ಹಾರ್ಟ್‍ಮಟ್, ಮೈಖೆಲ್ (1948--)
ಜರ್ಮನಿ-ಜೀವರಸಾಯನಶಾಸ್ತ್ರ-ಕೋಶಪೆÇರೆಯ ಪ್ರೋಟಿನ್ ಪ್ರತ್ಯೇಕಿಸಿದಾತ.
ಮೈಖೇಲ್ 18 ಜುಲೈ 1948ರಂದು ಲುಡ್‍ವಿಗ್ಸ್‍ಬರ್ಗ್‍ನಲ್ಲಿ ಜನಿಸಿದನು. ಇವರದು ರೈತ ಕುಟುಂಬ. ಪರಂಪರೆಯಿಂದ ಬಂದಿದ್ದ ಹೊಲ ಗದ್ದೆಗಳು ಆಸ್ತಿ ಹಂಚಿಕೆಯಿಂದಾಗಿ ಕುಗ್ಗಿ ಮೈಖೇಲ್ ತಂದೆಗೆ ಅಂಗೈ ಅಗಲದ ಕೃಷಿ ಜಾಗ ದಕ್ಕಿದ್ದಿತು. ಆದ್ದರಿಂದ ಮೈಖೆಲ್ ತಂದೆ ಬಡಗಿಯಾಗಿ, ತಾಯಿ ಬಟ್ಟೆ ಹೊಲಿದು ಜೀವನ ಸಾಗಿಸುತ್ತಿದ್ದರು. ಮೈಖೇಲ್ ಬಾಲಕನಾಗಿದ್ದಾಗ ಸಂಗಡಿಗರೊಂದಿಗೆ ಹಣ್ಣು , ತರಕಾರಿ ಕದಿಯಲು ನೆರೆ ಹೊರೆಯ ತೋಟಗಳಿಗೆ ನುಗ್ಗಿ ದಂಡನೆಗೊಳಗಾಗುತ್ತಿದ್ದನು. ಸ್ಥಳೀಯ ಗ್ರಂಥಾಲಯದ ಸದಸ್ಯನಾದ ಮೈಖೇಲ್ ರಜಾದ ಅಧಿಕ ಸಮಯವನ್ನು ನಾನಾ ಬಗೆಯ ವೈವಿಧ್ಯಮಯ ಕೃತಿಗಳನ್ನು ಓದುತ್ತಾ ಕಳೆಯುತ್ತಿದ್ದನು. ಕಡ್ಡಾಯವಾಗಿದ್ದ ಮಿಲಿಟರಿ ತರಬೇತಿ ಪೂರ್ಣಗೊಳಿಸಿ 1969ರಲ್ಲಿ ಟುಬಿಂಜೆನ್ ವಿಶ್ವವಿದ್ಯಾಲಯದಲ್ಲಿ ಜೀವರಸಾಯನಶಾಸ್ತ್ರದ ಪದವಿ ತರಗತಿಗೆ ಸೇರಿದನು. ಡೈಟೆರ್ ಓಯಿಸ್ಟರ್‍ಹೆಲ್ಟ್ ವಾಲ್ಟರ್ ಸ್ಟಾಕೆನಿಯಸ್ ಸಹಕಾರದೊಂದಿಗೆ ಹಾಲೋ ಬ್ಯಾಕ್ಟೀರಿಯಾಗಳಲ್ಲಿರುವ ಬ್ಯಾಕ್ಟಿರಿಯೇರೋಡೋಪ್ಸಿನ್ ಅನಾವರಣಗೊಳಿಸಿದ್ದರು. ಇದು ದ್ಯುತಿ ಚಾಲಿತ ಪಂಪ್‍ನಂತೆ ಕೆಲಸ ಮಾಡುವುದೆಂದು ತಿಳಿಸಿದ ಪೀಟರ್ ಮಿಷೆಲ್ ರಸಕಾಯ ಸಿದ್ಧಾಂತದಿಂದ ವಿವರಿಸಿದ್ದನು. 1975ರಲ್ಲಿ ಡೈಟೆರ್ ಓಯಿಸ್ಟರ್‍ಹೆಲ್ಟ್‍ನೊಂದಿಗೆ ವುರ್ಜ್‍ಬರ್ಗ್‍ಗೆ ಹೋದ ಮೈಖೇಲ್, ಹ್ಯಾಲೋ ಬ್ಯಾಕ್ಟೀರಿಯಾಗಳ ಕೋಶಾಂತರದಲ್ಲಿನ ಅಡೆನೋಸೈನ್, ಡೈ ಟ್ರೈ ಫಾಸ್ಫೇಟ್‍ಗಳ ಮಟ್ಟಗಳನ್ನು ವೈದ್ಯುತ್ ರಾಸಾಯನಿಕ ಪ್ರೋಟೀನ್ ಸಾಂದ್ರತೆಯೊಂದಿಗೆ ಸಮೀಕರಿಸಿದನು. 1977ರಲ್ಲಿ ಡಾಕ್ಟರೇಟ್ ಗಳಿಸಿದ ಮೈಖೇಲ್ ಬ್ಯಾಕ್ಟೀರಿಯಾ ರೋಡೋಫಿûನ್‍ನಂತೆಯೇ ಕೋಶ ಪೆÇರೆಯ ಪೆÇ್ರೀಟೀನ್‍ಗಳನ್ನು ಹರಳು ರೂಪದಲ್ಲಿ ಪಡೆಯಬಹುದೆಂದು ತೋರಿಸಿದನು. ಆವರೆಗೆ ಇದು ಆಸಾಧ್ಯವೆಂದೇ ವಿಜ್ಞಾನಿಗಳು ಭಾವಿಸಿದ್ದರು. ಆದರೆ ಮೊದಲಿಗೆ ಇದನ್ನು ಹರಳು ರೂಪದಲ್ಲಿ ಬೇರ್ಪಡಿಸುವುದು ಸಾಧ್ಯವಾಗಲಿಲ್ಲ. 1981ರಲ್ಲಿ ಜೊಹಾನ್ ಡೈಸೆನ್‍ಹೋ¥sóÀರ್ ಜೊತೆಗೂಡಿ ಬೇರೆ ಬಗೆಯ ಕೋಶಪೆÇರೆಯ ಪ್ರೋಟೀನ್‍ಗಳನ್ನು ಹರಳು ರೂಪದಲ್ಲಿ ಪ್ರತ್ಯೇಕಿಸಲು ಯತ್ನಿಸಿದನು. ಇದಕ್ಕಾಗಿ ರೋಡೋಸೊಡೋಮೊನಾಸ್ ವಿರಿಡಿಸ್ ಎಂಬ ಬ್ಯಾಕ್ಟೀರಿಯಾವನ್ನು ಇವರು ಆಯ್ದುಕೊಂಡರು. ಇದು ದ್ಯುತಿ ಸಂಶ್ಲೇಷಣೆಯ ಕೇಂದ್ರವೆಂದು ದಾಖಲಾಗಿದೆ. 1983ರಲ್ಲಿ ಹಾರ್ಟ್‍ಮಟ್, ಡೈಯಟರ್ ಓಯಿಸ್ಟರ್ ಹೆಲ್ಟ್ ಹಾಗೂ ಮೈಖೇಲ್ ಇದರ ಹರಳುಗಳನ್ನು ಪಡೆದರು. ಇದಕ್ಕಾಗಿ ಇವರಿಗೆ 1988ರ ನೊಬೆಲ್ ಪ್ರಶಸ್ತಿ ದಕ್ಕಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/9/2019