ಕುರ್ಟ್, ವುಥ್‍ರಿಕ್ (1938--) ೨೦೦೨
ಸ್ವಿಟ್ಸರ್’ಲ್ಯಾಂಡ್-ರಸಾಯನಶಾಸ್ತ್ರ –ಜೈವಿಕ ಸಾಮಗ್ರಿಗಳ ಅಧ್ಯಯನದಲ್ಲಿ ಕಾಂತೀಯ ಅನುರಣನ ತಂತ್ರದ (Magnetic Resonanace Technique) ಬಳಕೆ ಪರಿಚಯಿಸಿದಾತ.
ಕುರ್ಟ್ 4 ಅಕ್ಟೋಬರ್ 1938 ರಂದು ಆರ್‍ಬರ್ಗ್‍ನಲ್ಲಿ ಜನಿಸಿದನು. ಈತನ ಕುಟುಂ¨ ಕೃಷಿ ಹಿನ್ನೆಲೆಯದು. ಕುರ್ಟ್‍ನ ಬಾಲ್ಯದ ನೆನಪುಗಳೆಲ್ಲವೂ ದಟ್ಟ ಗ್ರಾಮೀಣ ಪರಿಸರದವಾಗಿವೆ.ಫೆ್ರಂಚ್ ಪ್ರಾಮುಖ್ಯತೆ ಗಳಿಸಿದ್ದ ದ್ವಿ ಭಾಷಾ ಶಾಲೆಯಲ್ಲಿ ಓದಿದ ಕುರ್ಟ್ಫೆ್ರಂಚ್ ಸಾಹಿತ್ಯ ಸಂಸ್ಕೃತಿ, ಸಿನಿಮಾಗಳಲ್ಲಿ ಆಸಕ್ತಿ ತಳೆದನು. ರಸಾಯನಶಾಸ್ತ್ರದಲ್ಲಿ ಪದವಿ ಪಡೆದ ಕುರ್ಟ್, ರಾಸಾಯನಿಕ ಶಾಸ್ತ್ರದಲ್ಲಿ ಅನ್ವಯಿಸುವಂತೆ ಬೈಜಿಕ ಕಾಂತೀಯ ಅನುರಣನ ವಿಧಾನದ ಅಧ್ಯಯನ ನಡೆಸಿದನು. 1967ರಲ್ಲಿ ಈ ವಿಧಾನ ಬಳಸಿ ಜೈವಿಕ ಬೃಹತ್ ಅಣುಗಳ ಬಗೆಗೆ ಸಂಶೋಧನೆ ನಡೆಸಿದನು.1965ರಲ್ಲಿ ಅಸಂಸಂಗಳಿಗೆ ಹೋಗಿ ಕ್ಯಾಲಿ¥sóÉರ್Çರ್ನಿಯಾ ವಿಶ್ವ ವಿದ್ಯಾಲಯದಲ್ಲಿ ವೃತ್ತಿ ಜೀವನ ಪ್ರಾರಂಭಿಸಿದನು. 1967ರಲ್ಲಿ ನ್ಯೂಜೆರ್ಸಿಯಾ ಮುರ್ರೆಹಲ್‍ನಲ್ಲಿರುವ ಬೆಲ್ ಪ್ರಯೋಗಾಲಯ ಸೇರಿದನು. ಇಲ್ಲಿ ಅತಿವಾಹಕ ಅಧಿಕ ವಿಯೋಜನೆಯ (High Resolution) ಬೈಜಿಕ ಕಾಂತೀಯ ಅನುರಣನ ದರ್ಶಕದ ( Nuclear Magnetic Resonance) ಪರಿಪಾಲನೆಯ ಹಾಗೂ ಸಂಶೋಧನೆಯ ಹೊಣೆ ಹೊತ್ತನು. 1969ರಲ್ಲಿ ಸ್ವಿಟ್ಸಲ್ರ್ಯಾಂಡ್‍ಗೆ ಹಿಂದಿರುಗಿ ಜೂರಿಕ್‍ನಲ್ಲಿದ್ದ ಎಟಿಎಚ್ ಸಂಸ್ಥೆ ಸೇರಿದನು. ಮುಂದೆ 32 ವರ್ಷಗಳ ಕಾಲ ಇಲ್ಲಿಯೇ ಉಳಿದನು. ಇಲ್ಲಿ ಕುರ್ಟ್ ಹಿಮೊಪೆÇ್ರೀಟೀನ್‍ಗಳ ರಾಚನಿಕ ಸ್ವರೂಪ ನಿರ್ಧರಿಸಲು ಯತ್ನಿಸಿದನು. 1976ರ ನಂತರ ಬೈಜಿಕ ಕಾಂತೀಯ ಅನುರಣನ ವಿಧಾನದಲ್ಲಿದ್ದ ಹೊಸ ತಂತ್ರಗಳನ್ನು ಬಳಸಿ ಬೈಜಿಕ ಅಣುಗಳ ತ್ರಿದಿಶಾ ಚಿತ್ರ ಪಡೆದನು. ಕುರ್ಟ್ ತನ್ನ ವೃತ್ತಿ ಜೀವನದಲ್ಲಿ ಹಲವಾರು ಸಂಕೀರ್ಣ ಬೈಜಿಕ ವಸ್ತುಗಳ ರಾಚನಿಕ ಸ್ವರೂಪ ನಿರ್ಧರಿಸಿದನು. ಇದಕ್ಕಾಗಿ ಕುರ್ಟ್2002ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/24/2020