অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಿಚರ್ಡ್ ಆರ್.ಎರ್ನ್‍ಸ್ಟ್

ರಿಚರ್ಡ್ ಆರ್.ಎರ್ನ್‍ಸ್ಟ್

ರಿಚರ್ಡ್ ಆರ್.ಎರ್ನ್‍ಸ್ಟ್ (1933--) ೧೯೯೧

ಸ್ವಿಟ್ಸಲ್ರ್ಯಾಂಡ್-ರಸಾಯನಶಾಸ್ತ್ರ-ಬೈಜಿಕ ಕಾಂತೀಯ ಅನುರಣನದಲ್ಲಿ ಫೂರೆ ರೂಪಾಂತರ ವಿಧಾನಗಳನ್ನು ( Fourier Transformation Methods) ಪರಿಚಯಿಸಿದಾತ.

ರಿಚರ್ಡ್‍ನ ತಂದೆ ವಿಂಟರ್‍ಥರ್ ಪಟ್ಟಣದಲ್ಲಿ ವಾಸ್ತುಶಿಲ್ಪಿಯಾಗಿದ್ದನು.  ಈ ಪಟ್ಟಣ ಕೈಗಾರಿಕೆ ಹಾಗೂ ಕಲೆಗಳ ಅಪೂರ್ವ ಸಂಗಮವಾಗಿದ್ದಿತು.  ಇಲ್ಲಿನ ಸಂಗೀತ ಗೋಷ್ಟಿಗಳ ಕೀರ್ತಿ ಯುರೋಪಿನ ಎಲ್ಲೆ ಮೀರಿ ಹಬ್ಬಿದ್ದಿತು. ಇಲ್ಲಿ ತಯಾರಾಗುತ್ತಿದ್ದ ಡೀಸೆಲ್ ಮೋಟಾರ್ ಹಾಗೂ ರೈಲ್ವೇ ಇಂಜಿನ್‍ಗಳಿಗೆ ಉತ್ತಮ ಮಾರುಕಟ್ಟೆಯಿದ್ದಿತು.  ಈ ಪರಿಸರದಿಂದಾಗಿ ರಿಚರ್ಡ್ ಕಲಾಪ್ರೇಮಿಯೂ , ತಾಂತ್ರಿಕ ಆಸಕ್ತನೂ ಆಗಿ ಬೆಳೆದನು.  ರಿಚರ್ಡ್‍ನ ಚಿಕ್ಕಪ್ಪ ಲೋಹಶಾಸ್ತ್ರದಲ್ಲಿ ಇಂಜಿನಿಯರ್ ಆಗಿದ್ದನು.  ಈತ ಉಳಿಸಿದ್ದ ಕೆಲ ರಾಸಾಯನಿಕಗಳು ರಿಚರ್ಡ್‍ಗೆ ದಕ್ಕಿ, ಅದರಲ್ಲಿ ಆತನಿಗೆ ಅಪಾರ ಆಸಕ್ತಿ ಮೂಡಿತು.  ಇವುಗಳನ್ನು ಬಳಸಿ ನಡೆಸಿದ ಹಲವು ಪ್ರಯೋಗಗಳಿಂದ ಹಲವಾರು ಬಾರಿ ಸ್ಪೋಟಗಳು ಸಂಭವಿಸಿ ವಿಷಾನಿಲಗಳು ತುಂಬಿದವು.  ಇದರಿಂದ ರಿಚರ್ಡ್‍ನ ತಂದೆ ಈತನ ಪ್ರಯೋಗಗಳನ್ನು ನಿಗ್ರಹಿಸಿದನು.  ಹಲವಾರು ಪುಸ್ತಕಗಳನ್ನು ಸಂಗ್ರಹಿಸಿ, ರಸಾಯನಶಾಸ್ತ್ರವನ್ನು ಆಳವಾಗಿ ಅರಿಯಲು ಯತ್ನಿಸಿದನು.  