ಮೈಖೆಲ್ , ಸ್ಮಿತ್ (1932--) ೧೯೯೩
ಇಂಗ್ಲೆಂಡ್-ರಸಾಯನಶಾಸ್ತ್ರ-ನ್ಯೂಕ್ಲಿಯಿಕ್ ಆಮ್ಲಗಳ ಸಂಶ್ಲೇಷಣೆಯ ಮುಂಚೂಣಿಗ.
ಮೈಖೇಲ್ 26 ಏಪ್ರಿಲ್ 1932ರಂದು ಇಂಗ್ಲೆಂಡ್‍ನ ಬ್ಲಾಕ್‍ವೂಲ್‍ನಲ್ಲಿ ಜನಿಸಿದನು. ಇಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿದನು. ಲ್ಯಾಟಿನ್ ಭಾಷೆಯಲ್ಲಿ ಹಿಡಿತ ಹೊಂದಿರದ ಕಾರಣ ಮೈಖೇಲ್‍ಗೆ ಆಕ್ಸ್’ಫರ್ಡ್ ಮತ್ತು ಕೇಂಬ್ರಿಜ್‍ನಲ್ಲಿ ಪ್ರವೇಶ ದಕ್ಕಲಿಲ್ಲ. ಆದ್ದರಿಂದ 1950ರಲ್ಲಿ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದ ಪದವಿಗೆ ಸೇರಿದನು. 1953ರ ಪದವಿ ಮುಗಿಸಿ, 1956ರಲ್ಲಿ ಡಾಕ್ಟರೇಟ್ ಗಳಿಸಿದನು. ಮೈಖೇಲ್ ಅಸಂಸಂದಲ್ಲಿ ಹಲವಾರು ಖ್ಯಾತ ರಸಾಯನಶಾಸ್ತ್ರಜ್ಞರನ್ನು , ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸಿ ಹೆಚ್ಚಿನ ಸಂಶೋಧನೆ,ವೃತ್ತಿ ಜೀವನದ ಅವಕಾಶಗಳನ್ನು ಅರಸಿದನು. ಆದರೆ ಇವು ಯಾವುವೂ ಯಶಸ್ವಿಯಾಗಲಿಲ್ಲ. ಆದರೆ ಭಾರತೀಯ ಮೂಲದ, ಕೆನಡಾದ ವ್ಯಾಂಕೋವರ್‍ನಲ್ಲಿದ್ದ ಸಮವಯಸ್ಕನಾಗಿದ್ದ ಹರಗೋವಿಂದ ಖೊರಾನ ಜೈವಿಕ ಪ್ರಾಮುಖ್ಯತೆ ಹೊಂದಿರುವ ಸಾವಯವ ¥sóÁಸ್ಫೇಟ್‍ಗಳ ಮೇಲೆ ತನ್ನೊಂದಿಗೆ ಸಂಶೋಧನೆ ನಡೆಸುವ ಆಹ್ವಾನ ನೀಡಿದನು. ಇಲ್ಲಿ ಹರಗೋವಿಂದ ಖೊರಾನಾ ಸಹಯೋಗದಲ್ಲಿ ಮೈಖೇಲ್ ನ್ಯೂಕ್ಲಿಯೋಸೈಡ್-5 ಟೈಫಾಸ್ಫೆಟ್’ಗಳನ್ನು ಸಂಶ್ಲೇಷಿಸಿದನು. ಇದು ಜೀವ ರಸಾಯನಶಾಸ್ತ್ರದಲ್ಲಿನ ಹಲವಾರು ಸಂಶ್ಲೇಷಣೆಗೆ ಮಾರ್ಗವನ್ನೊದಗಿಸಿತು. 1960ರಲ್ಲಿ ಖುರಾನಾ, ಮೈಖೇಲ್ ಹಾಗೂ ತಂಡ ಅಸಂಸಂದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಕಿಣ್ವ ಸಂಶೋಧನಾ ಕೇಂದ್ರಕ್ಕೆ ತಮ್ಮ ಕಾರ್ಯತಾಣವನ್ನು ಬದಲಾಯಿಸಿತು. ಇಲ್ಲಿ ನ್ಯೂಕ್ಲಿಯಿಕ್ ಆಮ್ಲಗಳ ರಸಾಯನಶಾಸ್ತ್ರದಲ್ಲೇ ಸವಾಲೆಂದು ಪರಿಗಣಿತವಾಗಿದ್ದ ರೈಬೋ-ಓಲಿಗೋ ನ್ಯೂಕ್ಲಿಯೋಟೈಡ್ಸ್‍ನ್ನು ಸಂಶ್ಲೇಷಿಸಿದನು. 1961ರಲ್ಲಿ ಕೆನಡಾಗೆ ಮರಳಿದ ಮೈಖೇಲ್, ಕೆನಡಾದ ವೈದ್ಯಕೀಯ ಸಂಶೋಧನಾ ಸಮಿತಿಯ ಸಂಶೋಧಕ ಸಹಚರನಾದನು. 1981ರಲ್ಲಿ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿದ್ದ ಆರ್ಲ್ ಡೇವಿಯೊಂದಿಗೆ ಮೈಖೇಲ್, ಝೈರೋಸ್ ಎಂಬ ಜೈವಿಕ ತಂತ್ರಜ್ಞಾನದ ಕಂಪನಿ ಸ್ಥಾಪಿಸಿದನು. ಇದಕ್ಕೆ ಸೀಟ್‍ಲ್‍ನಲ್ಲಿರುವ ಸಾಹಸಿ ಬಂಡವಾಳಗಾರರಾದ ಕೇಬಲ್ ಹಾಗೂ ಹಾ¥sóï ಕಂಪನಿಗಳು ಬಂಡವಾಳ ಒದಗಿಸಿದವು. ಡೆನ್ಮಾರ್ಕ್‍ನ ಔಷಧಿ ತಯಾರಿಕಾ ಕಂಪನಿಯ ನೋವೋ ಅಗತ್ಯಕ್ಕನುಗುಣವಾಗಿ ಝೈರೋಸ್ ಕಂಪನಿ ಯೀಸ್ಟ್ ಬಳಸಿ ಮಾನವ ಇನ್ಸುಲಿನ್ ತಯಾರಿಸಿತು. ಈ ಕಂಪನಿ 1988ರಲ್ಲಿ ಝೈರೋಸ್‍ನ್ನು ಖರೀದಿಸಿ ಝೈರೋ ಜೆನೆಟಿಕ್ಸ್ ಎಂಬ ಹೊಸ ಹೆಸರಿನಲ್ಲಿ ವ್ಯವಹಾರ ಮುಂದುವರೆಸಿತು. ನ್ಯೂಕ್ಲಿಯಿಕ್ ಆಮ್ಲಗಳ ಸಂಶ್ಲೇಷಣೆಯಲ್ಲಿನ ಕೊಡುಗೆಗಳಿಗಾಗಿ ಮೈಖೇಲ್ 1993ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/17/2020