ಆ್ಯಲನ್, ಜಿ.ಮೆಕ್‍ಡಯಾರ್‍ಮಿಡ್ (1927--) -೨೦೦೦
ನ್ಯೂಜಿಲ್ಯಾಂಡ್-ರಸಾಯನಶಾಸ್ತ್ರ-ವಾಹಕಶೀಲ ಪಾಲಿಮರ್ ಪಡೆದಾತ.
14 ಏಪ್ರಿಲ್ 1927ರಂದು ಮ್ಯಾಸ್ಟೆರ್‍ಟನ್‍ನಲ್ಲಿ ಆ್ಯಲನ್ ಜನನವಾಯಿತು. ಈತನ ತಂದೆ ಇಂಜಿನಿಯರಾಗಿದ್ದು, 1930ರ ಆರ್ಥಿಕ ಸಂಕಷ್ಟದ ದಿನಗಳಲ್ಲಿ ಬಹು ಕಷ್ಟದಿಂದ ಮಕ್ಕಳನ್ನು ಸಾಕಿ ವಿದ್ಯಾಭ್ಯಾಸ ಒದಗಿಸಿದನು. ಇಬ್ಬರು ಅಣ್ಣಂದಿರು, ಒಬ್ಬ ಅಕ್ಕನೊಂದಿಗೆ ಆ್ಯಲನ್ ಬರಿಗಾಲಿನಲ್ಲಿ ಶಾಲೆಗೆ ಹೋಗುತ್ತಿದ್ದನು. ಇದು ಆ ಕಾಲದಲ್ಲಿ ಬಡಮಕ್ಕಳಲ್ಲಿ ಇದು ಸರ್ವೇ ಸಾಮಾನ್ಯ ಸಂಗತಿಯಾಗಿದ್ದಿತು. ಬಡತನ ಆ್ಯಲನ್‍ನ್ನು ಸ್ವಾವಲಂಬಿಯಾಗುವಂತೆ ಹಣದ ಮೌಲ್ಯ ಅರಿಯುವಂತೆ ಮಾಡಿತು. ಎರಡು ಕೋಣೆಗಳ ಮಾಧ್ಯಮಿಕ ಶಾಲೆಯಲ್ಲಿ ಇನ್ನಿತರ ಬಡ ಹಿಂದುಳಿದ ಮಕ್ಕಳೊಂದಿಗೆ ಆ್ಯಲನ್ ಅನುಭವ ಪ್ರಪಂಚ ಸಮೃದ್ಧಗೊಂಡು ಹಿಗ್ಗಿತು. ಬೆಳಿಗ್ಗೆ ಹಾಲು ಮಾರುತ್ತಾ, ಬಿಡುವಿನ ವೇಳೆಯಲ್ಲಿ ತಾಯಿಗೆ ನೆರವೀಯುತ್ತಾ ಆ್ಯಲನ್ ಜೀವನ ಸಾಗಿತು. ಹತ್ತನೇ ವರ್ಷದಲ್ಲಿರುವಾಗ ತನ್ನ ತಂದೆ ಇಂಜಿನಿಯರಿಂಗ್ ಪದವಿಯಲ್ಲಿದ್ದಾಗ ಓದುತ್ತಿದ್ದ ರಸಾಯನಶಾಸ್ತ್ರದ ಪುಸ್ತಕ ಆ್ಯಲನ್‍ನ್ನು ಬಹುವಾಗಿ ಆಕರ್ಷಿಸಿತು. ಇದರಿಂದ ಸ್ಥಳೀಂiÀi ಗ್ರಂಥಾಲಯದಿಂದ ಬಾಯ್ ಕೆಮಿಸ್ಟ್ ಹೆಸರಿನ ಪುಸ್ತಕ ತಂದು ಓದತೊಡಗಿದನು. ಅದರಲ್ಲಿ ಆಸಕ್ತಿ ತೀವ್ರವಾಗತೊಡಗಿತು. ಆ ಪುಸ್ತಕವನ್ನು ಸತತವಾಗಿ ಒಂದು ವರ್ಷಗಳ ಕಾಲ ನವೀಕರಿಸಿ ಕೊಂಡನು. ಆ್ಯಲನ್ ಹದಿನಾರನೇ ವಯಸ್ಸಿನಲ್ಲಿರುವಾಗ, ಅತ್ಯಲ್ಪ ಸೌಲಭ್ಯಗಳೊಂದಿಗೆ ಆತನ ತಂದೆ ನಿವೃತ್ತನಾದನು. ಇದರಿಂದಾಗಿ ಆ್ಯಲನ್ ಶಾಲೆಯನ್ನು ತೊರೆದು ವಿಕ್ಟೋರಿಯಾ ವಿಶ್ವವಿದ್ಯಾಲಯದ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದಲ್ಲಿ ಅತ್ಯಲ್ಪ ಸಂಬಳಕ್ಕಾಗಿ ಸಹಾಯಕನಾಗಿ ಸೇರಿಕೊಂಡನು. ಈ ವಿಭಾಗದಲ್ಲಿ ಆಗ ಕೇವಲ ಇಬ್ಬರೇ ವಿಧ್ಯಾರ್ಥಿಗಳಿದ್ದರು. ಇಲ್ಲಿಯೇ ಅರೆಕಾಲಿಕ ವಿದ್ಯಾರ್ಥಿಯಾಗಿ ಸೇರಿದ ಆ್ಯಲನ್ ಸ್ನಾತಕೋತ್ತರ ಪದವಿಯನ್ನು ಗಳಿಸಿದನು. 1950ರಲ್ಲಿ ¥sóÀÅಲ್‍ಬ್ರೈಟ್ ವಿದ್ಯಾರ್ಥಿ ವೇತನ ಪಡೆದು ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾದನು. ಆ್ಯಲನ್, ಹೀಗರ್‍ನೊಂದಿಗೆ ವಾಹಕಶೀಲ ಪಾಲಿಮರ್‍ಗಳನ್ನು ತಯಾರಿಸಿ, ಅದರ ಅಧ್ಯಯನ ನಡೆಸಿದನು. 1975ರಲ್ಲಿ ಜಪಾನಿನ ಶಿರಾಕವಾನೊಂದಿಗೆ ಸಕಲುಷಿತಗೊಳಿಸಿದ (ಆoಠಿeಜ) ಪಾಲಿ ಅಸಿಟಿಲೇನ್ ವಾಹಕಶೀಲ ಸಾಮಾಗ್ರಿಯನ್ನು ತಯಾರಿಸಿದನು. ಇದಕ್ಕಾಗಿ 2000ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/27/2019