ಆವ್‍ರ್ಯಾಮ್ , ಹೆರ್ಷ್‍ಕೊ (1937--) -೨೦೦೪
ಹಂಗರಿ -ವೈದ್ಯಕೀಯ-ಪ್ರೊಟೀನ್‍ಗಳು ಯುಬಿಕ್ವಿಟಿನ್‍ನ ಮಧ್ಯಸ್ಥಿಕೆಯಿಂದ ಅಪಶ್ರೇಣಿಕರಣಗೊಳ್ಳುವುದನ್ನು ಅನಾವರಣಗೊಳಿಸಿದನು.
ಬುಡಾಪೆಸ್ಟ್‍ನಿಂದ 150 ಕಿ.ಮೀ ದೂರದ ಕ್ಯಾರ್‍ಕ್ಯಾಗ್ ಎಂಬ ಸಣ್ಣ ಪಟ್ಟಣದಲ್ಲಿ 31 ಡಿಸೆಂಬರ್ 1937ರಂದು ಹೆರ್ಷ್‍ಕೋ ಜನನವಾಯಿತು. ಹೆರ್ಷ್‍ಕೊ ತಂದೆ ಪ್ರಾಥಮಿಕ ಶಾಲೆಯ ಉಪಾಧ್ಯಾಯಯನಾಗಿದ್ದನು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿ ಹಂಗರಿ, ಜರ್ಮನಿಂiÀi ಹಿಟ್ಲರ್‍ನೊಂದಿಗೆ ಸೇರಿತು. ಹೆರ್ಷ್‍ಕೋ ತಂದೆ ಯಹೂದಿಯಾದುದರಿಂದ ಜೀತದಾಳಾಗಿ ಸೆರೆಹಿಡಿಯಲ್ಪಟ್ಟು ರಷ್ಯಾದ ಕದನ ಭೂಮಿಗೆ ವರ್ಗಾಯಿಸಲ್ಪಟ್ಟನು. ಇಲ್ಲಿ ರಷ್ಯಾದ ಸೆರೆಯಾಳಾದನು. 1944ರ ಅಂತ್ಯದ ವೇಳೆಗೆ ಹಿಟ್ಲರ್ ಒಂದೊಂದೇ ಯುದ್ದ ಸೋಲುತ್ತಾ ಹೋದಂತೆ ಹಂಗರಿಯ ಸರ್ವಾಧಿಕಾರ ಹೊರ್ತಿ, ಹಿಟ್ಲರ್‍ನಿಂದ ದೂರ ಸರಿಯಲು ಯತ್ನಿಸಿದನು. ಇದನ್ನು ಮೊದಲೇ ಆರಿತ ಹಿಟ್ಲರ್ ಹಂಗರಿಯನ್ನು ಆಕ್ರಮಿಸಿ ಯಹೂದಿಗಳನ್ನು ಯಾತನಾ ಶಿಬಿರಗಳಾದ ಘೆಟ್ಟೋಗಳಿಗೆ ತಳ್ಳಿದನು. ಆಗ ಹೆರ್ಷ್‍ಕೋ ಕುಟುಂಬ ಕೂಡ ಸೆರೆಯಾಗಿ ಆಸ್ಟ್ರಿಯಾದ ಹಳ್ಳಿಯೊಂದರಲ್ಲಿ ಜೀತದಾಳುಗಳಾಗಿ ಬದುಕಿ ನಂತರ ಜರ್ಮನಿಗೆ ಬಂದು ನೆಲೆಸಿತು. ಈ ಸಮಯದಲ್ಲಿ ಹಂಗರಿಯಲ್ಲಿ ಮೂರುವರೆ ಲಕ್ಷಕ್ಕೂ ಅಧಿಕ ಯಹೂದಿಗಳನ್ನು ಸೆರೆಹಿಡಿದು ಹತ್ಯೆ ಮಾಡಲಾಯಿತು 1945ರಲ್ಲಿ ರಷ್ಯಾ ಸೇನೆ ಹಂಗರಿಯನ್ನು ವಿಮೋಚನೆಗೊಳಿಸಿತು. ಯುದ್ದದಲ್ಲಿ ಕಣ್ಮರೆಯಾಗಿದ್ದ ಹೆರ್ಷ್‍ಕೋ ತಂದೆ, 1946ರಲ್ಲಿ ಮರಳಿ ಕುಟುಂಬ ಸೇರಿದನು. ಇವರು 1950ರಲ್ಲಿ ಹೊಸದಾU ನಿರ್ಮಾಣಗೊಂಡಿದ್ದ ಇಸ್ರೇಲ್‍ನ ಜೆರುಸಲೇಮ್‍ನಲ್ಲಿ ನೆಲೆಸಿದರು. ಇಲ್ಲಿ ಹೊಸದಾಗಿ ಹೀಬ್ರೂ ಭಾಷೆ ಕಲಿಯುವ ಅನಿವಾರ್ಯತೆ ಬಂದೊದಗಿತು. ಹೆರ್ಷ್‍ಕೋ ತಂದೆ, ಮತ್ತೊಮ್ಮೆ ಶಾಲಾ ಶಿಕ್ಷಕನಾಗಿ ಸೇರಿ ಮಕ್ಕಳನ್ನು ಕಡು ಕಷ್ಟದಿಂದ ಸಾಕಿ ತನ್ನೆಲ್ಲಾ ಗಳಿಕೆಯನ್ನು ಅವರಿಗೆ ಅತ್ಯುತ್ತಮ ವಿದ್ಯಾಭ್ಯಾಸ ಒದಗಿಸಲು ವಿನಿಯೋಗಿಸಿದನು. ಪ್ರೌಢಶಾಲೆ ಮುಗಿಸುವ ವೇಳೆಗೆ ಹೆರ್ಷ್‍ಕೋ ಹಲವಾರು ವಿಷಯಗಳಲ್ಲಿ ಆಸಕ್ತನಾಗಿದ್ದು, ಯಾವುದರಲ್ಲಿ ವಿದ್ಯಾಭ್ಯಾಸ ಮುಂದುವರೆಸಬೇಕೆಂಬ ಗೊಂದಲಕ್ಕೊಳಗಾದನು. 1956ರಲ್ಲಿ ಹೀಬ್ರೂ ವಿಶ್ವವಿದ್ಯಾಲಯದ ಹರಾಸಾ ವೈದ್ಯಕೀಯ ಕಾಲೇಜನ್ನು ಸೇರಿದನು. 1960ರಲ್ಲಿ ಪದವಿ ಗಳಿಸಿದ ನಂತರ ಮ್ಯಾಗರ್ ಮಾರ್ಗದರ್ಶನದಲ್ಲಿ ಜೀವ ರಸಾಯನಶಾಸ್ತ್ರದಲ್ಲಿ ಸಂಶೋಧನೆ ಪ್ರಾರಂಭಿಸಿದನು. 1969ರಿಂದ 1971 ರವರೆಗೆ ಸ್ಯಾನ್ಫ್ರಾನ್ಸಿಸ್ಕೋದ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದ ಜೀವಭೌತ ಹಾಗೂ ಜೀವ ರಸಾಯನಶಾಸ್ತ್ರ ವಿಭಾಗದಲ್ಲಿ ಗೋರ್ಡನ್ ಟಾಮ್‍ಕಿನ್ಸ್‍ನೊಂದಿಗೆ ಅಧ್ಯಯನ ಮುಂದುವರೆಸಿದನು. 1971ರಲ್ಲಿ ಜೆರುಸಲೇಮ್‍ಂಗೆ ಹಿಂದುರುಗಿ ಹೈ¥sóÁದಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ ವೈದ್ಯಕೀಯ ಕಾಲೇಜಿನಲ್ಲಿ ಜೀವರಸಾಯನಶಾಸ್ತ್ರ ವಿಭಾಗದ ಕಾರ್ಯದರ್ಶಿಯಾದನು. ಇಲ್ಲಿ ಆ್ಯರನ್ ಸಿಕ್‍ನೊವೆರ್‍ನೊಂದಿಗೆ ಪ್ರೊಟೀನ್‍ಗಳು ಯುಬಿಕ್ವಿಟಿನ್‍ನ ಮಧ್ಯಸ್ಥಿಕೆಯಿಂದ ಅಪಶ್ರೇಣಿಕರಣಗೊಳ್ಳುವುದನ್ನು (Degradation) ಅನಾವರಣಗೊಳಿಸಿದನು. ಇದಕ್ಕಾಗಿ 2004ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/15/2020