ಜೆನ್ಸ್, ಸಿಸ್ಕೆ (1918--) ೧೯೯೭
ಡೆನ್ಮಾರ್ಕ್-ರಸಾಯನಶಾಸ್ತ್ರ-ಪೆÇಟ್ಯಾಷಿಯಂ ಲವಣಾಂಶಗಳ ವರ್ಗಾಂತರತೆ ಕುರಿತಾಗಿ ಸಂಶೋಧಿಸಿದಾತ.
ಜೆನ್ಸ್, 8 ಅಕ್ಟೋಬರ್ 1918ರಂದು ಡೆನ್ಮಾರ್ಕ್‍ನ, ಲೆಮ್‍ವಿಗ್ ನಗರದ ಶ್ರೀಮಂತ ಕುಟಂಬದಲ್ಲಿ ಜನಿಸಿದನು. ನಾಲ್ಕು ಮಕ್ಕಳಲ್ಲಿ ಹಿರಿಯವನಾಗಿದ್ದ ಜೆನ್ಸ್ ಹನ್ನೆರಡು ವರ್ಷದವನಿರುವಾಗ ಆತನ ತಂದೆ, ನ್ಯೂಮೋನಿಯಾದಿಂದ ತೀರಿಕೊಂಡನು. ತನ್ನ ನಾ¯ಲು ಮಕ್ಕಳಿಗೆ ಉತ್ತಮ ಜೀವನ ಒದಗಿಸುವ ಪ್ರಯತ್ನದಲ್ಲಿ ಜೆನ್ಸ್ ತಾಯಿಯ ಜೀವನ ಸಾಗಿತು. 1936ರಲ್ಲಿ ಕೊಪೆನ್‍ಹೇಗ್ ವಿಶ್ವವಿದ್ಯಾಲಯ ಸೇರಿ 1944ರಲ್ಲಿ ವೈದ್ಯಕೀಯ ಪದವಿಯೊಂದಿಗೆ ಜೆನ್ಸ್ ಹೊರಬಂದನು. ದೇಶದ ರಾಜಧಾನಿಯಾದ ಕೊಪೆನ್‍ಹೇಗ್‍ನಂತಹ ಮಹಾನ ನಗರದ ಜೀವನ ಜೆನ್ಸ್‍ಗೆ ಎಂದಿಗ್ ಆಪ್ತವಾಗಲಿಲ್ಲವಾದರೂ ಅಲ್ಲಿ ದಕ್ಕುತ್ತಿದ್ದ ಕಲೆ, ಸಾಹಿತ್ಯ, ಸಂಗೀತಗಳು ಮುದ ನೀಡಿದವು. ಮೊದಲ ಜಾಗತಿಕ ಯುದ್ದದಲ್ಲಿ ಡೆನ್ಮಾರ್ಕ್ ಭಾಗಿಯಾಗದಂತೆ ಎಚ್ಚರ ವಹಿಸಿದ್ದಿತು. 1940ರಲ್ಲಿ ಎರಡನೆ ಜಾಗತಿಕ ಯುದ್ದ ಪ್ರಾರಂಭವಾದಾಗ ಅದು ಹಿಟ್ಲರ್‍ನ ವಶವಾಯಿತಾದರೂ ಡೆನ್ಮಾರ್ಕನ ಆಡಳಿತವನ್ನು ಜರ್ಮನಿಯು ಕೈಗೆತ್ತಿಕೊಳ್ಳಲಿಲ್ಲ. ಜಾಗತಿಕ ಯುದ್ದ ಸಮಯದಲ್ಲಿ ಆಹಾರ ಸರಬರಾಜು ಕೇಂದ್ರವಾಗಿ ಡೆನ್ಮಾರ್ಕ್‍ನ್ನು ಬಳಸತೊಡಗಿತು. ಬೆಟ್ಟ ಗುಡ್ಡಗಳಾಗಲಿ, ಸುರಕ್ಷಿತ ನೈಸರ್ಗಿಕ ಅಡಗುತಾಣಗಳಾಗಲಿ ಇಲ್ಲದ ಡೆನ್ಮಾರ್ಕ್‍ನಲ್ಲಿ ಜರ್ಮನಿ ವಿರುದ್ದದ ಜನರಿಗಿದ್ದ ಆಕ್ರೋಶ ಜನಪರ ಹೋರಾಟವಾಗುವಲ್ಲಿ ಅಥವಾ ಪ್ರಭುತ್ವ ವಿರೋಧಿ ದಂಗೆಯಾಗುವಲ್ಲಿ ವಿಫಲಗೊಂಡಿತು. ಇವೆಲ್ಲ ಪರಿಣಾಮ ಶೈಕ್ಷಣಿಕ ರಂಗದ ಮೇಲೂ ಆಯಿತು. 