ರಿಚರ್ಡ್, ಸ್ಮಾಲಿ (1943--) ೧೯೯೬
ಅಸಂಸಂ-ರಸಾಯನಶಾಸ್ತ್ರಜ್ಞ-ಇಂಗಾಲದ ಹೊಸ ಬಹುರೂಪಿಯನ್ನು (Allotropy) ಅನಾವರಣಗೊಳಿಸಿದಾತ.
1943 ಜೂನ್ 6 ರಂದು ರಿಚರ್ಡ್ ಜನಿಸಿದನು. 1965ರಲ್ಲಿ ಮಿಷಿಗನ್ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದ ಪದವಿ ಗಳಿಸಿ, 1973ರಲ್ಲಿ ಪ್ರಿನ್ಸ್’ಟನ್’ನಿಂದ ಡಾಕ್ಟರೇಟ್ ಸಂಪಾದಿಸಿದನು. 1976ರಿಂದ ರೈಸ್ ವಿಶ್ವವಿದ್ಯಾಲಯ ಸೇರಿ, 1990ರಲ್ಲಿ ಅಲ್ಲಿ ಪ್ರಾಧ್ಯಾಪಕನಾದನು. 1966ರಲ್ಲಿ ರೈಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ನ್ಯಾನೋಸ್ಕೇಲ್ ಸೈನ್ಸ್ ಅಂಡ್ ಟೆಕ್ನಾಲಜಿಯ ನಿರ್ದೇಶಕನಾದನು. ಈ ಸಂಸ್ಥೆಯಲ್ಲಿ ಅಣುಗಾತ್ರದ ಸೂಕ್ಷ್ಮಾತಿಸೂಕ್ಷ್ಮವಾದ ನ್ಯಾನೋ ನಳಿಕೆಗಳ ಮೇಲೆ ಸಂಶೋಧನೆ ನಡೆಸಿದನು. 1992ರಲ್ಲಿ ರಿಚರ್ಡ್ ಇ.ಓ ಲಾರೆನ್ಸ್ ಪ್ರಶಸ್ತಿ ಗಳಿಸಿದನು. ಕಾಲ್ಚೆಂಡಿನ ಆಕಾರದಲ್ಲಿ ಪರಮಾಣುಗಳು ಜೋಡಣೆಗೊಂಡಿರುವ ಇಂಗಾಲದ ಹೊಸ ಬಹುರೂಪಿಯನ್ನು ಅನಾವರಣಗೊಳಿಸಿದ್ದಕ್ಕಾಗಿ ರಿಚರ್ಡ್, ರಾಬರ್ಟ್ ಎಫ್ಕಾರ್ಲ್ ಜೂ, ಸರ್ ಹೆರಾಲ್ಡ್ ಕ್ರೋಟೋರೊಂದಿಗೆ, 1996ರ ನೊಬೆಲ್ ಪ್ರಶಸ್ತಿ ಹಂಚಿಕೊಂಡನು. ಈಗ ಇಂಗಾಲದ ಈ ಹೊಸ ಬಹುರೂಪಿಯನ್ನು ಬಕ್‍ಮಿನ್‍ಸ್ಟರ್ ಪುಲ್ಲೆರೆನೆ ಎಂದು ಹೆಸರಿಸಿ,ಚಿಕ್ಕದಾಗಿ ಬಕಿಬಾಲ್ ಎಂದು ಕರೆಯಲಾಗುತ್ತಿದೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/27/2019