অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆ್ಯರನ್ , ಸಿಕ್‍ನೊವೆರ್

ಆ್ಯರನ್ , ಸಿಕ್‍ನೊವೆರ್

ಆ್ಯರನ್ , ಸಿಕ್‍ನೊವೆರ್ (1947--)  ೨೦೦೪

ಇಸ್ರೇಲ್-ವೈದ್ಯಕೀಯ-ಸಾಮಾನ್ಯ ಪ್ರೊಟೀನ್‍ಗಳ ಶ್ರೇಣೀಕರಣದ ಕ್ರಿಯಾವಿನ್ಯಾಸ ವಿವರಿಸಿದಾತ.

ಆ್ಯರನ್ ಇಸ್ರೇಲ್‍ನ ಹೈಫ್ ಪಟ್ಟಣದಲ್ಲಿ ಜನಿಸಿದನು.  ಈತ ಜನಿಸುವ ಒಂದು ತಿಂಗಳು ಮೊದಲು ವಿಶ್ವ ಸಂಸ್ಥೆ ಇಸ್ರೇಲ್‍ನ್ನು ಸ್ವತಂತ್ರ ದೇಶವೆಂದು ಪುರಸ್ಕರಿಸಿದ್ದಿತು.  ಆದರೆ ಇಸ್ರೇಲ್‍ನ್ನು ಸುತ್ತುವರಿದಿದ್ದ ಅರಬ್ ರಾಷ್ಟ್ರಗಳು ಇದನ್ನು ಒಪ್ಪಲಿಲ್ಲ.  ಇದರ ಫಲವಾಗಿ ಇಸ್ರೇಲ್ ಹಾಗೂ ಇತರ ಅರಬ್ ರಾಷ್ಟ್ರಗಳೊಂದಿಗೆ ಸುಮಾರು ಒಂದು ವರ್ಷಗಳ ಕಾಲ ತೀವ್ರ ಕದನ ಜರುಗಿತು.  ಇದು ಆಗ ಹಸುಳೆಯಾಗಿದ್ದ ಆ್ಯರನ್ ಜೀವನದ ಮೇಲೂ ಪ್ರಭಾವ ಬೀರಿತು.  ಮೂಲತ: ಪೆÇೀಲೆಂಡ್‍ನವರಾಗಿದ್ದ ಅ್ಯರನ್ ತಂದೆ ತಾಯಿ 1917ರಲ್ಲಿ ಯಹೂದಿ ಚಳುವಳಿಗೆ ಓಗೊಟ್ಟು, ಬ್ರಿಟಿಷ್ ಅಧೀನನಲ್ಲಿದ್ದ ಇಸ್ರೇಲ್‍ಗೆ ಬಂದು ನೆಲೆಸಿದ್ದರು.  ಬಾಲ್ಯದಿಂದಲೂ ಆ್ಯರನ್‍ಗೆ ಸಸ್ಯ ಹಾಗೂ ಜೀವಿಗಳ ಬಗೆಗೆ ಅತೀವ ಆಸಕ್ತಿಯಿದ್ದಿತು.  1965ರಲ್ಲಿ ಇಸ್ರೇಲ್ ವಿಶ್ವವಿದ್ಯಾಲಯದ ಏಕೈಕ ವೈದ್ಯಕೀಯ ಕಾಲೇಜನ್ನು ಸೇರಿದ ಆ್ಯರನ್ 1969ರಲ್ಲಿ ಪದವಿ ಗಳಿಸಿದನು.  ವೃತ್ತಿ ಜೀವನ ಪ್ರಾರಂಭಿಸಿದ ಅಲ್ಪ ಕಾಲದಲ್ಲೇ ಆ್ಯರನ್‍ಗೆ ರೋಗಗಳ ಬಗ್ಗೆ ಅದರ ಕಾರಣ ಹಿನ್ನೆಲೆಯ ಅರಿವಿನ ಬಗ್ಗೆ ಅತೃಪ್ತಿ ಮೂಡಿತು.  ದೈನಂದಿನ ವೈದ್ಯಕೀಯ ವೃತ್ತಿಯಲ್ಲಿ ರೋಗ ಕಾರಣವನ್ನು ಅರಿಯುವುದಕ್ಕಿಂತಲೂ, ಅದರ ಪ್ರಮುಖ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡುವುದು ಜ್ಞಾನಾರ್ಜನೆಗೆ ನೆರವಾಗದೆಂದು ಭಾಸವಾಯಿತು. ಆದ್ದರಿಂದ ಆ್ಯರನ್ ಜೀವರಸಾಯನಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನ ಕೈಗೆತ್ತಿಕೊಂಡನು.

ಸ್ಯಾನ್’ಫ್ರಾನ್ಸಿಸ್ಕೊದಕ್ಯಾಲಿಫೊರ್ನಿಯಾವಿಶ್ವವಿದ್ಯಾಲಯದಲ್ಲಿದ್ದ ಅವ್ರಮ್ ಹೆರ್ಷಕೋ ಹೈ¥sóÁದಲ್ಲಿ ಹೊಸದಾಗಿ ಮುಖ್ಯಸ್ಥನಾಗಿ ಪ್ರಾರಂಭವಾಗಿದ್ದ ವೈದ್ಯಕೀಯ ನೇಮಕಗೊಂಡನು. ಈತನ ಕೈಕೆಳಗೆ ಆ್ಯರನ್ ಸಂಶೋಧನೆಗೆ ಸೇರಿದನು.  ಡಾಕ್ಟರೇಟ್ ಗಳಿಸಿದ ನಂತರ ರಾಷ್ಟ್ರೀಯ ನೀತಿಗನುಗುಣವಾಗಿ 1973ರಿಂದ 1976 ರವರೆಗೆ ಕಡ್ಡಾಯ ಮಿಲಿಟರಿ ತರಭೇತಿ ಪಡೆದನು. ಕೋಶಗಳೊಳಗೆ ಸಾಮಾನ್ಯ ಪ್ರೊಟೀನ್‍ಗಳ ಶ್ರೇಣೀಕರಣದ (Gradation) ಕ್ರಿಯಾವಿನ್ಯಾಸ (Mechanism)ಹಾಗೂ ಕಾರಣಗಳನ್ನು ಕುರಿತಾಗಿ ಆ್ಯರನ್ ಪರಿಶೀಲನೆ ನಡೆಸತೊಡಗಿದನು. ಇದರ ಫಲವಾಗಿ ಯುಬಿಕ್ವಿಟಿನ್ ಮಧ್ಯವರ್ತಿ ಕ್ರಿಯೆಯಿಂದ ಜರುಗುವ ಅಪಶ್ರೇಣೀಕರಣದ(Degradation)ವಿವರವನ್ನು ಬಹಿರಂಗಗೊಳಿಸಿದನು.  ಇದಕ್ಕಾಗಿ 2004ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಗಳಿಸಿದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 12/27/2018



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate