ಪೌಲ್, ಜೆ.ಕ್ರಟ್‍ಜೆನ್ (1933--) ೧೯೯೫
ಡೆನ್ಮಾರ್ಕ್-ರಸಾಯನಶಾಸ್ತ್ರ-ವಾಯುಗೋಳದ ಮೇಲ್ಪದರ, ಒಜೋನ್ ಕುರಿತಾದ ಅಧ್ಯಯನ ನಡೆಸಿದಾತ.
ಪೌಲ್ 3 ಡಿಸೆಂಬರ್ 1933ರಂದು ಆ್ಯಮಸ್ಟರ್‍ಡ್ಯಾಂನಲ್ಲಿ ಜನಿಸಿದನು. ಇವನದು ಪೋಲೀಷ್ ಹಾಗೂ ಜರ್ಮನ್ ಮಿಶ್ರ ಜನಾಂಗವಾಗಿದ್ದಿತು. ಈತನ ತಂದೆ ಕಾವಲುಗಾರನಾಗಿದ್ದರೆ, ತಾಯಿ ಆಸ್ಪತ್ರೆಯಲ್ಲಿ ಅಡುಗೆ ಮನೆಯಲ್ಲಿ ಕೆಲಸಕ್ಕಿದ್ದಳು. 1940ರಲ್ಲಿ ಡೆನ್ಮಾರ್ಕ್ ಜರ್ಮನಿ ವಶದಲ್ಲಿದ್ದಿತು. ಇದೇ ವರ್ಷ ಪೌಲ್ ಪ್ರಾಥಮಿಕ ಶಾಲೆಗೆ ಸೇರಿದನು. ನಾಝಿ ಆಡಳಿತ ಪೌಲ್ ಅಭ್ಯಸಿಸುತ್ತಿದ್ದ ಶಾಲೆಯನ್ನು ವಶಪಡಿಸಿಕೊಂಡಿದ್ದರಿಂದ ಅದರ ನೆಲೆಯನ್ನು ಹಲವಾರು ಬಾರಿ ಬದಲಾಯಿಸಲಾಯಿತು. 1944,1945ರಲ್ಲಿ ಚಳಿ ಬರಗಾಲ ಬಂದು ಜನ ಜೀವನ ದುರ್ಭರವಾಯಿತು. ನೀರು, ಆಹಾರ ಧಾನ್ಯ, ಗೃಹೋಪಯೋಗಿ ವಸ್ತುಗಳು ಪಡಿತರ ರೂಪದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಸರಬರಾಜಾಗುತ್ತಿದ್ದವು. ಪೌಲ್‍ನ ಶಾಲಾ ಸ್ನೇಹಿತದಲ್ಲಿ ಹಲವಾರು ಜನ ಹಸಿವೆ, ರೋಗ ರುಜಿನಗಳಿಂದ ಸಾವನ್ನಪ್ಪಿದರು. 1945ರಲ್ಲಿ ಸ್ವೀಡನ್‍ನ ವಿಮೋಚನಾ ಕೆಂಪು ಸೇನೆ ಆಗಸದಿಂದ ಆಹಾರ ಪೊಟ್ಟಣಗಳನ್ನು ಒದಗಿಸಿತೊಡಗಿದಾಗಿನಿಂದ ಜನರ ಸ್ಥಿತಿ ಸ್ವಲ್ಪ ಸುಧಾರಿಸತೊಡಗಿತು. ಇದಾದ ನಂತರ ಸಾಮಾನ್ಯ ಶಿಕ್ಷಣ ಸಾಧ್ಯವಾಯಿತು. ಪ್ರೌಢಶಾಲೆಯಲ್ಲಿಫೆ್ರಂಚ್, ಜರ್ಮನ್ ಇಂಗ್ಲೀಷ್ ಭಾಷೆಗಳೊಂದಿಗೆ ಗಣಿತ, ವಿಜ್ಞಾನಗಳನ್ನು ಪೌಲ್ ಅಭ್ಯಸಿಸಿದನು. ಪೌಲ್, ತಾಂತ್ರಿಕ ಶಾಲೆ ಸೇರಿ ಸಿವಿಲ್ ಇಂಜಿನಿಯರಿಂಗ್ ಪದವಿ ಗಳಿಸಿದನು. ಆ ಕಾಲದಲ್ಲಿ ಸಿವಿಲ್ ಇಂಜಿನಿಯರ್‍ಗಳಿಗೆ ಮಿಲಿಟರಿ ಸೇವೆ ಕಡ್ಡಾಯವಾಗಿದ್ದಿತು. ಆದ್ದರಿಂದ 1954ರಿಂದ1958ರವರೆಗೆ, ಅ್ಯಮ್‍ಸ್ಟರ್‍ಡ್ಯಾಂನಲ್ಲಿ ಸರ್ಕಾರದ ಸೇತುವೆ ನಿರ್ಮಾಣ ನಿಗಮದಲ್ಲಿ ಸೇವೆ ಸಲ್ಲಿಸಿದನು. 