অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೊಯಿಚಿ , ತನಾಕ

ಕೊಯಿಚಿ , ತನಾಕ

ಕೊಯಿಚಿ , ತನಾಕ (1959--) ೨೦೦೨

ಜಪಾನ್-ರಸಾಯನಶಾಸ್ತ್ರ-ಜೈವಿಕ ದ್ರವ್ಯರೋಹಿತ ಮಾಕದ ( Bio Mass Spectrometer) ನಿರ್ಮಾಣದ ಯಶಸ್ಸನ್ನು ಸಾಧಿಸಿದಾತ.

ಕೊಯಿಚಿ 3 ಆಗಸ್ಟ್ 1959ರಂದು ಜನಿಸಿದನು. ತಾಯ್ತನದ ವಯಸ್ಸು ಮೀರುವ ಸಮಯದಲ್ಲಿ ಮಗನನ್ನು ಪಡೆದಿದ್ದ ಈತನ ತಾಯಿ ಕೊಯಿಚಿ ಜನಿಸಿದ ಒಂದೇ ತಿಂಗಳಲ್ಲಿ ಮೃತಳಾದಳು. ಹೀಗಾಗಿ ಕೊಯಿಚಿ ಚಿಕ್ಕಪ್ಪನ ಆಸರೆಯಲ್ಲಿ ಬೆಳೆದನು. ಹದಿನೆಂಟನೇ ವರ್ಷದವರೆಗೆ ಇದು ಕೊಯಿಚಿಗೆ ತಿಳಿದಿರಲಿಲ್ಲ. ಆದ್ದರಿಂದ ಸಾಕಿದವರನ್ನೇ ತನ್ನ ಹೆತ್ತವರೆಂದು ಭಾವಿಸಿದ್ದನು. ನಿಜ ತಿಳಿದ ನಂತರವೂ ಅವರನ್ನು ತಂದೆ ತಾಯಿಗಳೆಂದು ಕೊಯಿಚಿ ಪರಿಗಣಿಸುತ್ತಿದ್ದಾನೆ. ಇವರಿಂದ ಕೊಯಿಚಿ ಕಾಯಕದ ಮಹತ್ವವನ್ನು ಅರಿತನು. 1966ರಲ್ಲಿ ಟೊಯಾಮ ನಗರದಲ್ಲಿ ಪ್ರಾಥಮಿಕ ಶಾಲೆಗೆ ಕೊಯಿಚಿ ಸೇರಿದನು. ಶಾಲಾ ಬಾಲಕನಾಗಿ ಈತ ಸಾಧಾರಣ ವಿದ್ಯಾರ್ಥಿಯಾಗಿದ್ದನು. 1970ರಲ್ಲಿ ಒಸಾಕಾದಲ್ಲಿ ಜರುಗಿದ ವಿಶ್ವ ಮೇಳಕ್ಕೆ ಬಾಲಕ ಕೊಯಿಚಿ ಹೋಗಿದ್ದನು. ಇಲ್ಲಿ ವಿಜ್ಞಾನದ ಬಗ್ಗೆ ಕೊಯಿಚಿಯ ಮನದಲ್ಲಿ ಒಂದು ಅಧ್ಬುತ ಚಿತ್ರಣ ಮೂಡಿತು. ಹಿgಯ ಪ್ರಾಥಮಿಕ ಶಾಲೆಯಲ್ಲಿ ಕೊಯಿಚಿಯ ಗುರುವಾಗಿದ್ದ  ಕಯೊಚಿ ಸವೆಗಾಕಿ ಯಾವುದನ್ನೂ ಕಂಠಪಾಠ ಮಾಡಬಾರದೆಂದೂ, ವಿಚಾರಿಸುವುದು ಹಾಗೂ ವಿಶ್ಲೇಷಿಸುವುದು ಮಾತ್ರವೇ ವಿಜ್ಞಾನವೆಂದು ಮನದಟ್ಟು ಮಾಡಿದನು. ಪ್ರವೇಶ ಪರೀಕ್ಷೆ ಬರೆದು ಕೊಯಿಚಿ ವಿಶ್ವವಿದ್ಯಾಲಯದ ಪದವಿ ಅಧ್ಯಯನಕ್ಕೆ ಪ್ರವೇಶ ಪಡೆದನು. ಜಪಾನಿನಲ್ಲಿ ಪದವಿಗೆ ಸೇರುವ ಮುನ್ನ ಎಲ್ಲಾ ಕೌಟುಂಬಿಕ ದಾಖಲೆಗಳನ್ನು ಒದಗಿಸಬೇಕು. ಆಗ ಕೊಯಿಚಿಯ ಚಿಕ್ಕಪ್ಪ ಒಲ್ಲದ ಮನಸ್ಸಿನಿಂದ ಸಲ್ಲಿಸಿದ ವಿವರಗಳಿಂದ ಕೊಯಿಚಿಗೆ ತಾನು ಅವರ ನಿಜವಾದ ಮಗನಲ್ಲವೆಂದು ತಿಳಿದು ಬಂದಿತು. 1978ರಲ್ಲಿ ಟೊಹುಕು ವಿಶ್ವವಿದ್ಯಾಲಯದಲ್ಲಿ ವೈದ್ಯುತ್ ಇಂಜಿನಿಯರಿಂಗ್ ಪದವಿ ಪ್ರವೇಶ ಕೊಯಿಚಿಗೆ ದಕ್ಕಿತು. ಪದವಿಯ ಎರಡನೇ ವರ್ಷದಲ್ಲಿ ಜರ್ಮನಿ ಭಾಷೆಯಲ್ಲಿ ಅಲ್ಪ ಅಂಕ ಗಳಿಸಿ, ಮತ್ತೊಮ್ಮೆ ಅದೇ ತರಗತಿಯಲ್ಲಿ ಮುಂದುವರೆಯುವ ಸ್ಥಿತಿ ಕೊಯಿಚಿಗೆ ಬಂದೊದಗಿತು. ಲೌಹಿಕ ಶಾಸ್ತ್ರದಲ್ಲಿ ವಿಖ್ಯಾತನಾಗಿದ್ದ ಕೊಟೊರೊ ಹೊಂಡ , ಯಾಗಿ ಅ್ಯಂಟೆನ್ ಸ್ವಾಮ್ಯ ಪಡೆದ ಹಿಡೆಟ್ ಸುಗು ಯಾಗಿ ಅರೆವಾಹಕಗಳಲ್ಲಿ ಅಧಿಕೃತವಾಣಿಯಾಗಿದ್ದ ಜುನ್ ಇಚಿಷಿಜಾತ ಟೊಹೊಕು ವಿಶ್ವವಿದ್ಯಾಲಯದ ಸಿಬ್ಬಂದಿಯಾಗಿದ್ದರು. ಇದು ವಿದ್ಯಾರ್ಥಿಗಳಲ್ಲಿ ಸಾಧನೆಯ ಪ್ರೇರಣೆಯನ್ನೊದಗಿಸಿದ್ದಿತು. ಪದವಿ ಮುಗಿದ ನಂತರ ಕೊಯಿಚಿ ಗೃಹೋಪಕರಣ ತಯಾರಿಸುವ ವೈದ್ಯುತ್ ಕಂಪನಿ ಸೇರಿದನು. ಇಲ್ಲಿ ಕೊಯಿಚಿ ಅಂತಹ ಯಶಸ್ಸನ್ನು ಕಾಣಲಿಲ್ಲ. ಅಲ್ಲದೆ ವೈದ್ಯುತ್ ಇಂಜಿನಿಯರಿಂಗ್‍ನಲ್ಲಿ ತನಗಿರುವ ಜ್ಞಾನ ಅಲ್ಪವೆಂದು ಭಾಸವಾಯಿತು. ಇದಕ್ಕೆ ಪರಿಹಾರವಾಗಿ,ವೈದ್ಯಕೀಯ ಉಪಕರಣ ತಯಾgಸುವ ಷಿಮಡ್ಜು  ಕಂಪನಿಗೆ ಸೇರಲು ಶಿಫಾರಸ್ಸು ಮಾಡಬೇಕೆಂದು ತನ್ನ ಗುರುವಾದ ಅಡಚಿಯನ್ನು ಕೋರಿದನು. ಇದರ ಫಲವಾಗಿ ಕೊಯಿಚಿಗೆ ಕೆಲಸ ದಕ್ಕಿತಾದರೂ, ಆತನನ್ನು ಆತ ಬಯಸಿದ ಉಪಕರಣ ತಯಾರಿಕಾ ಘಟಕಕ್ಕೆ  ಹಾಕದೆ ವೈಶ್ಲೇಷಿಕ ಉಪಕರಣ ವಿಭಾಗದಲ್ಲಿ ನಿಯೋಜಿಸಲಾಯಿತು. ಇದು