ಜಾನ್ , ಇ. ವಾಕರ್ –(1941--) ೧೯೯೭
ಇಂಗ್ಲೆಂಡ್-ರಸಾಯನಶಾಸ್ತ್ರ- ಅಡೆನೋಸೈನ್ ಟ್ರೈ ಫಾಸ್ಫೇಟ್ ಸಂಶ್ಲೇಷಣೆಯ ಹಿನ್ನೆಲೆಯ ಕಿಣ್ವದ ಕ್ರಿಯಾಸ್ವರೂಪ (Enzyme A Process) ಅನಾವರಣಗೊಳಿಸಿದಾತ.
ಜಾನ್ 7 ಜನವರಿ 1941ರಲ್ಲಿ ಯಾರ್ಕ್‍ಷೈರ್‍ನ ಹ್ಯಾಲಿಫ್ಯಾಕ್ಸ್,ನಲ್ಲಿ ಜನಿಸಿದನು. ಈತನ ತಂದೆ ಗಾರೆ ಕೆಲಸ ಮಾಡುತ್ತಿದ್ದನು. ಕಾಲ್ಚೆಂಡು, ಕ್ರಿಕೆಟ್ ಜಾನ್‍ನ ನೆಚ್ಚಿನ ಆಟಗಳಾಗಿದ್ದು ತಂಡದ ಮುಖಂಡನಾಗಿ ಹಲವಾರು ಪಂದ್ಯಗಳಲ್ಲಿ ಭಾಗವಹಿಸಿದ್ದನು. 1960ರಲ್ಲಿ ಆಕ್ಸ್’ಫರ್ಡ್’ನ ಸೇಂಟ್ ಕ್ಯಾಥರೀನ್ ಕಾಲೇಜನ್ನು ಸೇರಿ 1964ರಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿದನು. 1965ರಲ್ಲಿ ಆಕ್ಸ್ಫರ್ಡ್’ನ ವಿಲಿಯಂ ಡನ್ ಸ್ಕೂಲ್ ಆಫ್ಪೆಥಾಲಜಿ ಸೇರಿ ಪೆಪ್ಟೈಡ್ ಪ್ರತಿಜೈವಿಕಗಳನ್ನು ಕುರಿತಾಗಿ ಸಂಶೋಧನೆ ನಡೆಸಿದನು. ಬಿಬಿಸಿ ದೂರದರ್ಶನ ಜಾನ್ ಕೆಂಡ್ರ್ಯೂ ಮಾರ್ಗದರ್ಶನದಲ್ಲಿ ನಿರ್ಮಿಸಿ ಬಿತ್ತರಿಸಿದ್ದ ದಿ ಥ್ರೆಡ್ ಆಫ್ ಲೈಫ್ ಹೆಸರಿನ ಕಾರ್ಯಕ್ರಮ ಜಾನ್ ಅಣ್ವಯಿಕ ಜೀವಶಾಸ್ತ್ರದಲ್ಲಿ (Molecular Biology) ಆಸಕ್ತಿ ತಳೆಯುವಂತೆ ಮೂಡಿತು. 1969-1971ರವರೆಗೆ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಔಷಧಿಶಾಸ್ತ್ರ ಶಾಲೆಯಲ್ಲಿ ಕೆಲಸ ಮಾಡಿದನು. 1974ರಲ್ಲಿಫೆ್ರಂಡ್ ಸ್ಯಾಂಜರ್‍ನ ಆಹ್ವಾನದ ಮೇರೆಗೆ ವೈದ್ಯಕೀಯ ಸಂಶೋಧನಾ ಸಮಿತಿಯ, ಅಣ್ವಯಿಕ ಜೀವಶಾಸ್ತ್ರ ವಿಭಾಗದ ಪ್ರಯೋಗಾಲಯದ ಪ್ರೊಟೀನ್ ಹಾಗೂ ಜೈವಿಕ ಆಮ್ಲ ರಸಾಯನಶಾಸ್ತ್ರ ವಿಭಾಗ ಸೇರಿದನು. ಈ ಸಂಸ್ಥೆಯಲ್ಲಿ ಜೀವವಿಜ್ಞಾನದಲ್ಲಿ ಕ್ರಾಂತಿಯನ್ನೇ ತಂದ ನೂರಾರು ವಿಜ್ಞಾನಿಗಳು ಕಾರ್ಯನಿರತರಾಗಿದ್ದರು. ಸ್ಯಾಂಜರ್ ಡಿಎನ್‍ಎ ಸರಣಿ ನಿರ್ಧಾರಕ್ಕೆ ಹೊಸ ವಿಧಾನವನ್ನು ವಿವರಿಸಿದ್ದನು. ಇದನ್ನು ಬಳಸಿ ಜಾನ್ ಎಫ್.ಎಕ್ಸ್-174 ಹಾಗೂ ಜಿ-4 ಬ್ಯಾಕ್ಟಿರಿಯೋಫೇಜ್’ಗಳ ತಳಿನಕಾಶೆ (Genome) ಮತ್ತು ಮೈಥ್ರೋಕಾಂಡ್ರಿಯಾದ ತಳಿನಕಾಶೆ ಪಡೆದನು. ಜಾನ್‍ನ ಸಂಶೋಧನೆಗಳಿಂದ ಅಡೆನೋಸೈನ್‍ಟ್ರೈಫಾಸ್ಫೇಟ್’ನ(ಎ.ಟಿ.ಪಿ) ಸಂಶ್ಲೇಷಣೆಯ ಹಿನ್ನೆಲೆಯಲ್ಲಿ ಕ್ರಿಯಾಶೀಲವಾಗಿರುವ ಕಿಣ್ವ ಮೂಲದ ಕ್ರಿಯಾವಿನ್ಯಾಸ ಸ್ಪಷ್ಟಗೊಂಡಿತು. ಇದಕ್ಕಾಗಿ ಜಾನ್ 1997ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/26/2019