ಮಾರಿಯೋ ,ಮೊಲಿನಾ –(1943--) ೧೯೯೫
ಮೆಕ್ಸಿಕೋ-ರಾಸಾಯನಿಕ ಇಂಜಿನಿಯರಿಂಗ್-ಓಝೋನ್ ಕ್ಷೀಣವಾಗುತ್ತಿರುವುದನ್ನು ತೋರಿಸಿದಾತ.
ಮಾರಿಯೋ ತಂದೆ ವಕೀಲನಾಗಿದ್ದು ಮೆಕ್ಸಿಕೋದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಬೋಧಕನಾಗಿದ್ದನು. ಮುಂದಿನ ವರ್ಷಗಳಲ್ಲಿ ಈತ ಇಥಿಯೋಪಿಯಾ, ಆಸ್ಟ್ರೇಲಿಯಾ ಹಾಗೂಫಿಲಿಫೈನ್ಸ್’ಗಳಿಗೆ ರಾಯಭಾರಿಯಾಗಿದ್ದನು. 19 ಮಾರ್ಚ್ 1943ರಲ್ಲಿ ಮಾರಿಯೋ ಜನನವಾಂುತು. ಬಾಲಕನಾಗಿರುವಾಗ ಸೂಕ್ಷ್ಮದರ್ಶಕದ ಮೂಲಕ ಅಮಿಬಾ, ಪ್ಯಾರಾಮೀಸಿಯಂಗಳನ್ನು ನೋಡಿ ಮಾರಿಯೋ ರೋಮಾಂಚಿತನಾಗಿದ್ದನು. 1960ರಲ್ಲಿ ಮೆಕ್ಸಿಕೋ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಸೇರಿದನು. ಪದವಿ ಪೂರ್ಣವಾದ ನಂತರ ಜರ್ಮನಿಯ ಫ್ರೀಬರ್ಗ್ ವಿಶ್ವವಿದ್ಯಾಲಯದಲ್ಲಿ ಬಹ್ವಂಗೀಕರಣದ (Polymerisation) ಗತಿಶೀಲತೆಯ ಅಧ್ಯಯನ ಕೈಗೊಂಡನು. 1968ರಲ್ಲಿ ಅಸಂಸಂ ಬಕ್ರ್ಲೆಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಭೌತ ರಸಾಯನಶಾಸ್ತ್ರದಲ್ಲಿನ ಹೆಚ್ಚಿನ ಶಿಕ್ಷಣಕ್ಕಾಗಿ ನೊಂದಾಯಿಸಿಕೊಂಡನು. ಇಲ್ಲಿ ಜಾರ್ಜ್ ಸಿ. ಪೆಮೆಂಟಲ್ ನೇತೃತ್ವದಲ್ಲಿ ರಾಸಾಯನಿಕ ಲೇಸರ್ ಬಳಸಿ ಅಣ್ವಯಿಕ ಗತಿಶೀಲತೆಯನ್ನು ಕುರಿತಾದ ಸಂಶೋಧಕ ತಂಡದಲ್ಲಿದ್ದನು. ರಾಸಾಯನಿಕ ಹಾಗೂ ದ್ಯುತಿರಾಸಾಯನಿಕ (Photochemistry) ಕ್ರಿಯೆಗಳಲ್ಲಿನ ಚೈತನ್ಯದ ಅಧ್ಯಯನ ನಡೆಸಿ 1972ರಲ್ಲಿ ಡಾಕ್ಟರೇಟ್ ಗಳಿಸಿದನು. ಇದಾದ ನಂತರ ಷೆರ್‍ವುಡ್ ರೌಲ್ಯಾಂಡ್‍ನ ಮಾರ್ಗದರ್ಶನದಲ್ಲಿ ವಿಕಿರಣ ಕ್ರಿಯೆಗಳಲ್ಲಿರುವ ಸ್ಥಿತ್ಯಂತರ ಚೈತನ್ಯದ ಯೋಜನೆಯಲ್ಲಿ ಪಾಲ್ಗೊಂಡನು. ಮಾನವ ಉತ್ಪಾದಿತ ಕ್ಲೋರೋಫ್ಲೂರೋ ಕಾರ್ಬನ್‍ಗಳ ವಾತಾವರಣದಲ್ಲಿ ಹೊಂದುವ ಸ್ಥಿತ್ಯಂತರದ ಅಧ್ಯಯನ ನಡೆಸಿದನು. ಕ್ಲೋರೋಫ್ಲುರೋ ಕಾರ್ಬನ್‍ಗಳು ವಾತಾವರಣದಲ್ಲಿ ಅಲ್ಪ ಔನ್ನತ್ಯದಲ್ಲಿರುವಾಗ ಜಡ ರಾಸಾಯನಿಕಗಳಂತೆ ಇರುತ್ತವೆ. ಆದರೆ ಸಾಕಷ್ಟು ಔನ್ಯತ್ಯಕ್ಕೇರಿದ ನಂತರ ಸೂರ್ಯನ ವಿಕಿರಣಗಳಿಗೆ ತುತ್ತಾಗಿ, ಶ್ಶೆಥಿಲ್ಯ (Decay) ಹೊಂದಿ ಕ್ಲೋರಿನ್ ಪರಮಾಣುಗಳಾಗಿ ಒಡೆಯುತ್ತವೆ. ಈ ಕ್ಲೋರಿನ್ ಪರಮಾಣುಗಳು ವಾತಾವರಣದ ಮೇಲ್ಪದರದಲ್ಲಿರುವ ಓಝೋನ್‍ನೊಂದಿಗೆ ವರ್ತಿಸುತ್ತವೆ. ಇದರ ಪರಿಣಾಮವಾಗಿ ಓಝೋನ್ ಪದರ ಕ್ರಮೇಣ ನಶಿಸತೊಡಗುತ್ತದೆ. ಅಂತರಿಕ್ಷದಿಂದ ಭೂಮಿಗೆ ಬರುವ ವಿಕಿರಣಗಳ ತಡೆಯುವಲ್ಲಿ ಓಝೋನ್ ಬಹು ಮುಖ್ಯ ಪಾತ್ರ ವಹಿಸುತ್ತದೆ. ಓಝೋನ್ ಪದರದ ನಾಶದಿಂದ,ಭೂಮಿಯಲ್ಲಿ ಜೀವಿಗಳ ಭವಿಷ್ಯಕ್ಕೆ ಮಾರಕ ಪರಿಣಾಮಗಳಾಗಲಿವೆಯೆಂದು, 28 ಜೂನ್ 1974ರಲ್ಲಿ ನೇಚರ್ ಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದು ಷೆರ್‍ವುಡ್ ರೌಲ್ಯಾಂಡ್ ಹಾಗೂ ಮಾರಿಯಾ ಜಗತ್ತಿನ ಗಮನ ಸೆಳೆದರು. ಇದು ಇಡೀ ಜಗತ್ತಿನ ಪ್ರಜ್ಞಾವಂತರಲ್ಲಿ ಸಂಚಲನವನ್ನುಂಟು ಮೂಡಿತು. ಓಝೋನ್ ಪದರ ಕುಸಿತಾದ ಕಾರಣ ಗುರುತಿಸಿದ್ದುದಕ್ಕಾಗಿ ಮಾರಿಯಾ1995ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/26/2019