ಹೆನ್ರಿ, ಟೌಬೆ (1915--)
ಕೆನಡಾ-ರಸಾಯನಶಾಸ್ತ್ರ- ಓಸ್ಮಿಯಂ, ರುಥೇನಿಯಂ ಧಾತುಗಳನ್ನು ಕುರಿತಾಗಿ ವಿಸ್ತೃತ ಅಧ್ಯಯನ ನಡೆಸಿದಾತ.
ಹೆನ್ರಿ ಕೆನಡಾದ ಸಾಸ್ಕಾಷೆವೆನ್ ಪ್ರಾಂತ್ಯದ ನ್ಯೂಡ್¥sóರ್ïನಲ್ಲಿ 1915ರಂದು ಜನಿಸಿದನು. 1935ರಲ್ಲಿ ಸಾಸ್ಕಾಷೆವೆನ್ ವಿಶ್ವವಿದ್ಯಾಲಯದಿಂದ ಪದವಿ 1937ರಲ್ಲಿ ಸ್ನಾತಕೋತ್ತರ ಪದವಿ, 1940ರಲ್ಲಿ ಅಸಂಸಂಗಳ ಬಕ್ರ್ಲೆಯಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದನು. 1942ರಲ್ಲಿ ಅಸಂಸಂಗಳ ಪ್ರಜೆಯಾದನು. ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಂiÀiದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ 1941ರಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ಹೆನ್ರಿ 1956ರಲ್ಲಿ ಚಿಕಾಗೋ ಹಾಗೂ 1972ರಲ್ಲಿ ಸ್ಟ್ಯಾನ್¥sóÉÇೀರ್ಡ್ ವಿಶ್ವವಿದ್ಯಾಲಯಗಳ ರಸಾಯನಶಾಸ್ತ್ರ ವಿಭಾಗದ ಕಾರ್ಯದರ್ಶಿಯಾಗಿದ್ದನು. ಲಿಗ್ಯಾಂಡ್‍ಗಳ ಪ್ರತಿ ಕ್ರಿಯಾಶೀಲತೆ ಹಾಗೂ ಅವುಗಳ ಗುಣಗಳ ಮೇಲೆ ಪ್ರಭಾವ ಬೀರುವ ಆವಿಷ್ಟ ವರ್ಗಾವಣೆಗಳ ಬಗೆಗೆ ಹೆನ್ರಿ ಗಮನಾರ್ಹ ಸಂಶೋಧನೆ ನಡೆಸಿದ್ದಾನೆ. ಓಸ್ಮಿಯಂ, ರುಥೇನಿಯಂ ಧಾತುಗಳ ಮೂಲ ರಾಸಾಯನಿಕ ಸ್ವಭಾವಗಳ ಬಗೆಗೆ ಅಧ್ಯಯನ ನಡೆಸಿದ್ದಾನೆ. ಹೆನ್ರಿ 1983ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019