ಹೆರಾಲ್ಡ್ , ಡಬ್ಲ್ಯೂ ಕ್ರೋಟೋ ಸರ್ (1937--)
ಬ್ರಿಟನ್-ರಸಾಯನಶಾಸ್ತ್ರ-
ಬರ್ಲಿನ್ ಮೂಲದವನಾಗಿದ್ದ ಹೆರಾಲ್ಡ್ ತಂದೆ, ತಾಯಿ 193೦ ರ ಅವಧಿಯಲ್ಲಿ ನಿರ್ವಸಿತರಾಗಿ ಬ್ರಿಟನ್‍ಗೆ ಬಂದು ಬೊಲ್ಟನ್ ಪಟ್ಟಣದಲ್ಲಿ ನೆಲೆಸಿದ್ದರು. ಈ ಪಟ್ಟಣ ಕೈಗಾರಿಕಾ ಕ್ರಾಂತಿಯ ಅಂಗವಾಗಿ ಖ್ಯಾತವಾಗಿದ್ದಿತಲ್ಲದೆ , ಹತ್ತಿ ಹಾಗೂ ಬಟ್ಟೆ ಗಿರಣಿಗಳಿಂದ ಸದಾ ಕ್ರಿಯಾಶೀಲವಾಗಿರುತ್ತಿದ್ದಿತು. ಹೆರಾಲ್ಡ್ ತಂದೆ ಸಣ್ಣ ವ್ಯಾಪಾರಿ ಮಳಿಗೆ ಹೊಂದಿದ್ದನು. 7 ಅಕ್ಟೋಬರ್ 1939 ರಂದು ಹೆರಾಲ್ಡ್ ಜನನವಾಯಿತು. ಎರಡನೇ ಜಾಗತಿಕ ಯುದ್ದದಿಂದ ಹೆರಾಲ್ಡ್ ತಂದೆ ತನ್ನ ವೃತ್ತಿಯಲ್ಲಿ ಭಾರಿ ಏರುಪೇರುಗಳನ್ನು ಕಂಡು 1955ರಲ್ಲಿ ಒಂದು ಸಣ್ಣ ಬಲೂನ್ ಕಾರ್ಖಾನೆ ಪ್ರಾರಂಭಿಸುವಲ್ಲಿ ಯಶಸ್ವಿಯಾದನು. ಹೆರಾಲ್ಡ್ ತನ್ನ ತಂದೆಗೆ ಸಹಾಯಕನಾಗಿ ದುಡಿಯುತ್ತಿದ್ದನು. ಆದಾಂiÀi ಹೇಳಿಕೊಳ್ಳುವಂತಿರಲಿಲ್ಲವಾದರೂ, ಹೆರಾಲ್ಡ್’ನ ವಿದ್ಯಾಭ್ಯಾಸಕ್ಕೆ ಅಗತ್ಯವಾದುದನ್ನು ಒದUಸಲು ಆತನ ತಂದೆ ಶ್ರಮಿಸುತ್ತಿದ್ದನು. ರಸಾಯನಶಾಸ್ತ್ರದ ಅಧ್ಯಯನಕ್ಕಾಗಿ ಷೆಫಿಲ್ಡ್ ವಿಶ್ವವಿದ್ಯಾಲಯ ಸೇರಿದ ಹೆರಾಲ್ಡ್ ರೋಹಿತಶಾಸ್ತ್ರದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಗಳಿಸಿದನು. 1964ರಲ್ಲಿ ಬಂದ ಆಹ್ವಾನ ಒಪ್ಪಿ ಕೆನಡಾದ ಒಟ್ಟೋವಾದಲ್ಲಿನ ನ್ಯಾಷನಲ್ ರಿಸರ್ಚ್ ಕೌನ್ಸಿಲ್‍ಗೆ ಹೋದನು. ಇಲ್ಲಿ ಗೆರ್ಹಾಡ್ ಹೆಜ್‍ಬರ್ಗ್ ಜಗತ್ಪ್ರಸಿದ್ದವಾದ ರೋಹಿತಶಾಸ್ತ್ರ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದ್ದನು. ಇಲ್ಲಿ ಮಿಂಚು ದ್ಯುತಿಕ್ರಿಯೆ ಹಾಗೂ ರೋಹಿತಗಳನ್ನು ಕುರಿತಾಗಿ ಹಲವಾರು ಅಧ್ಯಯನ ನಡೆಸಿದನು. 