ಅಹ್ಮದ್ , ಝವೇಲ್ –(1946--) ೧೯೯೯
ಈಜಿಪ್ತ್-ಅಸಂಸಂ- ಅತಿವೇಗಿ ವಿವರ್ತನ ಹಾಗೂ ಸೂಕ್ಷ್ಮ ದರ್ಶಕ (Ultrafast Diffraction Microscope) ನಿರ್ಮಾಣದಲ್ಲಿ ಶ್ರಮಿಸಿದಾತ.
ಅಹ್ಮದ್ 26 ಫೆಬ್ರವರಿ 1946ರಂದು ಅಲೆಗ್ಸಾಂಡ್ರಿಯಾ ಸಮೀಪದ ಡಿಸೆಕ್ಟ್ ನಗರದಲ್ಲಿ ಜನಿಸಿದನು. ಬಾಲ್ಯದಿಂದಲೂ ಏಕೆ ? ಹೇಗೆ ? ಎಂಬ ಪ್ರಶ್ನೆಗಳ ಬೆನ್ನ ಹತ್ತಿ ಸಾಗುತ್ತಿದ್ದ ಅಹ್ಮದ್‍ಗೆ ವಿಜ್ಞಾನ ಬಹು ಪ್ರಿಯ ವಿಷಯವಾಗಿದ್ದಿತು. ಅಹ್ಮದ್ ವಿದೇಶಗಳಲ್ಲಿ ಅತ್ಯುನ್ನತ ಪದವಿ ಗಳಿಸಿ, ತಾಯ್ನಾಡಿನಲ್ಲಿ ಉನ್ನತ ಹುದ್ದೆ ಅಲಂಕರಿಸಬೇಕೆಂದು ಕುಟುಂಬದವರ ಅಸೆಯಾಗಿದ್ದಿತು. ಅಲೆಕ್ಸಾಂಡ್ರಿಯಾ ವಿಶ್ವವಿದ್ಯಾಲಯದಿಂದ ರಸಾಯನ ಶಾಸ್ತ್ರದಲ್ಲಿ ಪದವಿ ಗಳಿಸಿದ ಅಹ್ಮದ್ ಇಲ್ಲಿಯೇ ಬೋಧಕ ವೃತ್ತಿಯೊಂದಿಗೆ ಸಂಶೋಧನೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ನೊಂದಾಯಿತನಾದನು. ಅಹ್ಮದ್ ಹೆಚ್ಚಿನ ಸಂಶೋಧನೆಗಾಗಿ ಅಸಂಸಂಗಳಿಗೆ ಹೋಗಿ ನೆಲೆಸಿದನು. ಇಂಗ್ಲೀಷ ಭಾಷಾ ಜ್ಞಾನದ ಕೊರತೆ, ಸಾಂಸ್ಕೃತಿಕ ವೈದ್ಯಶ್ಯಗಳು ಆರಂಭದಲ್ಲಿ ಭಾರಿ ಅಡಚಣೆಗಳಾಗಿ ಗೋಚರಿಸಿದವು. 1973ರಲ್ಲಿ ಡಾಕ್ಟರೇಟ್ ಗಳಿಸಿ, 1974ರಲ್ಲಿ ಬಕ್ರ್ಲೆ ವಿಶ್ವವಿದ್ಯಾಲಯದಲ್ಲಿ ಬೋಧಕ ವೃತ್ತಿಗೆ ಸೇರಿ, ಅಲ್ಲಿನ ಪ್ರಾಧ್ಯಾಪಕನಾಗಿದ್ದ ಚಾಲ್ರ್ಸ್ ಹಾರ್ಸ್‍ನಿಂದ ವಿಜ್ಞಾನದ ಬಗೆಗೆ ಹೊಸ ದೃಷ್ಟಿ ಬೆಳೆಸಿಕೊಂಡನು. ಇಲ್ಲಿರುವಾಗ ಘನಗಳಲ್ಲಿ ಚೈತನ್ಯದ ವರ್ಗಾವಣೆ ಕುರಿತಾಗಿ ಸಂಶೋಧನಾ ಲೇಖನ ಪ್ರಕಟಿಸಿದನು. ಕ್ಯಾಲಿಫೊರ್ನಿಯಾ ಇನ್ಸ್ಟಿಟ್ಯೂಟ್ ಆ¥sóï ಟೆಕ್ನಾಲಜಿಯಲ್ಲಿ ರಸಾಯನ ವಿಭಾಗದ ಪ್ರಾಧ್ಯಾಪಕನಾದ ಅಹ್ಮದ್ ಗತಿಶೀಲ ರಸಾಯನಶಾಸ್ತ್ರ, ಜೀವಶಾಸ್ತ್ರದಲ್ಲಿನ ಸಮಸ್ಯೆಗಳ ಅಧ್ಯಯನ ಕೈಗೊಂಡನು. ನಾಲ್ಕೂ ಆಯಾಮದ ಅತಿ ಕ್ಷಿಪ್ರ ವಿವರ್ತನ ಹಾಗೂ ಸೂಕ್ಷ್ಮ ದರ್ಶಕ ಶಾಸ್ತ್ರದ ಅಭಿವೃದ್ಧಿಯಲ್ಲಿ ಶ್ರಮಿಸಿದನು. ಈ ವಿಧಾನದಿಂದ ಅಣ್ವಯಿಕ ಮಟ್ಟದಲ್ಲಿ ಸ್ಥಿತ್ಯಂತರದಲ್ಲಿರುವ ಅಣು ರಚನೆಗಳನ್ನು ಅರಿಯುವುದು ಸಾಧ್ಯವಾಯಿತು. ಇದಕ್ಕಾಗಿ 1999ರಲ್ಲಿ ಅಹ್ಮದ್ ರಸಾಯನಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 5/29/2020