ಪೌಲ್, ಡಿ. ಬಾಯರ್ (1918-) ೧೯೯೭
ಅಸಂಸಂ-ರಸಾಯನಶಾಸ್ತ್ರ- ಎಟಿಪಿ ಸಂಶ್ಲೇಷಣೆಯಲ್ಲಿನ ಮಧ್ಯಂತರ ಕಾರ್ಯ ನಿರ್ವಹಿಸುವ ಹೊಸ ಪ್ರೊಟೀನ್ ಅನಾವರಣಗೊಳಿಸಿದಾತ.
ಪೌಲ್ ಉತ್ಸಾಹ ಪ್ರಾಂತ್ಯದ ಪ್ರೋವೋ ಹಳ್ಳಿಯಲ್ಲಿ ಜನಿಸಿದನು. ಈ ಹಳ್ಳಿ ದೂರದರ್ಶನದಂತಹ ಆಧುನಿಕ ಸೌಲಭ್ಯಗಳಿಂದ ಬಹುಕಾಲ ದೂರವಿದ್ದಿತು. ಪೌಲ್ ತನ್ನ ಜೀವನದ ಮೊದಲ 21ವರ್ಷಗಳನ್ನು ಇಲ್ಲಿಯೇ ಕಳೆದನು. ಪೌಲ್‍ನ ಪೂರ್ವಿಕರು ಮೂಲತ: ಜರ್ಮನಿಯವರು ಐದು ಮಕ್ಕಳ ಕುಟುಂಬದಲ್ಲಿ, ಕೊನೆಯನಾದ ಪೌಲ್, ಎಂಟು ವರ್ಷದವನಿರುವಾಗ ತಾಯಿಯನ್ನು ಕಳೆದುಕೊಂಡನು. 1930ರಲ್ಲಿ ಅಸಂಸಂಗಳು ಎದುರಿಸಿದ ಆರ್ಥಿಕ ಸಂಕಷ್ಟದ ಸುಳಿಗಾಳಿಗೆ ಪೌಲ್ ಕುಟುಂಬ ಸಿಲುಕಿತು. ಕ್ರಿಸ್‍ಮಸ್ ಉಡುಗೊರೆಯಾಗಿ ದೊರೆತ ಪುಸ್ತಕವೊಂದರಿಂದ ಪೌಲ್‍ಗೆ ರಸಾಯನಶಾಸ್ತ್ರದಲ್ಲಿ ಆರಂಭಿಕ ಆಸಕ್ತಿಗಳು ಮೂಡಿದವು. ಪ್ರೋವೋದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಪೌಲ್ ಉತ್ತಮ ದರ್ಜೆಂiÀiಲ್ಲಿ ಉತ್ತೀರ್ಣನಾಗಿ ¥sóÁರೆಲ್ ಜೂನಿಯರ್ ಹೈಸ್ಕೂಲ್ ಸೇರಿದನು. ಇಲ್ಲಿ ರೀಸ್ ಬೆಂಚ್ ಎನ್ನುವ ಉಪಾಧ್ಯಾಯನಿಂದ ರಸಾಯನ ಶಾಸ್ತ್ರದಲ್ಲಿ ಮುಂದುವರೆಯುವಂತೆ ಉತ್ತೇಜನ ದಕ್ಕಿತು. ಪೌಲ್, ಬ್ರಿಗ್ ಹ್ಯಾಂ ಯಂಗ್ ಯೂನಿವರ್ಸಿಟಿಯಲ್ಲಿ ಪದವಿ ಅಧ್ಯಯನಕ್ಕೆ ಸೇರಿದನು. ಇಲ್ಲಿ ಜಾನ್‍ವಿಂಗ್, ಜೊ ನಿಖೋಲಾಸ್‍ರವರ ಮಾರ್ಗದರ್ಶನ ದೊರೆತು, ನಿರವಯವ ಸಾವಯವ ರಸಾಯನಶಾಸ್ತ್ರದ ಮೂಲ ತತ್ತ್ವಗಳು ಮನದಟ್ಟಾದವು. ರಜಾ ದಿನಗಳಲ್ಲಿ ಹೋಟೆಲ್ ಮಾಣಿಯಾಗಿ ಅಲ್ಪ ಸ್ವಲ್ಪ ಹಣ ಗಳಿಸಿದ ಪೌಲ್, ಕ್ಯಾಲಿಫೋರ್ನಿಯಾದಲ್ಲಿ ಸೇನೆಯ ಶಿಬಿರದಲ್ಲೂ ಕೆಲ ದಿನ ತರಬೇತಿ ಹೊಂದಿದನು.ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ, ಮ್ಯಾಡಿಸನ್‍ನಲ್ಲಿರುವ, ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಜೀವರಸಾಯನಶಾಸ್ತ್ರದ ವಿಭಾಗಕ್ಕೆ ಸೇರಿದನು. ಇಲ್ಲಿ ವಿಟಮಿನ್, ಪೌಷ್ಟಿಕತೆ,ಚಯಾಪಚಯಗಳ ¨ಗೆಗೆ ಹೊಸ ಸಂಶೋಧನೆಗಳು ಪ್ರಾರಂಭವಾಗಿ ವಿದ್ಯಾರ್ಥಿಗಳಿಗೆ ಹಲವಾರು ಅವಕಾಶದ ಬಾಗಿಲುಗಳು ತೆರೆದಿದ್ದವು. ಇದೇ ಕಾಲೇಜಿನಲ್ಲಿದ್ದ ಸ್ಟೀನ್‍ಬಾಕ್ ಹಾಲನ್ನು ವಿಟಮಿನ್ ಡಿ ಯಿಂದ ಸಮೃದ್ದಗೊಳಿಸುವ ವಿಧಾನಕ್ಕೆ ಏಕಸ್ವಾಮ್ಯ ಪಡೆದಿದ್ದರೆ, ಎಲ್ವೇಹೀಮ್ ನೇತೃತ್ವದ ತಂಡ, ಪೆಲ್ಲಾಗ್ರ ನಿವಾರಣೆಗೆ ನೆರವಾಗುವ ನಿಕೋಟಿಕ್ ಆಮ್ಲ ಪತ್ತೆ ಹಚ್ಚಿದ್ದಿತು. ಇಂತಹುದೇ ಹಲವು ಹತ್ತಾರು ಫಲಫ್ರ್ರದ, ಸಂಶೋಧನೆಗಳು ಹೊರ ಬಂದಿದ್ದವು. 1943ರಲ್ಲಿ ಪೌಲ್, ಡಾಕ್ಟರೇಟ್ ಗಳಿಸಿದಾಗ, ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿದ್ದಿತು. ಯುದ್ದ ಕಾಲದಲ್ಲಿನ ಅಗತ್ಯಗಳಿಗಾಗಿ ಸ್ಥಾಪಿತವಾಗಿದ್ದ ವೈದ್ಯಕೀಯ ಸಂಶೋಧನಾ ಸಮಿತಿಯಿಂದ ರಕ್ತ ರಸಿಕೆಯ (Serum) ಪ್ರೋಟಿನ್‍ಗಳ ಬಗೆಗಿನ ಸಂಶೋಧನೆಗಳಲ್ಲಿ ಪೌಲ್ ಭಾಗವಹಿಸಿದನು. ಯುದ್ದ ಮುಗಿದ ನಂತರ ಮಿನ್ನೆಸೊಟಾ ವಿಶ್ವವಿದ್ಯಾಲಯದಲ್ಲಿ ಜೀವರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. 1955ರಲ್ಲಿ ಗುಗೆನ್‍ಹೀಮ್ಫೆಲೋಷಿ¥sóï ಗಳಿಸಿ, ಸ್ವೀಡನ್‍ಗೆ ತೆರಳಿದ ಪೌಲ್ ಅಲ್ಲಿ ಸ್ಟಾಕ್ ಹೋಂನ ವೆನ್ನರ್ ಗ್ರೀನ್ ಸಂಸ್ಥೆಯಲ್ಲಿ ಒಲೋವ್ ಲಿಂಡ್‍ಬರ್ಗ್ ಹಾಗೂ ನೊಬೆಲ್ ಮೆಡಿಕಲ್ ಇನ್ಸ್ಟಿಟ್ಯೂಟ್‍ನಲ್ಲಿ ಹ್ಯೂಗೋ ಥಿಯೋರೆಲ್ ಜೊತೆಗೂಡಿ ಕಿಣ್ವಗಳನ್ನು (Enzyme) ಕುರಿತಾದ ಆಳ ಅಧ್ಯಯನ ನಡೆಸಿದನು. 1955ರಲ್ಲಿ ಕಿಣ್ವಗಳ ಕುರಿತಾದ ಸಂಶೋಧನೆಗೆ ಅಮೆರಿಕನ್ ರಸಾಯನಶಾಸ್ತ್ರ ಸಂಸ್ಥೆಯ ಪ್ರಶಸ್ತಿ ಪಡೆದನು. ಎಟಿಪಿ ಸಂಶ್ಲೇಷಣೆಯಲ್ಲಿನ ಮಧ್ಯಂತರ ಕಾರ್ಯ ನಿರ್ವಹಿಸುವ ಹೊಸ ಪ್ರೊಟೀನ್ ಅನಾವರಣಗೊಳಿಸಿದ ತಂಡದ ನೇತೃತ್ವ ವಹಿಸಿದ್ದಕ್ಕೆ ಪೌಲ್ 1997 ನೊಬೆಲ್ ಪ್ರಶಸ್ತಿ ಗಳಿಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/29/2019