ಹಿಡೆಕಿ, ಶಿರಾಕಾವ (1936--)
ಜಪಾನ್-ರಸಾಯನಶಾಸ್ತ್ರ-ಪಾಲಿಟಿಸಿಟಿಲೇನ್‍ನ ವಾಹಕತೆ ಕಾರಣವಾದ ರಾಸಾಯನಿಕ ಕ್ರಿಯಾಶೀಲತೆ ವಿವರಿಸಿದಾತ.
ಹಿಡೆಕಿ 1936ರಲ್ಲಿ ಟೋಕಿಯೋದಲ್ಲಿ ಜನಿಸಿದನು. ಹಿಡೆಕಿ ಜಪಾನ್‍ನ ಹೊನ್ಷು ದ್ವೀಪದ ತಕಾಮಾಮ ಎಂಬ ಸಣ್ಣ ಪಟ್ಟಣದಲ್ಲಿ ಬೆಳೆದನು. ಇದು ಬೆಟ್ಟ, ಗುಡ್ಡ, ನದಿಗಳಿಂದ ಆವೃತ್ತನಾದ ಸುಂದರ ಪ್ರದೇಶವೆಂದು ಖ್ಯಾತಿವೆತ್ತಿದೆ. ಬಾಲಕನಾಗಿರುವಾಗ ಸಸ್ಯ, ಕೀಟಗಳ ಸಂಗ್ರಹಣೆ ಹಿಡೆಕಿಯ ನೆಚ್ಚಿನ ಹವ್ಯಾಸವಾಗಿದ್ದಿತು. 1957ರಲಿ ಟೋಕಿಯೋ ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿ ಸೇರಿದ ಹಿಡೆಕಿ 1966ರಲ್ಲಿ ಪಾಲಿಮರ್ ತಂತ್ರಜ್ಞಾನದಲ್ಲಿ ಡಾಕ್ಟರೇಟ್ ಗಳಿಸಿದನು. ಪಾಲಿಅಸಿಟಿಲಿನ್‍ನ ಬಹ್ವಂಗೀಕರಣದ ಕ್ರಿಯಾ ವಿನ್ಯಾಸವನ್ನು ಝೀಗ್ಲರ್-ನಟ್ಟ ಕ್ರಿಯಾಪ್ರೇರಕ (Catalyst) ಬಳಸಿ ಅರಿಯಲು ಹಿಡೆಕಿ ಯತ್ನಿಸಿದನು. ಆದರೆ ಈ ಪ್ರಯೋಗ ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ವಿಫಲವಾಯಿತು. ಪಾಲಿಅಸಿಟಿಲೇನ್‍ನ್ನು ಬೇರೆ ವಿಜ್ಞಾನಿಗಳು ಕಪ್ಪು ಪುಡಿಯ ರೂಪದಲ್ಲಿ ಪಡೆದಿದ್ದರು. ಆದರೆ ಹಿಡೆಕಿ ಪಡೆದಿದ್ದ ಪಾಲಿ ಅಸಿಟಿಲೇನ್ ವರ್ಣ ತಂತುಗಳಿಂದ ಕೂಡಿದ್ದಿತು. ಇದರ ಕಾರಣ ಹುಡುಕಲು ಹಿಡೆಕಿ ಯತ್ನಿಸಿದನು. ಅಗತ್ಯಕ್ಕಿಂತಲೂ ಸಹಸ್ರಪಟ್ಟು ಅಧಿಕ ಕ್ರಿಯಾಪ್ರೇರಕ ಬಳಸಿದ್ದೇ ಇದಕ್ಕೆ ಕಾರಣವೆಂದು ಇದರಿಂದ ಕ್ರಿಯಾವೇಗ ತೀವ್ರಗೊಂಡು, ರಾಸಾಯನಿಕ ಕ್ರಿಯೆಯಲ್ಲಿ ಬಿಡುಗಡೆಯಾಗುವ ಅನಿಲಗಳು ಬಹ್ವಂಗೀಕರಣಗೊಂಡಿವೆಯೆಂದು (Polymerisation) ತಿಳಿದು ಬಂದಿತು. ಇದರ ಫಲಿತಾಂಶವಾಗಿ ನಿಷ್ಕಾಸ ಅನಿಲ (Exhaust Gas) ಮಿಂಚುವ ತೆಳು ಪೆÇರೆಯಾಗಿ ಸಾಂದ್ರಗೊಂಡಿತು. ಇದು ಪಾಲಿ ಅಸಿಟಿಲಿನ್‍ನ್ನು ತೆಳುಪೆÇರೆಯಂತೆ ಪಡೆಯುವ ಹೊಸ ಸಾಧ್ಯತೆಯನ್ನು ತಂದಿತ್ತಿತು. ಅಸಂಸಂದಲ್ಲಿ ಅ್ಯಲನ್ ಮೆಕ್ ಡಿಯಾಮರ್ಡ್ ಸಹ ಇಂತಹುದೇ ವಿದ್ಯಾಮಾನ ವೀಕ್ಷಿಸಿದ್ದನು. ಹಿಡೆಕಿಯ ಈ ಪ್ರಯೋಗ ವೀಕ್ಷಿಸಿದ ಆ್ಯಲನ್ ಹಿಡೆಕಿಯನ್ನು ಅಸಂಸಂಗಳ ಪೆನ್ಸೆಲ್ವೇನಿಯಾ ವಿಶ್ವವಿದ್ಯಾಲಯಕ್ಕೆ ಬರುವಂತೆ 1976ರಲ್ಲಿ ಆಹ್ವಾನಿಸಿದರು. ಇಲ್ಲಿ ಹೀಗೆರ್ ಮಾರ್ಗದರ್ಶನದಲ್ಲಿ ಹಿಡೆಕಿ ರಾಸಾಯನಿಕ ಸಕಲುಷಿತಗೊಳಿಕೆಯಿಂದ (Doping) ವೈದ್ಯುತ್ ವಾಹಕತೆ ಪಾಲಿಅಸಿಟಿಲಿನ್‍ನಲ್ಲಿ ಕೋಟ್ಯಾಂತರ ಪಟ್ಟು ಅಧಿಕವಾಗುವುದನ್ನು ಗುರುತಿಸಿದರು. ಹಿಡೆಕಿಯ ಮುಂದುವರೆದ ಸಂಶೋಧನೆಗಳಿಂದ ಪಾಲಿಟಿಸಿಟಿಲೇನ್‍ನ ವಾಹಕತೆ ಕಾರಣವಾದ ರಾಸಾಯನಿಕ ಕ್ರಿಯಾಶೀಲತೆ ಸುಸ್ಪಷ್ಟಗೊಂಡಿತು. ಈ ಸಂಶೋಧನೆಗಳಿಗಾಗಿ ಹಿಡೆಕಿ 2000ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 11/13/2019