ಮುಂದೆ ಕೊಯಿಚಿಗೆ ವರ ಪ್ರದಾನವೆಸಿತು. ಷುಮಡ್ಜುವಿನ ಮುಖ್ಯ Œಕಛೇರಿ ಕ್ಯೋಟೋ ನಗರದಲ್ಲಿದ್ದಿತು. ಜಪಾನಿನ ಒಂಬತ್ತು ಜನ ನೊಬೆಲ್ ಪ್ರಶಸ್ತಿ ವಿಜೇತರಲ್ಲಿ ಆರು ಜನ ಈ ನಗರದವರು ಎಂಬುದೊಂದು ವಿಶೇಷ.  ಹಿಡೆಕಿ ಯುಕಾವ (1949) , ಷಿನಿಚಿರೋ ಟೊಮೊನಾಗ (1965) , ಕೆನಿಚಿ ಫುಕುಯಿ (1981) ,ರಯೊಜಿ ನೊಯೊರಿ (2001) ಕೊಯಿಚಿ ತನಾಕ (1932) ನೊಬೆಲ್ ಪ್ರಶಸ್ತಿ ಪಡೆದ ಕ್ಯೋಟೋ ನಗರವಾಸಿಗಳು.  ಷಿಮಡ್ಜು ಕಂಪನಿ ಅರೆವಾಹಕ ಹಾಗೂ ಲೋಹಗಳ ಮೇಲ್ಮೈ ಸ್ವರೂಪವನ್ನು ಲೇಸರ್ ಕಿರಣದಿಂದ  ಓದಿ ನಕಾಶೆಗೊಳಿಸುವ ಉಪಕರಣ ನಿರ್ಮಾಣದ ಯೋಜನೆ  ಹಮ್ಮಿಕೊಂಡಿದ್ದಿತು. ಈ ಕಂಪನಿಗೆ ಪ್ರತಿಸ್ಪರ್ಥಿಯಾಗಿದ್ದ ಜರ್ಮನಿಯ ಕಂಪನಿ  ಇವರಿಗಿಂತಲೂ ಉತ್ತಮವಾದ ಇಂತಹುದೇ  ಉಪಕರಣ ನಿರ್ಮಿಸಿದ್ದಿತು.  ಆದ್ದರಿಂದ ಇದಕ್ಕೆ ಪರ್ಯಾಯವಾಗಿ ಜೈವಿಕ ಪದಾರ್ಥಗಳ ಲಕ್ಷಣ ಹರಿಯುವ ಯತ್ನ ನಡೆಸಲಾಯಿತು. ಇದಕ್ಕಾಗಿ ಲೇಸರ್ ಚೈತನ್ಯವನ್ನು ಹೀರಿಕೊಂಡು, ವಿನಾಶಗೊಳ್ಳದಂತೆ ಬೃಹತ್ ಅಣುಗಳನ್ನು ಅಯಾನಿಕರಣಗೊಳಿಸುವ ಮಾಧ್ಯಮದ ಹುಡುಕಾಟಕ್ಕೆ ಕೊಯಿಚಿಯನ್ನು ನಿಯೋಜಿಸಲಾಂ¬ತು. ತಾನು ಹಿಂದೆಂದೂ ಅಭ್ಯಾಸ ಮಾಡದ ರಾಸಾಯನಿಕಶಾಸ್ತ್ರದ ಪರಿಧಿಗೆ ಧುಮುಕುವ ಅನಿವಾರ್ಯತ ಕೊಯಿಚಿಗೆ ಬಂದೊದಗಿತು. ಈ ಸಂಶೋಧನೆಯ ಅಂಗವಾಗಿ ಕೊಯಿಚಿ ನೂರಾರು ಮಾಧ್ಯಮಗಳನ್ನು ತನ್ನ ಪರೀಕ್ಷೆಗೆ ಒಡ್ಡಿದನು. 1985ರಫೆಬ್ರವರಿಯಲ್ಲಿ ಪ್ರಯೋಗಕ್ಕಾಗಿ ಸಿದ್ದಪಡಿಸಿದ್ದ ಶುದ್ಧ ಕೊಬಾಲ್ಟ್‍ನ ಅತಿಸೂಕ್ಷ್ಮ ಪುಡಿ  ಗ್ಲಿಸೆರಿನ್‍ನಿಂದ ಕಲುಷಿತಗೊಂಡಿತು.  ಇದನ್ನು ಸಂಶೋಧನಾ ತ್ಯಾಜ್ಯವೆಂದು ಕೊಯಿಚಿ ಪರಿಗಣಿಸಿದ್ದನು. ಆದರೆ ಬಾಲ್ಯದಲ್ಲಿ ಆತನ ಅಜ್ಜಿ ಯಾವುದನ್ನೇ ಆಗಲಿ ನಿರರ್ಥಕವೆಂದು ಬಿಸುಡಬಾರದೆಂದು ಮೇಲಿಂದ ಮೇಲೆ ಹೇಳುತ್ತಿದ್ದಳು. ಇದು ಕೊಯಿಚಿಯ ಮನದಾಳದಿಂದ ಮೇಲೆದ್ದಿತು. ಹೀಗಾಗಿ ಕಲುಷಿತ ಪ್ರತಿಚಯದ (Specimen) ಮೇಲೆ ಕೊಯಿಚಿ ಕೆಲ ಪ್ರಯೋಗಗಳನ್ನು ನಡೆಸಿದನು. ಆಶ್ಚರ್ಯವೆಂಬಂತೆ ಕೊಯಿಚಿ ಯಾವ ಮಾಧ್ಯಮಕ್ಕಾಗಿ ತಡಕಾಡುತ್ತಿದ್ದನೋ ಅದು ತಾನಾಗಿಯೇ ಕಾಲಿಗೆ ತಾಗಿ ಸಿಕ್ಕಿದಂತಾಯಿತು. ಷಿಮಡ್ಜು ಕಂಪನಿ ಈ ದಿಶೆಯಲ್ಲಿ ಇನ್ನು ಹೆಚ್ಚಿನ ಸಂಶೋಧನೆ ನಡೆಸುವಚಿತೆ ಕೊಯಿಚಿಗೆ ಪೂರ್ಣ ಬೆಂಬಲ ನೀಡಿತು. ಇದರ ಫಲಿತಾಂಶವಾಗಿ ಜೈವಿಕ ವಸ್ತುಗಳ ದ್ರವ್ಯ ರೋಹಿತಮಾಪಕ (Mass Spectrometer)1987ರ ವೇಳೆಗೆ ನಿರ್ಮಾಣಗೊಂಡಿತು. ಇದು ಜಪಾನಿ ಭಾಷೆಯಲ್ಲಿ ಪ್ರಕಟಗೊಂಡಿದ್ದರಿಂದ ಬಾಹ್ಯ ಜಗತ್ತಿಗೆ ಅಜ್ಞಾತವಾಗಿಯೇ ಉಳಿಯಿತು. 1987ರಲ್ಲಿ ಕೊಯಿಚಿ ಮೊಟ್ಟ ಮೊದಲ  ಬಾರಿಗೆ ಇಂಗ್ಲೀಷ್‍ನಲ್ಲಿ ತನ್ನ ಲೇಖನ ಪ್ರಕಟಿಸಿದಾಗ ಜಗತ್ತಿನಾದ್ಯಂತ ಇದಕ್ಕೆ ಮನ್ನಣೆ ದಕ್ಕಿತು.  ಮುಂದೆ ಷಿಯುಡ್ಜು ಕಂಪನಿ ಹಲವಾರು ಜೈವಿಕ ದ್ರವ್ಯ ರೋಹಿತ ದರ್ಶಕಗಳನ್ನು ನಿರ್ಮಿಸಿ ಮಾರಿತು. ಸಂಶೋಧನಾಲಯಗಳಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆಗಳು ಬಂದವು. ಜೈವಿಕ ದ್ರವ್ಯ ರೋಹಿತದರ್ಶಕ ತಂತ್ರಗಳ ಅಭಿವೃದ್ಧಿಗಾಗಿ ಕೊಯಿಚಿ 2002ರಲಿ ನೊಬೆಲ್ ಪ್ರಶಸ್ತಿ ಪಡೆದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 4/25/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate