ಹರ್ಬರ್ಟ್ , ಆ್ಯರನ್ ಹಾಪ್ಟ್ಮನ್ (1917--)
ಅಸಂಸಂ-ಭೌತಶಾಸ್ತ್ರ-ಜೈವಿಕ ಅಣುಗಳ ರಾಚನಿಕ ಸ್ವರೂಪ ನಿರ್ಧರಿಸುವ ವಿಧಾನ ರೂಪಿಸಿದಾತ.
ಹಾಫ್ಟ್ಮನ್, 1937ರಲ್ಲಿ ನ್ಯೂಯಾರ್ಕ್ ಸಿಟಿ ಕಾಲೇಜ್‍ನಿಂದ ಸ್ನಾತಕೋತ್ತರ ಪದವಿ ಗಳಿಸಿದನು. ಇದಾದ ನಂತರ ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿ ಗಣಿತದಲ್ಲಿ ಉನ್ನತ ಶಿಕ್ಷಣ ಪಡೆದನು. ಇದನ್ನು ಮುಗಿಸಿ ವಾಷಿಂಗ್ಟನ್ ಡಿ.ಸಿ ಯಲ್ಲಿರುವ ,ನೌಕಾದಳದ ಸಂಶೋಧನಾಲಯ ಸೇರಿ ಅಲ್ಲಿ ಸ್ಪಟಿಕಗಳ ರಾಚನಿಕ ಸ್ವರೂಪದ ಬಗೆಗೆ ಹಲವಾರು ಪ್ರಯೋಗಗಳನ್ನು ನಡೆಸಿದನು. 1970ರಲ್ಲಿ ಬಫೆಲೋದ ಸ್ಟೇಟ್ ಯೂನಿವರ್ಸಿಟಿ ಆಫ್ನ್ಯೂಯಾರ್ಕ್‍ನಲ್ಲಿ ಜೀವ ಭೌತಶಾಸ್ತ್ರದ ವಿಭಾಗದಲ್ಲಿ ಪ್ರಾಧ್ಯಾಪಕನಾದನು.ಕ್ಷ ಕಿರಣಗಳ ಪಥವನ್ನು ಸ್ಪಟಿಕಗಳು ವಿಮುಖಗೊಳಿಸುತ್ತವೆ, ಇಂತಹ ವಿಮುಖತೆಯನ್ನು ನಿರ್ಧರಿಸಲು ನೆರವಾಗುವ ಸೂತ್ರಗಳನ್ನು ಹಾಫ್ಟ್ಮನ್, ಕಾರ್ಲೆಯೊಂದಿಗೆ ನೀಡಿದನು. ಇದು ಸ್ಪಟಿಕಗಳ ಅಣುವಿನಲ್ಲಿರುವ ಪರಮಾಣುಗಳ ಸ್ಥಾನವನ್ನು ನಿರ್ಧರಿಸಲು ನೆರವಾಯಿತು. ಇದಕÁಗಿ ಹಾಫ್ಟ್ಟಮನ್ ಪ್ರಯೋಗದ ಮಾರ್ಗಗಳನ್ನು ಸಹ ಸೂಚಿಸಿದನು. ಇದು 1947 ರಲ್ಲಿ ಪ್ರಕಟವಾಗಿ ಹಾಫ್ಟ್ಮನ್ ವಿಧಾನವೆಂದು ಹೆಸರಾಯಿತು. ಇದನ್ನು ಬಳಸಿ ಪ್ರೋಟಿನ್, ಚೋದನಿಕೆ (Hormone) , ಪ್ರತಿಜೈವಿಕಗಳಂತಹ (Antibiotics) ನೂರಾರು ಸಾವಯವ ಜೈವಿಕ ಮೂಲದ ಸಂಕೀರ್ಣ ಅಣುಗಳ ರಚನೆಯನ್ನು ಮೂರು ಆಯಾಮಗಳಲ್ಲಿ ತಿಳಿಯುವುದು ಸುಲಭವಾಯಿತು. ಇದಕ್ಕಿಂತ ಮೊದಲು ಬಹು ಸರಳವಾದ ಜೈವಿಕ ಅಣುವಿನ ರಚನೆಯನ್ನು ನಿಷ್ಕರ್ಷಿಸಲು ಸಹ ಎರಡು ಮೂರು ವರ್ಷಗಳಷ್ಟು ದೀರ್ಘಾವಧಿ ಬೇಕಾಗಿದ್ದಿತು. ಗಣಕಗಳು, ಸುಕ್ಲಿಷ್ಟ ಉಪಕರಣಗಳು ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಉಪಜ್ಞೆಗೊಂಡು, ಅಣುಗಳ ರಚನೆಯ ನಿರ್ಧಾರದ ವಿಧಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾದವು. ಅಲ್ಲಿಯ ತನಕ ಹಾಫ್ಟ್ಮನ್-ಕಾರ್ಲೆ ವಿಧಾನವೊಂದೇ ಲಭ್ಯವಿದ್ದಿತು. ಅಣುಗಳ ರಚನೆ ನಿರ್ಧಾರಕ್ಕೆ ಗಣಿತದ ಸೂತ್ರಗಳನ್ನು ನೀಡಿದ ಸಾಧನೆಗಾಗಿ ಹಾ¥sóï್ಟಮನ್, 1985ರಲ್ಲಿ ಕಾರ್ಲೆಯೊಂದಿಗೆ ನೊಬೆಲ್ ಪ್ರಶಸ್ತಿ ಪಾತ್ರನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/17/2019