'ಗಳನ್ನು ಪ್ರತ್ಯೇಕಿಸುವಲ್ಲಿ ಅಂತ್ಯಗೊಂಡಿತು. ಈ ಕೋಶಗಳು ನೀರು ಸಾಗಾಣಿಕೆಯ ಕಾಲುವೆಗಳಂತೆ ಕಾರ್ಯ ನಿರ್ವಹಿಸುವುದು ಖಚಿತಗೊಂಡಿತು. ಉಳಿದ ವಿಜ್ಞಾನಿಗಳು ಕ್ಷ-ಕಿರಣ ಸ್ಪಟಿಕಾಲೇಖದೊಂದಿಗೆ ಈ ಪ್ರೋಟೀನ್‍ಗಳ ಸೂಕ್ಷ್ಮ ರಚನೆಯನ್ನು ವಿವರಿಸಿದರು. ಕೋಶ ಪೊರೆಗಳಲ್ಲಿನ ಪ್ರೋಟಿನ್‍ಗಳ ಅಧ್ಯಯನದಲ್ಲಿನ ಪರಿಶ್ರಮಕ್ಕಾಗಿ ಪೀಟರ್ 2003ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/21/2020