ಪ್ರೌಢ ಶಿಕ್ಷಣ ಮುಗಿಸಿದ ಮೇಲೆ ರಸಾಯನಶಾಸ್ತ್ರದ ಕಲಿಕೆಗಾಗಿ ಝೂರಿಕ್‍ನಲ್ಲಿರುವ ಸ್ವಿಸ್ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದನು.  ಆ ಕಾಲಕ್ಕೆ ಇಲ್ಲಿ ರಸಾಯನ ಶಾಸ್ತ್ರದ ಸೂತ್ರಗಳನ್ನು, ಪ್ರತಿಕ್ರಿಯೆಯ ಸಮೀಕರಣಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಅಪಾರ ಆದ್ಯತೆ ನೀಡಲಾಗುತ್ತಿತ್ತು.  ಇದು ರಿಚರ್ಡ್‍ಗೆ ಭಾರಿ ನಿರಾಸೆಯುಂಟುಮಾಡಿತು.  ಇದರ ಪರಿಹಾರಕ್ಕಾಗಿ ರಿಚರ್ಡ್ ತಾನೇ ಸ್ವಂತ ,ಕೈಗೆಟುಕುವ ಪುಸ್ತಕಗಳನ್ನು ಓದತೊಡಗಿದನು. ಇದರಿಂದಾಗಿ ಕ್ವಾಂಟಂ ಬಲವಿಜ್ಞಾನ ರೋಹಿತಶಾಸ್ತ್ರ, ಔಷ್ಣೀಯ ಗತಿಶಾಸ್ತ್ರದಲ್ಲಿನ ಮೂಲ ತತ್ತ್ವಗಳು ಮನದಟ್ಟಾದವು.  ಗುಂಟ್ ಹಾರ್ಡ್‍ನ ಮಾರ್ಗದರ್ಶನದಲ್ಲಿ ಡಾಕ್ಟರೇಟ್‍ಗಾಗಿ ಪ್ರಯೋಗಗಳನ್ನು ರಿಚರ್ಡ್ ಪ್ರಾರಂಭಿಸಿದನು. ಈ ಕಾಲದಲ್ಲಿ ಬೈಜಿಕ ಕಾಂತೀಯ ಅನುರಣನ ವಿಧಾನಗಳು ಶೈಶಾವಸ್ಥೆಯಲ್ಲಿದ್ದವು.  ಇದಕ್ಕೆ ಬೇಕಾದ ನಿಖರವಾದ ನಿಷ್ಕಷ್ಟ ರೋಹಿತದರ್ಶಕ, ಹಾಗೂ ಸಹಸಾಧನಗಳನ್ನು                ನಿರ್ಮಿಸಲು ರಿಚರ್ಡ್ ಶ್ರಮಿಸಿದನು.  ಇದರೊಂದಿಗೆ ಪ್ರಯೋಗಗಳಲ್ಲಿ ದೊರೆತ ಲಿತಾಂಶಗಳಿಗೆ ಸೈದ್ಧಾಂತಿಕ ವಿವರಣೆ ನೀಡುವ ಅನಿವಾರ್ಯತೆಯೂ ಬಂದೊದಗಿತು.  ಈ ದಿಶೆಯಲ್ಲಿ ರಿಚರ್ಡ್‍ಗೆ ಹ್ಯಾನ್ಸ್ ಪ್ರೈಮಾಸ್‍ನಂತಹ ಪ್ರತಿಭಾವಂತ ವಿಜ್ಞಾನಿಯ ನೆರವು ದಕ್ಕಿತು.  