1943ರಲಿ ಜರ್ಮನ್ ಆಕ್ರಮಣದ ವಿರುದ್ಧ ದೇಶಾದ್ಯಂತ ನಡೆದ ಹರತಾಳವನ್ನು ಯಶಸ್ವಿಯಾಗಿ ಹಿಟ್ಲರ್ ಹತ್ತಿಕ್ಕಿದನು. 1944ರಲ್ಲಿ ಜೆನ್ಸ್ ವೈದ್ಯನಾಗಿ ವೃತ್ತಿ ಜೀವನ ಆರಂಭಿಸಿದನು. ಆದರೆ ಇದೇ ವರ್ಷ, ಜರ್ಮನಿ ವಿರುದ್ದ ದಂಗೆಯೇಳುವಂತೆ ಪ್ರಚೋದಿಸಿ ಬ್ರಿಟನ್ ಡೆನ್ಮಾರ್ಕ್‍ನ ದೂರ ಪ್ರದೇಶಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿತು. ವೈದ್ಯನಾಗಿ ಮುಂದುವರೆಯುದಕ್ಕಿಂತಲೂ ಮೊದಲು ಜರ್ಮನಿಯ ವಿರುದ್ದ ಶಸ್ತ್ರಾಗಳನ್ನತ್ತಲು ಜೆನ್ಸ್ ನಿರ್ಧರಿಸಿದನಾದರೂ, ಅಂತಿಮವಾಗಿ ಅದರಲ್ಲಿ ಸಾಫಲ್ಯ ಕಾಣಲಿಲ್ಲ. 1945ರಲ್ಲಿ ಜರ್ಮನಿ ಡೆನ್ಮಾರ್ಕ್‍ಗೆ ಶರಣಾದ ನಂತರ ಜೆನ್ಸ್ ನೆಮ್ಮದಿಯ ನಿಟ್ಟುಸಿರಿಟ್ಟನು. 1947ರಲ್ಲಿ ಶಸ್ತ್ರ ಚಿಕಿತ್ಸಕ ವೃತ್ತಿಯನ್ನು ತೊರೆದ ಜೆನ್ಸ್ ವೈದ್ಯಕೀಯ ಸಂಶೋಧನೆಯತ್ತ ಗಮನ ಹರಿಸಿದನು. ಜೆನ್ಸ್ ಪೆÇರೆ ಕ್ರಿಯಾಶಾಸ್ತ್ರದಲ್ಲಿ ಆಸಕ್ತನಾಗಿದ್ದನು. ದೇಹದಲ್ಲಿ ಸೋಡಿಯಂ, ಪೊಟ್ಯಾಷಿಯಂ ಲವಣಾಂಶಗಳ ವರ್ಗಾಂತರತೆ ಕುರಿತಾಗಿ ಜೆನ್ಸ್ ನಡೆಸಿದ ಪ್ರಯೋಗಗಳು ಗಮನಾರ್ಹವಾದವು. ಇದಕ್ಕಾಗಿ ಜೆನ್ಸ್ 1997ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/7/2019