ಬ್ರೂಸ್, ಮೆರಿಫೀಲ್ಡ್ (ರಾಬರ್ಟ್) –(1911--) -೧೯೮೪
ಅಸಂಸಂ-ರಸಾಯನಶಾಸ್ತ್ರ-ಪೆಪ್ಟೈಡ್ ಸಂಶ್ಲೇಷಣೆ, ಘನ ಪ್ರಾವಸ್ಥೆಯ ಸಂಶ್ಲೇಷನೆಯಲ್ಲಿ ಪರಿಶ್ರಮಿಸಿದಾತ.
ಬ್ರೂಸ್ 15 ಜುಲೈ 1921ರಂದು ಟೆಕ್ಸಾಸ್‍ನ ಪೋರ್ಟ್ವರ್ಥ್ ಪಟ್ಟಣದಲ್ಲಿ ಜನಿಸಿದನು. 1923ರಲ್ಲಿ ಈತನ ತಂದೆ ಕ್ಯಾಲಿಫೊರ್ನಿಯಾದಲ್ಲಿ ನೆಲೆಸಲು ನಿರ್ಧರಿಸಿದನು. ಕ್ಯಾಲಿಫೊರ್ನಿಯಾಗೆ ಹೋಗಿ ನೆಲೆಸುವ ಮುಂಚೆ ಹಲವಾರು ಊರುಗಳಲ್ಲಿ ನೆಲೆಸಿದ್ದನು. ಹೀಗಾಗಿ ಬ್ರೂಸ್, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಒಂಬತ್ತು, ಹಾಗೂ ಪ್ರೌಢಶಿಕ್ಷಣವನ್ನು ಎರಡು ಶಾಲೆಗಳಲ್ಲಿ ಪೂರ್ಣಗೊಳಿಸಿದನು. ಪ್ರೌಢಶಾಲೆಯಲ್ಲಿರುವಾಗ ರಸಾಯನಶಾಸ್ತ್ರದಲ್ಲಿ ಖಗೋಳಶಾಸ್ತ್ರಗಳಲ್ಲಿ ಕುತೂಹಲ ಹೊಂದಿದನು. ತಾನೇ ಚಿಕ್ಕದಾದ ದೂರದರ್ಶಕವನ್ನು ತಯಾರಿಸಿಕೊಂಡಿದ್ದನು.ಕ್ಯಾಲಿಫೊರ್ನಿಯಾ“ವಿಶ್ವವಿದ್ಯಾಲಯದಿಂದ ಪದವಿ ಪಡೆದು ಫಿûಲಿ¥sóï ಆರ್.ಪಾರ್ಕ್ ಸಂಶೋಧನಾ ಪ್ರತಿಷ್ಟಾನದಲ್ಲಿ ಕೆಲಸಕ್ಕೆ ಸೇರಿದನು. ಇಲ್ಲಿ ಸಂಶ್ಲೇಷಿತ ಅಮೈನೋ ಆಮ್ಲಗಳು ಪ್ರಾಣಿಗಳ ಬೆಳವಣಿಗೆಯ ಮೇಲೆ ಬೀರುವ ಪರಿಣಾಮಗಳನ್ನು ಅಭ್ಯಸಿಸಿದನು. ಈ ಕೆಲಸ ತೊರೆದು ಮತ್ತೊಮ್ಮೆ ಕಾಲೇಜಿನ ಮೆಟ್ಟಿಲು ಹತ್ತಿರ ಬ್ರೂಸ್ ಪಿರಮಿಡಿನ್‍ಗಳ ಪರಿಮಾಣ ವಿಶ್ಲೇಷಿಸಿ 1949ರಲ್ಲಿ ಹೆಚ್ಚುವರಿ ಪದವಿ ಪಡೆದನು. ನಂತರ ರಾಕ್ಪ್ರಫೆಲರ್ ವಿಶ್ವವಿದ್ಯಾಲಯದಲ್ಲಿ ಡಿ.ಡಬ್ಲ್ಯೂ ವೂಲಿಯ ಸಹಾಯಕನಾಗಿ ಕೆಲಸ ಮಾಡಿದನು. ಇದರಿಂದ ಪೆಪ್ಟೈಡ್ ಸಂಶ್ಲೇಷಣೆ, ಘನ ಪ್ರಾವಸ್ಥೆಯ ಸಂಶ್ಲೇಷನೆ 1959ರಲ್ಲಿ ಸಾಧ್ಯವಾಯಿತು. ಘನ ಮೃತ್ತಿಕೆಯ ರಾಸಾಯನಿಕ ಸಂಶ್ಲೇಷನೆ ನಡೆಸುವ ವಿಧಾನದ ಅಭಿವೃದ್ಧಿಗಾಗಿ ಬ್ರೂಸ್ 1984ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019