1966ರಲ್ಲಿ ಅಸಂಸಂಗಳಿಗೆ ತೆರಳಿ ಬೆಲ್ ಪ್ರಯೋಗಾಲಯದಲ್ಲಿ ಎಲೆಕ್ಟಾನ್‍ಗಳ ಸ್ಥಾನಾಂತರತೆ ಕುರಿತಾಗಿ ಅಧ್ಯಯನ ಸಾಗಿಸಿದನು. 1970ರಲ್ಲಿ ಸೂಕ್ಷ್ಮ ತರಂಗ ರೋಹಿತಶಾಸ್ತ್ರದಲ್ಲಿ ಶ್ರಮಿಸಿ ಹೀಲಿಯಂ-ನಿಯಾನ್ ಮತ್ತು ಆರ್ಗಾನ್-ಅಯಾನ್ ಲೇಸರ್ ಯಂತ್ರ ನಿರ್ಮಿಸಿ, ದ್ರವಗಳಲ್ಲಿ ಅಣುಗಳ ಅಂತಕ್ರಿಯೆಯನ್ನು ಅಭ್ಯಸಿಸಿ, ಸೈದ್ದಾಂತಿಕವಾಗಿ ಲೆಕ್ಕಾಚಾರ ಹಾಕಿದನು. ಮುಂದೆ ಇದೇ ಯಂತ್ರವನ್ನು ಸುಧಾರಿಸಿ ನಡೆಸಿದ ವಿಸ್ತೃತ ಪ್ರಯತ್ನಗಳಿಂದಾಗಿ ಊಅ5ಓ ಸಂಯುಕ್ತ ಸರಣಿಗಳ ಅಣುಗಳನ್ನು ಅರಿಯಲು ಸಾಧ್ಯವಾಯಿತು. ಇದರ ¥sóÀಲವಾಗಿ 1985ರಲ್ಲಿ ಇಂಗಾಲದ ಹೊಸ ರೂಪ ಅ5 ಅನಾವರಣಗೊಂಡಿತು. ಈ ಸಾಧನೆಗಾಗಿ ಹೆರಾಲ್ಡ್ 1996ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. 1995ರ ನಂತರ ಬಿಬಿಸಿ ವಾಹಿನಿಗೆ ಕಾರ್ಯಕ್ರಮ ತಯಾರಿಸುವ ಪ್ಯಾಟ್ರಿಕ್ ರೀಮ್ಸ್‍ನೊಂದಿಗೆ ವೆಗಾ ಸೈನ್ಸ್ ಟ್ರಸ್ಟ್ ಸ್ಥಾಪಿಸಿದನು. ಈ ಸಂಸ್ಥೆ ಈಗ ಅತ್ಯುತ್ತಮ ವೈಜ್ಞಾನಿಕ ಸಾಕ್ಷ್ಯ ಚಿತ್ರೀ ಹಾಗೂ ಸಿನಿಮಾಗಳನ್ನು ನಿರ್ಮಿಸುತ್ತದೆ. ನೊಬೆಲ್ ಪ್ರಶಸ್ತಿ ಸಮಿತಿ ತಮ್ಮೊಂದಿಗೆ ಶ್ರಮಿಸಿದ ಹಲವಾರು ಜನರನ್ನು ಸಾಧನೆಯನ್ನು ಪರಿಗಣಿಸಿಲ್ಲವೆಂದೂ, ಇದುಬೇರೆ ಶಾಖೆಗಳಲ್ಲೂ ನಿಜವೆಚಿದೂ ಅದು ಬದಲಾಗಬೇಕೆಂದು ಹೆರಾಲ್ಡ್ ಅಭಿಪ್ರಾಯ ಹೊಂದಿದ್ದಾನೆ. ವಿದ್ಯಾರ್ಥಿಗಳಿಗೆ, ಜನ ಸಾಮಾನ್ಯರಿಗೆ ವಿಜ್ಞಾನವನ್ನು ತಲುಪಿಸುವಲ್ಲಿ ತನಗೆ ಅಪಾರ ಆತ್ಮ ತೃಪ್ತಿ ದಕ್ಕಿದೆಯೆಂದು ಹೆರಾಲ್ಡ್ ಹೇಳಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 9/23/2019