1958ರಲ್ಲಿ ಸ್ಟಾಕ್‍ಹೋಂ ವಿಶ್ವವಿದ್ಯಾಲಯದ ಹವಾಮಾನ ಇಲಾಖೆ ಗಣಕ ಅಭಿಕರ್ಮಿಯ (Operator) ಹುದ್ದೆಗೆ ಪತ್ರಿಕೆಯಲ್ಲಿ ಜಾಹಿರಾತು ನೀಡಿತು. ಗಣಕದ ಬಗೆಗೆ ಏನೂ ತಿಳುವಳಿಕೆಯಿಲ್ಲದಿದ್ದರೂ, ತಾಂತ್ರಿಕ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಪೌಲ್‍ಗೆ ಕೆಲಸ ಸಿಕ್ಕಿತು. ಈ ಕಾಲದಲ್ಲಿ ಸ್ಟಾಕ್‍ಹೋಂ ವಿಶ್ವವಿದ್ಯಾಲಯದಲ್ಲಿ ಜಗತ್ತಿನ ಅತ್ಯಂತ ಶೀಘ್ರ ಹಾಗೂ ಮುಂದುವರೆದ ಗಣಕಗಳು ಸ್ಥಾಪನೆಗೊಂಡಿದ್ದವು. ಜಾರ್ಜ್ ವಿಲ್‍ನೊಂದಿಗೆ ನಾಕ್ಟಿಲೂಸೆಂಟ್ ಮೋಡಗಳ ಗುಣಲಕ್ಷಣಗಳನ್ನು ಅಳೆಯುವ ಯೋಜನೆಯಲ್ಲಿ ಪೌಲ್ ಪಾಲ್ಗೊಂಡನು. ಇವು 85ಕಿ.ಮೀ.ಔನ್ನತ್ಯದಲ್ಲಿರುವ ತೀವ್ರ ತಂಪಾದ ಮೋಡಗಳು. ಹವಾಮಾನ ಮುನ್ಸೂಚನೆ ನೀಡುವ ಜಗತ್ತಿನ ಮೊಟ್ಟ ಮೊದಲ ಗಣಕ ಕ್ರಮವಿಧಿಗಳನ್ನು ಬರೆಯುವಲ್ಲಿ ಪೌಲ್ ಪಾಲ್ಗೊಂಡನು. ಆ ಕಾಲದಲ್ಲಿ ಆಲ್ಗಾಲ್, ಫೋರ್ಟ್ರಾನ್ನಂತಹ ಉನ್ನತ ಗಣಕ ಭಾಷೆಗಳು ಅಭಿವೃದ್ಧಿಗೊಂಡಿರಲಿಲ್ಲ. ಹಾಗಾಗಿ ಎಲ್ಲಾ ಕ್ರಮವಿಧಿಗಳನ್ನು ಯಂತ್ರ ಸಂಕೇತಗಳಲ್ಲಿ, ಬರೆಯಲಾಯಿತು. 1963ರಲ್ಲಿ ಗಣಿತ, ಸಂಖ್ಯಾಕಲನಶಾಸ್ತ್ರ (Statistics) , ಪವನಶಾಸ್ತ್ರಗಳ ವಿಷಯಗಳೊಂದಿಗೆ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಗೆ ಸೇರುವ ಅವಕಾಶ ಪೌಲ್‍ಗೆ ಬಂದೊದಗಿತು. 1965ರಲ್ಲಿ ಅಸಂಸಂ ವಿಜ್ಞಾನಿಯೊಬ್ಬನಿಗೆ ಸ್ತರಗೋಳ, ಮಧ್ಯಗೋಳ ಹಾಗೂ ನಿಮ್ನ ವಾಯುಗೋಳಗಳಲ್ಲಿನ ಆಮ್ಲಜನಕದ ಬಹುರೂಪಿಯ ಪ್ರಮಾಣ ವಿತರಣೆ ಅಧ್ಯಯನದ ಕ್ರಮವಿಧಿ ತಯಾರಿಸುವ ಹೊಣೆ ಪೌಲ್ ಹೆಗಲೇರಿತು. ಈ ಕಾರ್ಯಕ್ರಮದ ಅಧ್ಯಯನದಿಂದ ವಾತಾವರಣದಲ್ಲಿನ ಓಜೋನ್ ದ್ಯುತಿ ರಾಸಾಯನಿಕ ಗುಣಗಳನ್ನು ಅರಿಯುವ ಸಂದರ್ಭ ಬಂದೊದಗಿತು. ಸ್ತರಗೋಳದ (Stratosphere) ರಾಸಾಯನಿಕ ಲಕ್ಷಣಗಳ ಅಧ್ಯಯನ ಪೌಲ್‍ನ ಗುರಿಗಳಾದವು. ಮೋಡಗಳ ಭೌತ ಸ್ವರೂಪ, ಇಂಗಾಲದ ಚಕ್ರ, ಮಳೆ ನೀರಿನ ರಾಸಾಯನಿಕ ಸಂಯೋಜನೆಗಳು ಪರಿಶೀಲನೆಗೊಳಗಾಗಿ, ಇಲ್ಲಿ ಮೊದಲ ಬಾರಿಗೆ ಆಮ್ಲ ಮಳೆಯನ್ನು ಗುರುತಿಸಲಾಯಿತು. 1972ರಲ್ಲಿ ಸ್ಟಾಕ್‍ಹೋಂನಲ್ಲಿ ಜರುಗಿದ ವಿಶ್ವಸಂಸ್ಥೆಯ ಪರಿಸರ ಸಮ್ಮೇಳನದಲ್ಲಿ ವಿಶ್ವದ ಬಲಿಷ್ಟ ರಾಷ್ಟ್ರಗಳು ಪರಿಸರ ಸಂರಕ್ಷಣೆಯನ್ನು ಗಮನ ಸೆಳೆಯುವಂತಹ ಯತ್ನಗಳು ಪೌಲ್ ಸಂಗಡಿಗದಿಂದಾದವು. ವಾಯುಗೋಳದ ಮೇಲ್ಪದರ, ಓಜೋನ್ ಸಂಶೋಧನೆಗಳಿಗಾಗಿ ಪೌಲ್ 1995ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/6/2020