ಕೊರ್ನ್‍ಬರ್ಗ್ , ರೋಜೆರ್ ಡಿ ೨೦೦೬
ಅಸಂಸಂ-ರಸಾಯನಶಾಸ್ತ್ರ-ಪಜೀವಕೋಶದಲ್ಲಿ ಪ್ರೊಟೀನ್ ಉತ್ಪಾದನೆ ನಿಯಂತ್ರಣ ಕುರುತಾಗಿ ಸಂಶೋಧಿಸಿದಾತ.
ಪ್ರಾಣಿಗಳ ಮೂಲ ಘಟಕ ಜೀವಕೋಶ. ಜೀವಕೋಶಗಳ ಕ್ರಮಬದ್ಧ ಕಾರ್ಯ ನಿರ್ವಹಣೆಯಿಂದಲೇ ಜೀವಿ ಅಸ್ತಿತ್ವದಲ್ಲಿರಲು ಸಾಧ್ಯವಾಗಿದೆ. ಜೀವಕೋಶಗಳ ಕೇಂದ್ರದಲ್ಲಿ ನ್ಯೂಕ್ಲಿಯಸ್ ಅಥವಾ ಕೋಶಬೀಜವಿದೆ. ಇದನ್ನು ಕೋಶದ್ರವ್ಯ (Cytoplasm) ಆವರಿಸಿದೆ. ಜೀವಕೋಶಕ್ಕೆ ಬೇಕಾದ ಪೋಷಣೆ ಮತ್ತು ಶಕ್ತಿ ಉತ್ಪಾದನೆಗಾಗಿ ಕೋಶ ದ್ರವ್ಯದಲ್ಲಿ ಪ್ರೊಟೀನ್ ಉತ್ಪಾದನೆಯಾಗಬೇಕು. ಈ ಶಕ್ತಿ ಉತ್ಪಾದನೆಗಾಗಿ ಕೋಶ ದ್ರವ್ಯದಲ್ಲಿ ಪ್ರೊಟೀನ್ ಉತ್ಪಾದಕ ಘಟಕಗಳಿವೆ. ಇವು ಅಗತ್ಯಕ್ಕೆ ಬೇಕಾದಷ್ಟು ಪ್ರೊಟೀನ್ ಉತ್ಪಾದಿಸಲು ಜೀವಕೋಶದ ಬೀಜದಲ್ಲಿರುವ ಡಿ.ಎನ್.ಎಯಿಂದ ಮಾಹಿತಿ ರವಾನೆಯಾಗಬೇಕು. ಡಿ.ಎನ್.ಎ ಯಿಂದ ಇಂತಹ ಆದೇಶ ಮಾಹಿತಿ ಬರದೆ ಪ್ರೊಟೀನ್ ಉತ್ಪಾದನೆ ಸಾಧ್ಯವಿಲ್ಲ. ಇಂತಹ ಮಾಹಿತಿ ರವಾನೆಯ ವಿನ್ಯಾಸ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಆಲ್ಲದೆ ಈ ಆದೇಶ ಮಾಹಿತಿ ದೂತ ಆರ್‍ಎನ್‍ಎ (m-RNA=Messenger RNA) ಮೂಲಕ ಬರುತ್ತದೆ. ಜೀವದ ಅಸ್ತಿತ್ವಕ್ಕೆ ಇದು ನಿರಂತರವಾಗಿ ನಡೆಯಬೇಕಾದ ಕ್ರಿಯೆ. ಈ ಕ್ರಿಯೆಯನ್ನು ಪಾರಲಿಖಿತತೆ (Transcription)ಎನ್ನುತ್ತಾರೆ. ನಾನಾ ದೋಷ, ಹಾಗೂ ಕೊರತೆಗಳಿಂದಾಗಿ ಪಾರಲಿಖಿತ ಕ್ರಿಯೆಗೆ ಅಡ್ಡಿಯುಂಟಾಗಿ, ಪೆÇ್ರೀಟೀನ್‍ಗಳ ಉತ್ಪಾದನೆ ಕುಂಠಿತ ಅಥವಾ ಸ್ಥಗಿತವಾಗುತ್ತದೆ. ಆಗ ಪೋಷಕ ಅಂಶಗಳಿಲ್ಲದೆ ಜೀವಕೋಶಗಳು ಸಾಯುತ್ತವೆ. ಇದು ದೇಹದ ಅಂಗಾಂಶಗಳು ವೈಫಲ್ಯಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದ ಮೂತ್ರಪಿಂಡ, ಕ್ಯಾನ್ಸರ್, ಹೃದಯ ರೋಗಗಳು ಬಾಧಿಸುತ್ತವೆಯೆಂದು ರೋಜರ್ ತೋರಿಸಿದ್ದಾನೆ. ಇದಕ್ಕಾಗಿ 2006ರ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾಗಿದ್ದನೆ. ಕಾರ್ನ್‍ಬರ್ಗ್ ತಂದೆ ಆರ್ಥರ್ ಕೊರ್ನ್‍ಬರ್ಗ್ 1959ರಲ್ಲಿ ಜೀವರಸಾಯನಿಕ ಕ್ರಿಯೆಗಳ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದಿದ್ದುದು ಗಮನಾರ್ಹ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/28/2020