ರುಡಾಲ್ಫ್ ,ಎ. ಮಾರ್ಕಸ್ (1933--) ೧೯೯೨
ಕೆನಡಾ-ರಸಾಯನಶಾಸ್ತ್ರ- ರಾಸಾಯನಿಕ ಪ್ರತಿಕ್ರಿಯಾ ಗತಿಶೀಲಶಾಸ್ತ್ರದ (Reaction Dynamics) ಮುಂಚೂಣಿಗ
ಮಾರ್ಕಸ್ ಕುಟುಂಬ ನಾರ್ವೆ ಮೂಲದ್ದಾಗಿದ್ದು ಕೆನಡಾದಲ್ಲಿ ವಲಸೆ ಬಂದು ನೆಲೆಸಿದ್ದಿತು. ಈತನ ತಂದೆ ತಾಯಿಗಳು ಹೆಚ್ಚಿನ ಶಿಕ್ಷಣ ಪಡೆದವರಾಗಿರಲಿಲ್ಲ. ಆದರೆ ಮಾರ್ಕಸ್ ಸೋದರ ಮಾವ ಹಾಗೂ ತಂದೆಯ ಸೋದರರು ಸ್ವೀಡನ್‍ನಲ್ಲಿದ್ದು ಅದರಲ್ಲೊಬ್ಬ 1915ರಲ್ಲಿ ಉಪ್ಸಾಲ ವಿಶ್ವವಿದ್ಯಾಲಯದ ಗೌರವಕ್ಕೆ ಪಾತ್ರವಾಗಿದ್ದನು. ಈತನಿಗೆ ಹದಿಮೂರು ಭಾಷೆಗಳಲ್ಲಿ ಪ್ರಭುತ್ವವಿದ್ದಿತು. ಇದೇ ಪ್ರೇರಣೆಯಿಂದ ಮಾರ್ಕಸ್ ಮುಂದೆ 9 ಭಾಷೆಗಳನ್ನು ಕಲಿತನು ಮೆಕ್‍ಗಿಲ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದ ಅಧ್ಯಯನಕ್ಕೆ ಮಾರ್ಕಸ್ ಸೇರಿದನು. ಇಲ್ಲಿ ರಾಸಾಯನಿಕ ಕ್ರಿಯೆಗಳ ವೇಗದಲ್ಲಿನ ಸಂಶೋಧನೆಗಳಿಗೆ ಮುಂದೆ ನೊಬೆಲ್ ಪ್ರಶಸ್ತಿ ಗಳಿಸಿದ ಸಿರಿಲ್ ಹಿನ್ಷೆಲ್‍ವುಡ್, ಉಪಾಧ್ಯಾಯನಾಗಿದ್ದನು. 1946ರಲ್ಲಿ ಡಾಕ್ಟರೇಟ್ ಗಳಿಸಿದ ಮಾರ್ಕಸ್ ಓಟ್ಟಾವದಲ್ಲಿರುವ ನ್ಯಾಷನಲ್ ರಿಸರ್ಚ್ ಕೌನ್ಸಿಲ್ ಸೇರಿದನು. 1948ರಲ್ಲಿ ನಾರ್ಥ್‍ಕೆರೋಲಿನ್ ವಿಶ್ವ ವಿದ್ಯಾಲಯದಲ್ಲಿ ಆಸ್ಟರ್ ಕೆ ರೈಸೆನ್ ಕೈ ಕೆಳಗೆ ಸೈದ್ಧಾಂತಿಕ ಭೌತಶಾಸ್ತ್ರದ ವಿಭಾಗಕ್ಕೆ ರುಡಾಲ್ಫ್ ಸೇರಿದನು. 1920ರಲ್ಲಿ ರೈಸ್ ರ್ಯಾಮ್‍ಸ್ಪರ್ಜರ್ ಕ್ಯಾಸೆಲ್ ಅರ್.ಅರ್.ಅರ್.ಸಿದ್ಧಾಂತವನ್ನು 1920ರಲ್ಲಿ ಮಂಡಿಸಿ ರಾಸಾಯನಿಕ ಕ್ರಿಯೆಗಳ ಸ್ಥಿತ್ಯಂತರವನ್ನು ವಿವರಿಸಿದ್ದರು. ಇದಕ್ಕೆ ಸಂಖ್ಯಾ ಕಲನಶಾಸ್ತ್ರದ ತತ್ತ್ವಗಳನ್ನು ಅಳವಡಿಸಿದ ಮಾರ್ಕಸ್ ತನ್ನ ಹೆಸರು ಸೇರಿದಂತಹ ಅರ್.ಅರ್.ಕೆ.ಎಮ್ ಸಿದ್ಧಾಂತವನ್ನು ನೀಡಿದನು. 1951ರಲ್ಲಿ ಈ ಸಿದ್ಧಾಂತ ಪ್ರಕಟಗೊಂಡಿತು. ಇದೇ ವರ್ಷ ಬ್ರೂಕ್‍ಲಿನ್ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್ ಸೇರಿದ ಮಾರ್ಕಸ್ ಎಲೆಕ್ಟ್ರಾನ್ ವರ್ಗಾವಣೆಯನ್ನು ಕುರಿತಾಗಿ ಸಂಶೋಧನೆ ನಡೆಸಿದನು. ರಾಸಾಯನಿಕ ಪ್ರತಿಕ್ರಿಯಾ ಗತಿಶೀಲಶಾಸ್ತ್ರದಲ್ಲಿ ಮಾರ್ಕಸ್ ತೊಡಗಿಸಿಕೊಂಡನು. ಇದರಲ್ಲಿನ ಗಮನಾರ್ಹ ಸಾಧನೆಗಳಿಗಾಗಿ 1992ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 3/2/2019