ರಿಚರ್ಡ್ ಹಾಗೂ ಹ್ಯಾನ್ಸ್‍ನಿಂದ ನಿರ್ದೇಶಿಸಲ್ಪಟ್ಟ ರೀತಿಯಲ್ಲಿ ಬೈಜಿಕ ಕಾಂತೀಯ ಅನುರಣನ ವಿಧಾನಕ್ಕೆ ಬೇಕಾದ ರೋಹಿತ ದರ್ಶಕಗಳನ್ನು ಸ್ವಿಟ್ಸಲ್ರ್ಯಾಂಡಿನ ಟ್ರಬ್, ಟೌನೆಕ್ ಕಂಪನಿ ತಯಾರಿಸಿ, ಮಾರತೊಡಗಿತು. ರಿಚರ್ಡ್‍ನ ಬಹುತೇಕ ಪರಿಶ್ರಮ ಅತ್ಯಧಿಕ ಸಂವೇದನೆ ಹೊಂದಿದ ರೇಡಿಯೋ ಆವರ್ತನೆಯ ಪೂರ್ವವರ್ಧಕಗಳನ್ನು. (Radio Frequency PreAmplifiess) ತಯಾರಿಸುವಲ್ಲಿ ವಿನಿಯೋಗವಾಯಿತು. 1962ರಲ್ಲಿ ಡಾಕ್ಟರೇಟ್ ಗಳಿಸಿದ ರಿಚರ್ಡ್, ಶೈಕ್ಷಣಿಕ ವಲಯ ತೊರೆದು ಕೈಗಾರಿಕಾ ವಲಯಕ್ಕೆ ಹೋಗಲು ಬಯಸಿದನು.  ಇದಕ್ಕಾಗಿ ಅಸಂಸಂದಲ್ಲಿನ ಪಾಲೋ ಆಲ್ಟೋದಲ್ಲಿರುವ ವೇರಿಯನ್ ಅಸೋಸಿಯೇಟ್ಸ್ ಕಂಪನಿ ಸೇರಿದನು.  ಇಲ್ಲಿ ಹಲವಾರು ಖ್ಯಾತ ವಿಜ್ಞಾನಿಗಳು ನಿರ್ದಿಷ್ಟ ವೈಜ್ಞಾನಿಕ ಸಂಶೋಧನೆಯನ್ನು ವಾಣಿಜ್ಯೀಕರಣಗೊಳಿಸುವ ಗುರಿಯಿರಿಸಿಕೊಂಡು ಕೆಲಸ ಮಾಡುತ್ತಿದ್ದರು,. ಇಲ್ಲಿ ಲೆಸ್ಟನ್ ಎ ಅ್ಯಂಡರ್ಸ್‍ನ್‍ನ ನೇತೃತ್ವದಲ್ಲಿ ರಿಚರ್ಡ್ ಹಾಗೂ ಸಂಗಡಿಗರು ಹಲವಾರು ಆವರ್ತನೆಗಳನ್ನು ಸಮಾಂತರದಲ್ಲಿ ಪತ್ತೆ ಹಚ್ಚಿ ಓದಿ ದಾಖಲಿಸಬಲ್ಲ ಬೈಜಿಕ ಕಾಂತೀಯ ಅನುರಣನ (NMR-Nuclear Magnetic Resonance) ಸಾಧನವನ್ನು ¥sóÀÇರೇ ರೂಪಾಂತರ ವಿಧಾನದಲ್ಲಿ ನಿರ್ಮಿಸಲು ಯತ್ನಿಸಿದರು.  ಇವರ ಶ್ರಮಕ್ಕೆ ಪ್ರತಿಫಲ ದಕ್ಕಿತಾದರೂ ವಿಜ್ಞಾನಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು ¥sóÀÇರೇ ವಿಧಾನದಲ್ಲಿ ನಿರ್ಮಿಸಿದ ಬೈಜಿಕ ಕಾಂತೀಯ ಅನುರಣನ ತಂತ್ರವನ್ನು ವಿವರಿಸಿ ಇವರು ಬರೆದ ಲೇಖನ ಎರಡು ಬಾರಿ ಜರ್ನಲ್ ಆಫ್ಕೆಮಿಕಲ್ ಫಿûಸಿಕ್ಸ್‍ನಿಂದ ತಿರಸ್ಕೃತಗೊಂಡು ಅಂತಿಮವಾಗಿ ರಿವ್ಯೂ ಆಫ್ಕೆಮಿಕಲ್ ಇನ್ಸ್ಟ್ರುಮೆಂಟ್ ಪತ್ರಿಕೆಯಲ್ಲಿ ಪ್ರಕಟಗೊಂಡಿತು.  ರಿಚರ್ಡ್ ಹಾಗೂ ಸಂಗಡಿಗರ ಹೊಸ ಸಾಧನವನ್ನು ಪೂರ್ಣ ಪ್ರಮಾಣದಲ್ಲಿ ರೋಹಿತದರ್ಶಕದೊಂದಿಗೆ ತಯಾರಿಸಲು ವೇರಿಯನ್ ಕಂಪನಿ ನಿರಾಕರಿಸಿತು. ಇದಾದ ಏಳು ವರ್ಷಗಳ ನಂತರ ವೇರಿಯನ್ ಕಂಪನಿಯ ಪ್ರತಿಸ್ಪರ್ಧಿಯಾದ ಬ್ರುಕಲ್ ಅನ್ಯಾಲಿಟಿಷ ಮೆಸ್ ಟೆಕ್ನಿಕ್ ಕಂಪನಿ ಟೋನಿ ಕೆಲ್ಲರ್ ಮುಂದಾಳತ್ವದಲ್ಲಿ ಇಂತಹುದೇ ಸಾಧನ ತಯಾರಿಸಿ ಮಾರಿತಲ್ಲದೆ ವೇರಿಯನ್ ಕಂಪನಿಗಿಂತಲೂ ಮೊದಲೇ ಅದು ಈ ತಂತ್ರಜ್ಞಾನಕ್ಕೆ ಏಕಸ್ವಾಮ್ಯ ಹೊಂದಿರುವುದು ನಂತರ ಬೆಳಕಿಗೆ ಬಂದಿತು. 1968ರಲ್ಲಿ ಸ್ವಿಟ್ಸಲ್ರ್ಯಾಂಡಿಗೆ ಮರಳಿದ ರಿಚರ್ಡ್ ಬೈಜಿಕ ಕಾಂತೀಯ ಅನುರಣನ ತಂತ್ರಗಳಲಿ ಸುಧಾರಣೆಗೆ ತರಲು ಯತ್ನಿಸಿದನು.  ಪೌಲ್ ಲೌಟೆರ್‍ಬರ್  ದ್ವಿ ಆಯಾಮದ ರೋಹಿತದರ್ಶಕದ ತತ್ತ್ವಗಳನ್ನು ಎನ್‍ಎಂಆರ್ ಬಿಂಬಗಳಿಗೂ ಅನ್ವಯಿಸಬಹುದೆಂದು ಸೂಚಿಸಿದ್ದನು.  ಈ ಮಾರ್ಗದಲ್ಲಿನ ಮೊದಲ ಪ್ರಯೋಗಗಳನ್ನು ರಿಚರ್ಡ್, ಡೈಟಿಕ್ ವೆಲ್ಟ್ ಹಾಗೂ ಅನಿಲ್ ಕುಮಾರ್ ನಡೆಸಿದರು.  ಮುಂದೆ ಇದು ಹಲವು ಅಯಾಮದ ರೋಹಿತಶಾಸ್ತ್ರಕ್ಕೆ ಅಡಿಗಲ್ಲಾಯಿತು.  ಜೀವ ರಸಾಯನಶಾಸ್ತ್ರದಲ್ಲಿ ಅಣ್ವಯಿಕ ರಾಚನಿಕ ಸ್ವರೂಪ ಅರಿಯಲು ನೆರವಾಯಿತು.  ಬೈಜಿಕ ಕಾಂತೀಯ ಅನುರಣನದಲ್ಲಿ ಫೂರೆ ರೂಪಾಂತರ ವಿಧಾನಗಳನ್ನು ಪರಿಚಯಿಸಿದುದ್ದಕ್ಕಾಗಿ ರಿಚರ್ಡ್1991ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 2/27/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate